Petrol, Diesel Price: ದಿಲ್ಲಿ ಮತ್ತು ಕೋಲ್ಕತಾಗಳಲ್ಲಿಯೂ ಶತಕ ಬಾರಿಸಿದ ಪೆಟ್ರೋಲ್!

ದೇಶಾದ್ಯಂತ ತೈಲ ಬೆಲೆಯಲ್ಲಿ ಮತ್ತೊಮ್ಮೆ ಏರಿಕೆಯಾಗಿದೆ. ಪೆಟ್ರೋಲ್ ದರ ದಿಲ್ಲಿ ಮತ್ತು ಕೋಲ್ಕತಾ ಮೆಟ್ರೋ ನಗರಗಳಲ್ಲಿ ಕೂಡ ಬುಧವಾರ ನೂರು ರೂಪಾಯಿ ಗಡಿದಾಟುವ ಮೂಲಕ ದಾಖಲೆ ಬರೆದಿದೆ.

Petrol, Diesel Price: ದಿಲ್ಲಿ ಮತ್ತು ಕೋಲ್ಕತಾಗಳಲ್ಲಿಯೂ ಶತಕ ಬಾರಿಸಿದ ಪೆಟ್ರೋಲ್!
Linkup
ಹೊಸದಿಲ್ಲಿ: ರಾಜಧಾನಿ ಹಾಗೂ ನಗರಗಳಲ್ಲಿ ಕೂಡ ಸೆಂಚುರಿ ಬಾರಿಸಿದೆ. ಇದರಿಂದ ದೇಶದ ನಾಲ್ಕೂ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಶತಕ ಮುಟ್ಟಿದಂತಾಗಿದೆ. ಇಳಿಕೆಯ ಯಾವ ಸೂಚನೆಯನ್ನೂ ನೀಡದ ನಾಗಾಲೋಟ ಮುಂದುವರಿದಿದೆ. ಇದರಿಂದ ದೇಶಾದ್ಯಂತ ಜನಸಾಮಾನ್ಯರು ತತ್ತರಿಸಿದ್ದು, ಎಲ್ಲಾ ವ್ಯವಹಾರಗಳೂ ಮತ್ತಷ್ಟು ದುಬಾರಿಯಾಗುತ್ತಿದೆ. ಬುಧವಾರ ಬೆಳಿಗ್ಗೆ ಪೆಟ್ರೋಲ್ ದರ ಲೀಟರ್‌ಗೆ 35 ಪೈಸೆ ಹೆಚ್ಚಳವಾಗಿದ್ದರೆ, 23 ಪೈಸೆ ತುಟ್ಟಿಯಾಗಿದೆ ಎಂದು ಸರಕಾರಿ ಸ್ವಾಮ್ಯದ ತೈಲ ಮಾರಾಟಗಾರ ಸಂಸ್ಥೆಗಳ ದೈನಂದಿನ ದರ ಮಾಹಿತಿ ತಿಳಿಸಿದೆ. ಮಂಗಳವಾರ ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ದಿಲ್ಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ದರ 100.21 ರೂ ಇದೆ. ಡೀಸೆಲ್ ಬೆಲೆ 89.53 ರೂಪಾಯಿಗೆ ಏರಿಕೆಯಾಗಿದೆ. ದಿಲ್ಲಿಯೊಂದಿಗೆ ಶತಕದಂಚಿನಲ್ಲಿದ್ದ ಕೋಲ್ಕತಾ ಕೂಡ, ನೂರರ ಗಡಿ ದಾಟಿದೆ. ಇಲ್ಲಿ ಪೆಟ್ರೋಲ್ ದರ 100.23 ರೂಪಾಯಿ ಇದ್ದರೆ, ಡೀಸೆಲ್ ಪ್ರತಿ ಲೀಟರ್‌ಗೆ 92.50 ರೂ ಇದೆ. ಕಳೆದ ತಿಂಗಳು ಮುಂಬಯಿಯಲ್ಲಿ ಪೆಟ್ರೋಲ್ ದರ ಸೆಂಚುರಿ ಬಾರಿಸಿತ್ತು. ಈಗ ಡೀಸೆಲ್ ಕೂಡ ಶತಕದತ್ತ ದಾಪುಗಾಲು ಇರಿಸಿದೆ. ಬುಧವಾರ ಬೆಳಿಗ್ಗೆ ವಾಣಿಜ್ಯ ನಗರಿಯಲ್ಲಿ ಪೆಟ್ರೋಲ್ ದರ 106.25 ರೂಪಾಯಿ ಇದ್ದರೆ, ಡೀಸೆಲ್ ದರ 97.09 ರೂ ಇದೆ. ಚೆನ್ನೈನಲ್ಲಿ ಪೆಟ್ರೋಲ್ 101.06 ರೂ ಮತ್ತು ಡೀಸೆಲ್ 94.06 ರೂಪಾಯಿ ದರವಿದೆ. ಬೆಂಗಳೂರಿನಲ್ಲಿ ಬುಧವಾರ ಪೆಟ್ರೋಲ್ ಬೆಲೆ ಲೀಟರ್‌ಗೆ 36 ಪೈಸೆ ಹೆಚ್ಚಳವಾಗಿದ್ದು, ಒಂದು ಲೀಟರ್ ಪೆಟ್ರೋಲ್ ದರ 103.56 ರೂಪಾಯಿ ಇದೆ. ಇನ್ನು ಡೀಸೆಲ್ ದರ 17 ಪೈಸೆ ತುಟ್ಟಿಯಾಗಿದೆ. ಲೀಟರ್ ಡೀಸೆಲ್‌ಗೆ 94.89 ರೂ ದರವಿದೆ.