ಕಾರು, ವೈಯಕ್ತಿಕ ಸಾಲಗಳ ಮೇಲೆ ಬಂಪರ್‌ ಕೊಡುಗೆಗಳನ್ನು ಪ್ರಕಟಿಸಿದ ಸ್ಟೇಟ್‌ ಬ್ಯಾಂಕ್‌

ಹಬ್ಬಗಳ ಸೀಸನ್‌ ಪ್ರಯುಕ್ತ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ರಿಟೇಲ್‌ ಗ್ರಾಹಕರಿಗೆ ಹಲವು ಕೊಡುಗೆಗಳನ್ನು ಪ್ರಕಟಿಸಿದ್ದು, ಕಾರು ಸಾಲ ಮತ್ತು ವೈಯಕ್ತಿಕ ಸಾಲಗಳಿಗೆ ಶೇ. 100ರಷ್ಟು ಸಂಸ್ಕರಣೆ ಶುಲ್ಕ ಮನ್ನಾ ಮಾಡಿದೆ.

ಕಾರು, ವೈಯಕ್ತಿಕ ಸಾಲಗಳ ಮೇಲೆ ಬಂಪರ್‌ ಕೊಡುಗೆಗಳನ್ನು ಪ್ರಕಟಿಸಿದ ಸ್ಟೇಟ್‌ ಬ್ಯಾಂಕ್‌
Linkup
ಹೊಸದಿಲ್ಲಿ: ಹಬ್ಬಗಳ ಸೀಸನ್‌ ಪ್ರಯುಕ್ತ ಸಾರ್ವಜನಿಕ ವಲಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ () ತನ್ನ ರಿಟೇಲ್‌ ಗ್ರಾಹಕರಿಗೆ ಹಲವು ಕೊಡುಗೆಗಳನ್ನು ಪ್ರಕಟಿಸಿದೆ. ಬ್ಯಾಂಕ್‌ ತನ್ನ ಕಾರು ಸಾಲಗಳಿಗೆ ಶೇ. 100ರಷ್ಟು ಸಂಸ್ಕರಣೆ ಶುಲ್ಕ ಮನ್ನಾ ಮಾಡಿದೆ. ಗ್ರಾಹಕರು ತಮ್ಮ ಕಾರು ಸಾಲಗಳಲ್ಲಿ ಶೇ. 90ರಷ್ಟು ಮೌಲ್ಯಕ್ಕೆ ಸಾಲ ಸೌಲಭ್ಯವನ್ನು ಪಡೆಯಬಹುದು ಎಂದೂ ಬ್ಯಾಂಕ್‌ ತಿಳಿಸಿದೆ. ಯುನೋ ಆ್ಯಪ್‌ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸುವವರಿಗೆ ಹೆಚ್ಚುವರಿ ಶೇ.0.25ರಷ್ಟು ಬಡ್ಡಿ ರಿಯಾಯಿತಿ ಸಿಗಲಿದೆ. ಯುನೋ ಗ್ರಾಹಕರು ವಾರ್ಷಿಕ ಶೇ. 7.5ರ ಬಡ್ಡಿಗೆ ಕಾರು ಸಾಲ ಪಡೆಯಲಿದ್ದಾರೆ ಎಂದು ಬ್ಯಾಂಕ್‌ ಹೇಳಿದೆ. ವೈಯಕ್ತಿಕ ಸಾಲ ಮತ್ತು ಪಿಂಚಣಿ ಸಾಲ ಪಡೆಯುವವರಿಗೆ ಸಂಸ್ಕರಣೆ ಶುಲ್ಕ ಶೇ.100ರಷ್ಟು ಮನ್ನಾ ಮಾಡಲಾಗಿದೆ. ಕಳೆದ ತಿಂಗಳು ಬ್ಯಾಂಕ್‌ ಗೃಹ ಸಾಲಕ್ಕೆ ಆಗಸ್ಟ್‌ 31ರ ತನಕ ಶೇ.100 ಸಂಸ್ಕರಣೆ ಶುಲ್ಕ ಮನ್ನಾ ಘೋಷಿಸಿತ್ತು. ಬ್ಯಾಂಕಿನಲ್ಲಿ ಗೃಹ ಸಾಲದ ಬಡ್ಡಿ ದರ ಶೇ. 6.70ರಿಂದ ಆರಂಭವಾಗುತ್ತದೆ.