ಪತಿ ಜತೆ ವಿಡಿಯೋ ಕಾಲ್‌ನಲ್ಲಿ ಮಾತಾಡುವಾಗ ಇಸ್ರೇಲ್‌ನಲ್ಲಿ ರಾಕೆಟ್ ದಾಳಿಗೆ ಕೇರಳ ಮಹಿಳೆ ಬಲಿ

ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ಉಗ್ರರ ನಡುವಿನ ಕಾದಾಟ ಮತ್ತೆ ಭುಗಿಲೆದ್ದಿದ್ದು, ಮಂಗಳವಾರ ನಡೆದ ವೈಮಾನಿಕ ದಾಳಿಗಳ ವೇಳೆ ಇಸ್ರೇಲ್‌ನಲ್ಲಿ ವಾಸವಿದ್ದ ಕೇರಳದ ಮಹಿಳೆಯೊಬ್ಬರು ಪ್ಯಾಲೆಸ್ತೇನ್ ರಾಕೆಟ್ ದಾಳಿಗೆ ಬಲಿಯಾಗಿದ್ದಾರೆ.

ಪತಿ ಜತೆ ವಿಡಿಯೋ ಕಾಲ್‌ನಲ್ಲಿ ಮಾತಾಡುವಾಗ ಇಸ್ರೇಲ್‌ನಲ್ಲಿ ರಾಕೆಟ್ ದಾಳಿಗೆ ಕೇರಳ ಮಹಿಳೆ ಬಲಿ
Linkup
ಇಡುಕ್ಕಿ: ಮತ್ತು ಪ್ಯಾಲೆಸ್ತೇನ್‌ನ ಹಮಾಸ್ ಬಂಡುಕೋರರ ನಡುವೆ ಮಂಗಳವಾರ ನಡೆದ ವೈಮಾನಿಕ ಕದನದಲ್ಲಿ ಗಾಜಾದಲ್ಲಿ ಕನಿಷ್ಠ 35 ಮಂದಿ ಹಾಗೂ ಇಸ್ರೇಲ್‌ನಲ್ಲಿ ಐವರು ಮೃತಪಟ್ಟಿದ್ದಾರೆ. ಪ್ಯಾಲೆಸ್ತೇನ್‌ನ ಅಪ್ಪಳಿಸಿದ ಪರಿಣಾಮ, ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. 31 ವರ್ಷದ ಸೌಮ್ಯ ಅವರು ಆಶ್ಕೆಲಾನ್‌ನಲ್ಲಿ ನೆಲೆಸಿದ್ದ ನಿವಾಸದ ಮೇಲೆ ಪ್ಯಾಲೆಸ್ತೇನ್‌ನ ರಾಕೆಟ್ ಬಿದ್ದಿದೆ. ಸಂಜೆ ವೇಳೆ ಅವರು ಕೇರಳದಲ್ಲಿರುವ ಪತಿ ಸಂತೋಷ್ ಜತೆ ವಿಡಿಯೋ ಕಾಲ್‌ನಲ್ಲಿ ಮಾತನಾಡುವಾಗಲೇ ಈ ಅವಘಡ ಸಂಭವಿಸಿದೆ. 'ವಿಡಿಯೋ ಕಾಲ್‌ನಲ್ಲಿ ಮಾತನಾಡುವಾಗ ನನ್ನ ಸಹೋದರನಿಗೆ ಭಾರಿ ಸದ್ದು ಕೇಳಿಸಿತು. ಕೂಡಲೇ ಫೋನ್ ಸಂಪರ್ಕ ಕಡಿದುಹೋಯ್ತು. ತಕ್ಷಣವೇ ನಾವು ಅಲ್ಲಿ ಕೆಲಸ ಮಾಡುತ್ತಿರುವ ಮಲೆಯಾಳಿಗಳನ್ನು ಸಂಪರ್ಕಿಸಿದೆವು. ಹೀಗೆ ನಮಗೆ ಈ ಘಟನೆಯ ಬಗ್ಗೆ ಗೊತ್ತಾಯಿತು' ಎಂದು ಸಂತೋಷ್ ಸಹೋದರ ಸಾಜಿ ತಿಳಿಸಿದ್ದಾರೆ. ಇಡುಕ್ಕಿ ಜಿಲ್ಲೆಯ ಕೀರಿಥೊಡು ಮೂಲದವರಾದ ಸೌಮ್ಯ, ಕಳೆದ ಏಳು ವರ್ಷಗಳಿಂದ ಇಸ್ರೇಲ್‌ನಲ್ಲಿ ಮನೆಗೆಲಸದವರಾಗಿ ಕೆಲಸ ಮಾಡುತ್ತಿದ್ದರು ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ. ಬುಧವಾರ ಬೆಳಗಿನವರೆಗೂ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನೂರಾರು ವೈಮಾನಿಕ ದಾಳಿಗಳನ್ನು ನಡೆಸಿದೆ. ಇನ್ನೊಂದೆಡೆ ಪ್ಯಾಲೆಸ್ತೇನ್ ಉಗ್ರರು ಇಸ್ರೇಲಿನ ಟೆಲ್ ಅವಿವ್ ಮತ್ತು ಬೀರ್‌ಶೆಬಾಗಳ ಮೇಲೆ ಹಲವು ರಾಕೆಟ್‌ಗಳು ಹಾರಿಸಿದೆ.