ಬೃಹತ್‌ ಟೆಕ್‌ ಕಂಪನಿಗಳಿಗೆ ತೆರಿಗೆ ವಿಧಿಸಲು 140 ರಾಷ್ಟ್ರಗಳು ಸಜ್ಜು

ಕಾರ್ಪೊರೇಟ್‌ ವಲಯದ ದಿಗ್ಗಜ ತಂತ್ರಜ್ಞಾನ ಕಂಪನಿಗಳ ಮೇಲೆ, ಜಾಗತಿಕ ಮಟ್ಟದಲ್ಲಿ ತೆರಿಗೆ ವಿಧಿಸಲು ಸುಮಾರು 140 ರಾಷ್ಟ್ರಗಳು ಈ ವಾರ ವಿಸ್ತೃತ ಚರ್ಚೆ ನಡೆಸಲಿವೆ. ಇದರಿಂದ ಗೂಗಲ್‌, ಫೇಸ್‌ಬುಕ್‌, ಆ್ಯಪಲ್‌ ಇತ್ಯಾದಿ ಟೆಕ್‌ ಕಂಪನಿಗಳ ಮೇಲೆ ಪ್ರಭಾವ ಬೀರಲಿದೆ.

ಬೃಹತ್‌ ಟೆಕ್‌ ಕಂಪನಿಗಳಿಗೆ ತೆರಿಗೆ ವಿಧಿಸಲು 140 ರಾಷ್ಟ್ರಗಳು ಸಜ್ಜು
Linkup
ಹೊಸದಿಲ್ಲಿ: ಕಾರ್ಪೊರೇಟ್‌ ವಲಯದ ದಿಗ್ಗಜ ತಂತ್ರಜ್ಞಾನ ಕಂಪನಿಗಳ ಮೇಲೆ ಜಾಗತಿಕ ಮಟ್ಟದ ವಿಧಿಸಲು ಸುಮಾರು 140 ರಾಷ್ಟ್ರಗಳು ಈ ವಾರ ವಿಸ್ತೃತ ಚರ್ಚೆ ನಡೆಸಲಿವೆ. ಗ್ರೂಪ್‌ 7 () ಶ್ರೀಮಂತ ರಾಷ್ಟ್ರಗಳು 100 ದಿಗ್ಗಜ ಬಹುರಾಷ್ಟ್ರೀಯ ಟೆಕ್‌ ಕಂಪನಿಗಳಿಗೆ ಕನಿಷ್ಠ ಶೇ.15ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪದ ಬಗ್ಗೆ ಅನುಮೋದಿಸಿವೆ. ಇದರಿಂದ ಕಡಿಮೆ ತೆರಿಗೆ ವಿಧಿಸಲು ರಾಷ್ಟ್ರಗಳ ನಡುವೆ ನಡೆಯುವ ಪೈಪೋಟಿ ಕಡಿಮೆಯಾಗುವ ನಿರೀಕ್ಷೆ ಇದೆ. ಕೋವಿಡ್‌ ಬಿಕ್ಕಟ್ಟಿನ ಪರಿಣಾಮ ತೆರಿಗೆ ಸಂಪನ್ಮೂಲ ಸಂಗ್ರಹಿಸಲೂ ಇದು ನೆರವಾಗಲಿದೆ. ಗೂಗಲ್‌, ಫೇಸ್‌ಬುಕ್‌, ಆ್ಯಪಲ್‌ ಇತ್ಯಾದಿ ಟೆಕ್‌ ಕಂಪನಿಗಳ ಮೇಲೆ ಇದು ಪ್ರಭಾವ ಬೀರಲಿದೆ. ಈ ಪ್ರಸ್ತಾಪವನ್ನು 139 ರಾಷ್ಟ್ರಗಳ ಮುಂದಿಟ್ಟು ಅನುಮೋದನೆ ಪಡೆಯಲು ಯತ್ನಿಸಲಾಗುತ್ತಿದೆ. ಆರ್ಗನೈಸೇಶನ್‌ ಆಫ್‌ ಎಕನಾಮಿಕ್‌ ಕೋ ಆಪರೇಷನ್‌ ಆ್ಯಂಡ್‌ ಡೆವಲಪ್‌ಮೆಂಟ್‌ (ಒಒಸಿಡಿ) ಈ ಪ್ರಕ್ರಿಯೆ ನಡೆಸಲಿದೆ. ಅಮೆರಿಕ, ಯುರೋಪ್‌ ಕೂಡ ಈ ಪ್ರಸ್ತಾಪವನ್ನು ಬೆಂಬಲಿಸಿವೆ. ಜಿ7 ರಾಷ್ಟ್ರಗಳಲ್ಲಿ ಅಮೆರಿಕ, ಕೆನಡಾ, ಜಪಾನ್‌, ಫ್ರಾನ್ಸ್‌, ಬ್ರಿಟನ್‌, ಇಟಲಿ, ಜರ್ಮನಿ ಇವೆ. ಆದರೆ ಐರ್ಲೆಂಡ್‌ ಈ ಪ್ರಸ್ತಾಪವನ್ನು ಬೆಂಬಲಿಸಿಲ್ಲ. ಅಲ್ಲಿ ಫೇಸ್‌ಬುಕ್‌, ಗೂಗಲ್‌, ಆ್ಯಪಲ್‌ಗೆ ಶೇ.12.5ರ ತೆರಿಗೆ ಇದೆ. ಚೀನಾ ಕೂಡ ಈ ಪ್ರಸ್ತಾವಕ್ಕೆ ಕಳವಳ ವ್ಯಕ್ತಪಡಿಸಿದೆ. ಅರ್ಜೆಂಟೀನಾ, ಬ್ರೆಜಿಲ್‌ ಮತ್ತು ಭಾರತವು ಮತ್ತಷ್ಟು ಕಂಪನಿಗಳನ್ನು ಪ್ರಸ್ತಾವದಲ್ಲಿ ಸೇರಿಸಬೇಕು ಎಂದಿವೆ. ಇಟಲಿಯಲ್ಲಿ ಜುಲೈ 9 ಮತ್ತು 10ರಂದು ಜಿ20 ರಾಷ್ಟ್ರಗಳ ಸಭೆಯೂ ನಡೆಯಲಿದ್ದು, ಅಲ್ಲೂ ಪ್ರಸ್ತಾಪ ಚರ್ಚೆಯಾಗುವ ನಿರೀಕ್ಷೆ ಇದೆ.