ಜನರಿಗೆ ತರಕಾರಿ ರೇಟಿನ ಏಟು; ಶಿವಮೊಗ್ಗದಲ್ಲಿ ತರಕಾರಿ ಬೆಲೆ ಶೇ.40ರಷ್ಟು ಏರಿಕೆ!

ಬೆಲೆ ಏರಿಕೆ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಿದೆ. ಬೆಲೆ ದುಪ್ಪಟ್ಟು ಆಗಿರುವುದರಿಂದ ಖರೀದಿಸಲು ಜನರು ಸಹ ಹಿಂದೇಟು ಹಾಕುತಿದ್ದಾರೆ. ತರಕಾರಿ ಸ್ಟಾಲ್‌, ಹಾಪ್‌ ಕಾಮ್ಸ್‌ ಅಂಗಡಿಗಳಲ್ಲೂ ಮುಂಚಿನಂತೆ ತಾಜಾ ತರಕಾರಿ ಲಭ್ಯವಾಗುತ್ತಿಲ್ಲ. ಗ್ರಾಹಕರದ್ದು ದರದ ಗೋಳಾದರೆ ಮಾರಾಟಗಾರರು ಹೆಚ್ಚಿನದ್ದನ್ನು ತಂದು ದಾಸ್ತಾನು ಮಾಡಲಾಗುತ್ತಿಲ್ಲ. ಹೀಗಾಗಿ, ಅಂದಿನ ಅಗತ್ಯಕ್ಕಿಂತ ಕಡಿಮೆ ಪ್ರಮಾಣದ ತರಕಾರಿಯನ್ನೇ ಸಗಟಿನಲ್ಲಿ ಖರೀದಿಸಿ ಮಾರಾಟ ಮಾಡುತಿದ್ದಾರೆ.

ಜನರಿಗೆ ತರಕಾರಿ ರೇಟಿನ ಏಟು; ಶಿವಮೊಗ್ಗದಲ್ಲಿ ತರಕಾರಿ ಬೆಲೆ ಶೇ.40ರಷ್ಟು ಏರಿಕೆ!
Linkup
ಆತೀಶ್‌ ಬಿ.ಕನ್ನಾಳೆ ಶಿವಮೊಗ್ಗ: ಇಂಧನ ಬೆಲೆ ಇಳಿಕೆಯೊಂದಿಗೆ ಸರಬರಾಜು ವೆಚ್ಚದ ಹೊರೆ ಇಳಿದು ತರಕಾರಿ ದರ ಕಡಿಮೆ ಆಗಬಹುದು ಎಂದುಕೊಂಡಿದ್ದ ಗ್ರಾಹಕರಿಗೆ ನಿರಾಸೆ ಎದುರಾಗಿದೆ. ವರುಣನ ಅವಕೃಪೆಯಿಂದಾಗಿ ಜಮೀನಿನಲ್ಲಿದ್ದ ತರಕಾರಿ ಮಾರುಕಟ್ಟೆ ತರಲಾಗದೇ ಹಾಳಾಗಿದೆ. ತರಕಾರಿ ಬೆಳೆಯನ್ನೇ ನಂಬಿಕೊಂಡಿದ್ದ ರೈತರಿಗೆ ಭಾರಿ ನಷ್ಟವಾಗಿದೆ. ಜಮೀನಿನಲ್ಲಿ ನೀರು ನಿಂತು ಬೆಳೆ ಹಾಳಾಗಿದ್ದು ಅದರಲ್ಲಿಯೇ ಉತ್ತಮವಾದುದ್ದನ್ನು ಮಾರುಕಟ್ಟೆಗೆ ಕಳುಹಿಸಿದರೂ ನಿರೀಕ್ಷಿತ ಬೆಲೆ ಸಿಗುತ್ತಿಲ್ಲಎನ್ನುವುದು ರೈತರ ಗೋಳು. ಆದರೆ, ಅದೇ ತರಕಾರಿ ಚಿಲ್ಲರೆ ಮಾರುಕಟ್ಟೆಯಲ್ಲಿ ಭಾರಿ ಬೆಲೆಗೆ ಮಾರಾಟವಾಗುತ್ತಿದೆ. ಇದರಿಂದ ಬೆಳೆದ ರೈತ ಹಾಗೂ ಖರೀದಿಸಿ ಉಣ್ಣುವ ಗ್ರಾಹಕ ಇಬ್ಬರಿಗೂ ಪ್ರಯೋಜನವಾಗುತ್ತಿಲ್ಲ ಎನ್ನುವುದು ರೈತರ ಗೋಳಾಗಿದೆ. ಬೆಲೆ ಏರಿಕೆ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಿದೆ. ಬೆಲೆ ದುಪ್ಪಟ್ಟು ಆಗಿರುವುದರಿಂದ ಖರೀದಿಸಲು ಜನರು ಸಹ ಹಿಂದೇಟು ಹಾಕುತಿದ್ದಾರೆ. ತರಕಾರಿ ಸ್ಟಾಲ್‌, ಹಾಪ್‌ ಕಾಮ್ಸ್‌ ಅಂಗಡಿಗಳಲ್ಲೂ ಮುಂಚಿನಂತೆ ತಾಜಾ ತರಕಾರಿ ಲಭ್ಯವಾಗುತ್ತಿಲ್ಲ. ಗ್ರಾಹಕರದ್ದು ದರದ ಗೋಳಾದರೆ ಮಾರಾಟಗಾರರು ಹೆಚ್ಚಿನದ್ದನ್ನು ತಂದು ದಾಸ್ತಾನು ಮಾಡಲಾಗುತ್ತಿಲ್ಲ. ಹೀಗಾಗಿ, ಅಂದಿನ ಅಗತ್ಯಕ್ಕಿಂತ ಕಡಿಮೆ ಪ್ರಮಾಣದ ತರಕಾರಿಯನ್ನೇ ಸಗಟಿನಲ್ಲಿ ಖರೀದಿಸಿ ಮಾರಾಟ ಮಾಡುತಿದ್ದಾರೆ. ಆವಕ ಪ್ರಮಾಣದಲ್ಲೂ ಇಳಿಕೆ:ಮಳೆಯಿಂದಾಗಿ ಜಮೀನಿನಲ್ಲಿದ್ದ ಬೆಳೆ ನಾಶವಾಗಿದ್ದು, ಮಾರುಕಟ್ಟೆಗೆ ಬರುತ್ತಿದ್ದ ತರಕಾರಿ ಪ್ರಮಾಣ ಕೂಡ ಕಡಿಮೆ ಆಗಿದೆ. ಶಿವಮೊಗ್ಗ ಎಪಿಎಂಸಿ ಒಂದರಲ್ಲೇ ನಿತ್ಯ 10 ಕ್ವಿಂಟಾಲ್‌ನಷ್ಟು ಬರುತ್ತಿದ್ದ ಟೊಮೆಟೊ ಆರು ಕ್ವಿಂಟಾಲ್‌ಗೆ ಕುಸಿದಿದೆ. ಇದೇ ರೀತಿ ಎಲ್ಲ ತರಕಾರಿಗಳ ಆವಕದ ಮೇಲೆಯೂ ಪರಿಣಾಮ ಬೀರಿದ್ದು, ಬೆಲೆಯಲ್ಲಿ ಶೇ.40ರಷ್ಟು ಬೆಲೆ ಏರಿಕೆ ಆಗಿದೆ ಎಂದು ಶಿವಮೊಗ್ಗ ಎಪಿಎಂಸಿ ಮೂಲಗಳು ತಿಳಿಸಿವೆ. ಹೋಟೆಲ್‌ನವರಿಗೂ ರೇಟಿನ ಏಟುತರಕಾರಿ ಬೆಲೆ ಜನಸಾಮಾನ್ಯರ ಜೇಬು ಸುಡುವುದಲ್ಲದೇ ಹೋಟೆಲ್‌ ಉದ್ಯಮದ ಮೇಲೆಯೂ ಪರಿಣಾಮ ಬೀರಿದೆ. ಬೆಲೆ ಏರಿಕೆ ಕಾರಣ ಹೋಟೆಲ್‌ನವರು ಕಡಿಮೆ ಪ್ರಮಾಣದ ತರಕಾರಿ ಖರೀದಿಸುತ್ತಿದ್ದಾರೆ. ಹೆಚ್ಚುವರಿ ಬೇಡಿಕೆಯಿದ್ದರೂ ತರಕಾರಿ ಸಿಗುತ್ತಿಲ್ಲ. ಸಭೆ, ಸಮಾರಂಭ, ಕಾರ್ಯಕ್ರಮ ಹಾಗೂ ಮದುವೆಗಳಿಗೂ ಅಗತ್ಯವಿರುವಷ್ಟು ತರಕಾರಿ ಸಿಗುತ್ತಿಲ್ಲ. ಸಿಕ್ಕರೂ ಗುಣಮಟ್ಟದ್ದಾಗಿರುವುದಿಲ್ಲ ಎನ್ನುತ್ತಾರೆ ತರಕಾರಿ ಮಾರಾಟಗಾರರು. ರೈತರ ಜೇಬು ಸೇರದ ಹಣಶಿವಮೊಗ್ಗದಲ್ಲಿ ಬದನೆಕಾಯಿ, ಟೊಮೆಟೊ, ಹೀರೆಕಾಯಿ ಸೇರಿದಂತೆ ವಿವಿಧ ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಆದರೆ, ಮಳೆಯಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ರಸ್ತೆಗಳು ಕೆಸರುಗದ್ದೆ ಆಗಿರುವುದರಿಂದ ಮಾರುಕಟ್ಟೆಗೆ ತರಕಾರಿ ತರಲು ಸಾಧ್ಯವಾಗುತ್ತಿಲ್ಲ. ಜಮೀನಿನವರೆಗೆ ವಾಹನಗಳು ತೆರಳದೇ ಇರುವುದರಿಂದ ತರಕಾರಿಗಳನ್ನು ಬಿಡಿಸಿ ತರುವುದು ಹೊರೆಯಾಗಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ಕೆಜಿಗೆ ತರಕಾರಿ ಬೆಲೆ ರೂ.ಗಳಲ್ಲಿ
ತರಕಾರಿ ಟೊಮೆಟೊ ಬೀನ್ಸ್‌ ಕ್ಯಾರೆಟ್‌ ನವಿಲುಕೋಸು ಸೀಮೆ ಬದನೆ ಮೂಲಂಗಿ ಬೆಂಡೆಕಾಯಿ ಮೈಸೂರು ಬದನೆ ದುಂಡು ಬದನೆ ನುಗ್ಗೆ ಕಾಯಿ ಬಣ್ಣದ ಸೌತೆ ಹೂ ಕೋಸು ಹಾಗಲ ಕಾಯಿ
ಸಗಟು 45-50 60-70 70 50-60 26-30 40 50-60 40 26-30 150-200 40 40 40
ಚಿಲ್ಲರೆ 50-60 60-80 80 70 40 50 60 60 40 240 50 50 60