ತಿಂಗಳಲ್ಲಿ 14ನೇ ಬಾರಿ ತೈಲ ಬೆಲೆ ಏರಿಕೆ: ಮತ್ತಷ್ಟು ನಗರಗಳಲ್ಲಿ ಪೆಟ್ರೋಲ್ ಬೆಲೆ ಸೆಂಚುರಿ

ಜೂನ್ ತಿಂಗಳಲ್ಲಿ 14ನೇ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆಯಾಗಿದೆ. ದಿಲ್ಲಿಯಲ್ಲಿ ಇಂಧನ ದರ 35 ಪೈಸೆ ತುಟ್ಟಿಯಾಗಿದ್ದು, ಮತ್ತಷ್ಟು ನಗರಗಳಲ್ಲಿ ನೂರರ ಗಡಿ ದಾಟಿದೆ.

ತಿಂಗಳಲ್ಲಿ 14ನೇ ಬಾರಿ ತೈಲ ಬೆಲೆ ಏರಿಕೆ: ಮತ್ತಷ್ಟು ನಗರಗಳಲ್ಲಿ ಪೆಟ್ರೋಲ್ ಬೆಲೆ ಸೆಂಚುರಿ
Linkup
ಹೊಸದಿಲ್ಲಿ: ದೇಶಾದ್ಯಂತ ದಾಖಲೆಯ ಮಟ್ಟದ ಏರಿಕೆಯಾಗುವುದನ್ನು ಮುಂದುವರಿಸಿದೆ. ಈ ತಿಂಗಳಲ್ಲಿ 14ನೇ ಬಾರಿ ಮತ್ತು ದರ ಏರಿಕೆ ಕಂಡಿದೆ. ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಎರಡೂ ತಲಾ 35 ಪೈಸೆಯಷ್ಟು ತುಟ್ಟಿಯಾಗಿದೆ. ಶನಿವಾರದ ಏರಿಕೆಯೊಂದಿಗೆ ಈಗಾಗಲೇ ಶತಕ ಸಾಧನೆ ಮಾಡಿರುವ ಮುಂಬಯಿ, , ಭೋಪಾಲ್, ಜೈಪುರದಂತಹ ರಾಜ್ಯ ರಾಜಧಾನಿಗಳು ಹಾಗೂ ಇತರೆ ನಗರಗಳ ಪಟ್ಟಿಗೆ ಮತ್ತಷ್ಟು ನಗರಗಳು ಸೇರ್ಪಡೆಯಾಗಿವೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಶತಕದಂಚಿನಲ್ಲಿದೆ. ಶನಿವಾರದ ದರ ಹೆಚ್ಚಳದೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ದರ 98.11 ರೂಪಾಯಿಗೆ ಮುಟ್ಟಿದ್ದರೆ, ಡೀಸೆಲ್ ಬೆಲೆ 88.65 ರೂಪಾಯಿ ಆಗಿದೆ. ಇನ್ನು ಮುಂಬೈನಲ್ಲಿ ಪೆಟ್ರೋಲ್ ಬೆಲೆ 104.22 ರೂ.ಗೆ ಏರಿಕೆಯಾಗಿದ್ದರೆ, ಡೀಸೆಲ್ ದರ ಲೀಟರ್‌ಗೆ 96.16 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ ಶುಕ್ರವಾರ ಸ್ಥಿರವಾಗಿದ್ದ ತೈಲ ಬೆಲೆ ಶನಿವಾರ ಮತ್ತೆ ಏರಿಕೆಯ ಹಾದಿ ಕಂಡಿದೆ. ಪೆಟ್ರೋಲ್ ದರ ಲೀಟರ್‌ಗೆ 36 ಪೈಸೆ ತುಟ್ಟಿಯಾಗಿದ್ದು, ಒಂದು ಲೀಟರ್‌ಗೆ 101.39 ಪೈಸೆ ಇದೆ. ಇನ್ನು ಡೀಸೆಲ್ ದರ 38 ಪೈಸೆಯಷ್ಟು ಹಿಗ್ಗಿದೆ. ಒಂದು ಲೀಟರ್ ಡೀಸೆಲ್ ಬೆಲೆ 93.99 ರೂಪಾಯಿ ಆಗಿದೆ. ನೂರರ ಗಡಿಯಲ್ಲಿದ್ದ ವಿಹಾರ ರಾಜಧಾನಿ ಪಟ್ನಾದಲ್ಲಿ ಪೆಟ್ರೋಲ್ ಸೆಂಚುರಿ ಬಾರಿಸಿದೆ. ಅಲ್ಲಿ ಪೆಟ್ರೋಲ್ ದರ ಲೀಟರ್‌ಗೆ 100.14 ರೂ ಆಗಿದೆ. ಕೇರಳ ರಾಜಧಾನಿ ತಿರುವನಂತಪುರಂ ಕೂಡ 100ರ ಗಡಿ ದಾಟಿದ್ದು, 100.09 ರೂಪಾಯಿ ಆಗಿದೆ.