ಲಕ್ಷದ್ವೀಪ ಆಡಳಿತಾಧಿಕಾರಿ ವಾಪಸ್‌ಗೆ ಹೆಚ್ಚಿದ ಒತ್ತಡ, ರಾಷ್ಟ್ರಪತಿಗೆ ಕಾಂಗ್ರೆಸ್‌ ಪತ್ರ

ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ ಭಾರಿ ವಿರೋಧಕ್ಕೆ ಗುರಿಯಾಗಿರುವ ವಿವಾದಿತ ಆಡಳಿತಾಧಿಕಾರಿ ಪ್ರಫುಲ್‌ ಪಟೇಲ್‌ ಅವರನ್ನು ವಾಪಸ್‌ ಕರೆಸಿಕೊಳ್ಳಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದ್ದು, ಈ ಸಂಬಂಧ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಗೆ ಪತ್ರವನ್ನೂ ಬರೆದಿದೆ.

ಲಕ್ಷದ್ವೀಪ ಆಡಳಿತಾಧಿಕಾರಿ ವಾಪಸ್‌ಗೆ ಹೆಚ್ಚಿದ ಒತ್ತಡ, ರಾಷ್ಟ್ರಪತಿಗೆ ಕಾಂಗ್ರೆಸ್‌ ಪತ್ರ
Linkup
ಲಕ್ಷದ್ವೀಪ: ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದ ಆಡಳಿತಾಧಿಕಾರಿಯನ್ನು ವಾಪಸ್‌ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದೆ. ಈ ಸಂಬಂಧ ಪಕ್ಷವು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಗೆ ಪತ್ರ ಬರೆದಿದೆ. ತಮಿಳುನಾಡಿನಲ್ಲಿರುವ ಪಕ್ಷದ ಸಂಸದರು ಇದೇ ವಿಚಾರವಾಗಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಇನ್ನೊಂದೆಡೆ ವರ್ಚುವಲ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ವಕ್ತಾರ ಅಜಯ್‌ ಮಾಕೇನ್‌ ಅವರು, "ಲಕ್ಷದ್ವೀಪದಲ್ಲಿನ ಶಾಂತಿ ಮತ್ತು ಸಂಸ್ಕೃತಿಯನ್ನು ಆಡಳಿತಾಧಿಕಾರಿ ನಿರ್ನಾಮ ಮಾಡುತ್ತಿದ್ದಾರೆ. ಸಮಾಜಘಾತುಕ ಚಟುವಟಿಕೆ ತಡೆ ಕಾಯಿದೆಯಂತಹ ಕಾಯಿದೆಗಳ ಮೂಲಕ ಜನರನ್ನು ವಿನಾಕಾರಣ ಹಿಂಸಿಸುತ್ತಿದ್ದಾರೆ. ಪಂಚಾಯಿತಿ ಅಧಿಕಾರವನ್ನು ಹಿಂಪಡೆದಿದ್ದಾರೆ. ಮೀನುಗಾರರ ಮನೆಗಳನ್ನು ಧ್ವಂಸ ಮಾಡುತ್ತಿದ್ದಾರೆ. ಹೀಗಾಗಿ ರಾಷ್ಟ್ರಪತಿಯವರು ಆಡಳಿತಾಧಿಕಾರಿಯನ್ನು ತಕ್ಷಣ ವಾಪಸ್‌ ಕರೆಸಿಕೊಳ್ಳಬೇಕು,'' ಎಂದು ಆಗ್ರಹಿಸಿದರು. ಗುಜರಾತ್‌ ನಂಟು"ಪ್ರಫುಲ್‌ ಪಟೇಲ್‌ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇಮಕ ಮಾಡಿದ್ದಾರೆ. ಪಟೇಲ್‌ ಗುಜರಾತ್‌ನ ಮಾಜಿ ಗೃಹ ಸಚಿವರಾಗಿದ್ದಾರೆ. ಸಾಮಾನ್ಯವಾಗಿ ಆಡಳಿತಾಧಿಕಾರಿಯಾಗಿ ಹಾಲಿ ಅಥವಾ ಮಾಜಿ ಅಧಿಕಾರಿಗಳನ್ನು ನೇಮಕ ಮಾಡುವುದು ವಾಡಿಕೆ. ಆದರೆ ಮೊದಲ ಬಾರಿ ಸಂಪ್ರದಾಯ ಮುರಿದು ರಾಜಕಾರಣಿಯನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ,'' ಎಂದು ಮಾಕೇನ್‌ ಆರೋಪಿಸಿದರು.