ಡ್ರಗ್ಸ್ ಬಳಕೆ ಕಳವಳಕಾರಿ ಎಂದ ಭಾಗವತ್: ಯಾರನ್ನು ದೂರಬೇಕು ನೀವೇ ಹೇಳಿ ಎಂದ ರಾವತ್!

ಮಾದಕವಸ್ತುಗಳ ಬಳಕೆ ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಈ ನಕಾರಾತ್ಮಕ ಬೆಳವಣಿಗೆಗೆ ಯಾರು ಕಾರಣ ಎಂಬುದನ್ನು ತಿಳಿಸಬೇಕು ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಆಗ್ರಹಿಸಿದ್ದಾರೆ.

ಡ್ರಗ್ಸ್ ಬಳಕೆ ಕಳವಳಕಾರಿ ಎಂದ ಭಾಗವತ್: ಯಾರನ್ನು ದೂರಬೇಕು ನೀವೇ ಹೇಳಿ ಎಂದ ರಾವತ್!
Linkup
ಮುಂಬಯಿ: ದೇಶದಲ್ಲಿ ಮಾದಕವಸ್ತು ಕಳ್ಳಸಾಗಾಣಿಕೆ ಮತ್ತು ಯುವ ಸಮುದಾಯದಲ್ಲಿ ಮಾದಕವಸ್ತುಗಳ ಬಳಕೆ ಹೆಚ್ಚುತ್ತಿರುವುದಕ್ಕೆ ಆರ್‌ಎಸ್‌ಎಸ್‌ ಮುಖ್ಯಸ್ಥ ಕಳವಳ ವ್ಯಕ್ತಪಡಿಸಿದ್ದಾರೆ. ವಿಜಯದಶಮಿ ಅಂಗವಾಗಿ ನಾಗ್ಪುರದ ಆರ್‌ಎಸ್‌ಎಸ್ ಕೇಂದ್ರ ಕಚೇರಿಯಲ್ಲಿ ಸುದೀರ್ಘ ಭಾಷಣ ಮಾಡಿದ ಮೋಹನ್ ಭಾಗವತ್, ಮುಂತಾದ ಮಾದಕವಸ್ತುಗಳ ಬಳಕೆ ಹೆಚ್ಚುತ್ತಿರುವುದು ಚಿಂತಿಸಬೇಕಾದ ಸಂಗತಿ ಎಂದು ಹೇಳಿದರು. ಇನ್ನು ಮೋಹನ್ ಭಾಗವತ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ ನಾಯಕ ಹಾಗೂ ರಾಜ್ಯಸಭಾ ಸಂಸದ , ಆರ್‌ಎಸ್‌ಎಸ್‌ ಮುಖ್ಯಸ್ಥರು ಈ ನಕಾರಾತ್ಮಕ ಬೆಳವಣಿಗೆಗಳಿಗೆ ಯಾರನ್ನು ದೂಷಿಸಬೇಕು ಎಂಬುದನ್ನೂ ಹೇಳಲಿ ಎಂದು ಆಗ್ರಹಿಸಿದ್ದಾರೆ. ಪ್ರಧಾನಿ ಮೋದಿ ಈ ಹಿಂದೆ ನಗದು ಅಮಾನ್ಯೀಕರಣ ಭಯೋತ್ಪಾದನೆ ಹಾಗೂ ಮಾದಕವಸ್ತು ಕಳ್ಳಸಾಗಾಣಿಕೆಯನ್ನು ಸಂಪೂರ್ಣವಾಗಿ ತೊಡೆದು ಹಾಕುತ್ತದೆ ಎಂದು ಘೋಷಿಸಿದ್ದರು. ಆದರೆ ಇದುವರೆಗೂ ಈ ಎರಡೂ ಸಾಮಾಜಿಕ ಪಿಡುಗು ನಿವಾರಣೆಯಾಗಿಲ್ಲ. ಹಾಗಾದರೆ ಇದಕ್ಕೆ ಹೊಂಣೆ ಯಾರು ಎಂದು ರಾವತ್ ಪ್ರಶ್ನಿಸಿದ್ದಾರೆ. ಮೋಹನ್ ಭಾಗವತ್ ಡ್ರಗ್ಸ್ ಬಳಕೆ ಹೆಚ್ಚಳದ ಕುರಿತು ಪ್ರಸ್ತಾಪಿಸುವ ಮೂಲಕ ಕೇಂದ್ರ ಸರ್ಕಾರದ ವೈಫಲ್ಯವನ್ನು ಪರೋಕ್ಷವಾಗಿ ಎತ್ತಿ ತೋರಿಸಿದ್ದಾರೆ. ಅವರ ಸಾಮಾಜಿಕ ಕಳಕಳಿ ಮೆಚ್ಚುವಂತದ್ದಾದರೂ, ಡ್ರಗ್ಸ್ ಬಳಕೆ ಹೆಚ್ಚಳಕ್ಕೆ ಯಾರು ಕಾರಣ ಎಂಬುದನ್ನೂ ಅವರು ಹೇಳಬೇಕಿತ್ತು ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರದಲ್ಲಿ ಪ್ರಖರ ಹಿಂದುತ್ವವಾದಿ ಸರ್ಕಾರವಿದೆ ಎಂದು ಹೇಳಲಾಗುತ್ತದೆ. ಆರ್‌ಎಸ್‌ಎಸ್ ಬಯಸುವ ಸಮಾಜ ನಿರ್ಮಾಣ ಬಿಜೆಪಿಯ ಕನಸು ಎಂದೂ ಹೇಳಲಾಗುತ್ತದೆ. ಹಾಗಾದರೆ ಆರ್‌ಎಸ್‌ಎಸ್‌ ಮುಖ್ಯಸ್ಥರು ಡ್ರಗ್ಸ್ ಬಳಕೆ ಹೆಚ್ಚಳದ ಕುರಿತು ಕಳವಳ ವ್ಯಕ್ತಪಡಿಸುವ ಅನಿವಾರ್ಯತೆ ಏಕೆ ಎದುರಾಯಿತು ಎಂಬುದನ್ನು ಅರಿಯಬೇಕಿದೆ ಎಂದು ರಾವತ್ ಹೇಳಿದ್ದಾರೆ. ಡ್ರಗ್ಸ್ ಬಳಕೆ ಹೆಚ್ಚಳವನ್ನು ಒಂದು ಗಂಭೀರ ಸಾಮಾಜಿಕ ಸಮಸ್ಯೆ ಎಂದಿರುವ ಮೋಹನ್ ಭಾಗವತ್, ಇದರ ನಿವಾರಣೆಗೆ ಸಮಾಜ ಒಟ್ಟಾಗಿ ಶ್ರಮಿಸಬೇಕು ಎಂದು ಕರೆ ನೀಡಿದ್ದರು.