ಅದಾನಿ ಸಮೂಹದ ತೆಕ್ಕೆಗೆ ಎನ್‌ಡಿಟಿವಿ ವಾಹಿನಿ?: ಷೇರುಗಳ ಮೌಲ್ಯದಲ್ಲಿ ಭಾರಿ ಜಿಗಿತ

ಜನಪ್ರಿಯ ಇಂಗ್ಲಿಷ್ ಸುದ್ದಿ ವಾಹಿನಿ ಎನ್‌ಡಿಟಿವಿಯನ್ನು ಖ್ಯಾತ ಉದ್ಯಮ ಗೌತಮ್ ಅದಾನಿ ಅವರ ಅದಾನಿ ಸಮೂಹ ಖರೀದಿಸಲಿದೆ ಎಂಬ ಸುದ್ದಿ ಹರಡಿರುವ ಬೆನ್ನಲ್ಲೇ ಎನ್‌ಡಿಟಿವಿಯ ಷೇರುಗಳು ಗರಿಷ್ಠ ಮಟ್ಟಕ್ಕೆ ಜಿಗಿತ ಕಂಡಿವೆ.

ಅದಾನಿ ಸಮೂಹದ ತೆಕ್ಕೆಗೆ ಎನ್‌ಡಿಟಿವಿ ವಾಹಿನಿ?: ಷೇರುಗಳ ಮೌಲ್ಯದಲ್ಲಿ ಭಾರಿ ಜಿಗಿತ
Linkup
ಹೊಸದಿಲ್ಲಿ: ಅದಾನಿ ಸಮೂಹವು ಮಾಧ್ಯಮ ಸಮೂಹವನ್ನು ಖರೀದಿ ಮಾಡಲಿದೆ ಎಂಬ ಊಹಾಪೋಹಗಳು ಮಾರುಕಟ್ಟೆಯಲ್ಲಿ ಬಲಗೊಳ್ಳುತ್ತಿರುವಂತೆಯೇ, ಅದರ ಷೇರುಗಳು ಸೋಮವಾರ ಶೇ 10ರ ಅಪ್ಪರ್ ಸರ್ಕ್ಯೂಟ್ ಮಿತಿಗೆ (ಒಂದು ದಿನದ ಗರಿಷ್ಠ ಪ್ರಮಾಣದ ಗಳಿಗೆ ಮಿತಿ) ಜಿಗಿದಿವೆ. ದಿಲ್ಲಿ ಮೂಲದ ಮಾಧ್ಯಮ ಸಂಸ್ಥೆಯೊಂದನ್ನು ಖರೀದಿಸಲು ಅದಾನಿ ಮುಂದಾಗಿದ್ದಾರೆ ಎಂದು ವರದಿಗಳು ಹೇಳಿವೆ. ಇದು ಎನ್‌ಡಿಟಿವಿ ಆಗಿರಬೇಕು ಎಂದು ಅನೇಕರು ಊಹಿಸಿದ್ದಾರೆ. ಆದರೆ ಇದರ ಸತ್ಯಾಸತ್ಯತೆ ಬಹಿರಂಗವಾಗಿಲ್ಲ. ಆದರೆ ಈ ವರದಿಗಳ ಬೆನ್ನಲ್ಲೇ ಎನ್‌ಡಿಟಿವಿ ಷೇರುಗಳು ಬೆಳಿಗ್ಗೆ 10.40ರ ವೇಳೆಗೆ ಶೇ 9.94ರ ಜಿಗಿತದೊಂದಿಗೆ 79.65 ರೂಪಾಯಿಗೆ ತಲುಪಿತ್ತು. ತನ್ನ ಮಾಧ್ಯಮ ಚಟುವಟಿಕೆಗಳಿಗೆ ಹಿರಿಯ ಪತ್ರಕರ್ತ ಸಂಜಯ್ ಪುಗಾಲಿಯಾ ಅವರನ್ನು ಸಿಇಒ ಹಾಗೂ ಮುಖ್ಯ ಸಂಪಾದಕ ಹುದ್ದೆಗೆ ಅದಾನಿ ಎಂಟರ್‌ಪ್ರೈಸಸ್ ನೇಮಿಸಿಕೊಂಡ ಬಳಿಕ, ಅವರು ಮಾಧ್ಯಮ ವಲಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ವದಂತಿ ದಟ್ಟವಾಗಿದೆ. ಪುಗಾಲಿಯಾ ಅವರು ಈ ಹಿಂದೆ ಕ್ವಿಂಟ್ ಡಿಜಿಟಲ್ ಮಾಧ್ಯಮದ ಅಧ್ಯಕ್ಷ ಹಾಗೂ ಸಂಪಾದಕೀಯ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅದಕ್ಕೂ ಮುನ್ನ ಸಿಎನ್‌ಬಿಸಿ-ಆವಾಜ್ ಮುಖ್ಯಸ್ಥರಾಗಿದ್ದರು. ಹಿಂದಿಯಲ್ಲಿ ಸ್ಟಾರ್ ನ್ಯೂಸ್ ಆರಂಭಿಸಿದ್ದರು. ಝೀ ನ್ಯೂಸ್ ಮುಖ್ಯಸ್ಥರಾಗಿ ಹಾಗೂ ಆಜ್‌ತಕ್ ಹಿಂದಿ ಸುದ್ದಿ ವಾಹಿನಿಯ ಸಂಸ್ಥಾಪಕ ತಂಡ ಭಾಗವಾಗಿ ಕೆಲಸ ಮಾಡಿದ್ದರು. ಮುದ್ರಣ ಮಾಧ್ಯಮದ ಪತ್ರಕರ್ತರಾಗಿ ಅವರು, ಬ್ಯುಸಿನೆಸ್ ಸ್ಟ್ಯಾಂಡರ್ಡ್ ಮತ್ತು ನವಭಾರತ್ ಟೈಮ್ಸ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. 1990ರ ದಶಕದಲ್ಲಿ ಬಿಬಿಸಿ ಹಿಂದಿ ರೇಡಿಯೋಗೆ ನಿರಂತರವಾಗಿ ಕೊಡುಗೆ ಸಲ್ಲಿಸುತ್ತಿದ್ದರು. ಎನ್‌ಡಿಟಿವಿ ಸುದ್ದಿ ವಾಹಿನಿಯ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಕಂಪೆನಿಯ ಪ್ರವರ್ತಕರು ಈಗಾಗಲೇ ತೆರಿಗೆ ಸಂಬಂಧಿ ತನಿಖೆಗಳಿಗೆ ಒಳಪಟ್ಟಿದ್ದಾರೆ. ಆದರೂ ಕಳೆದ ಒಂದು ವರ್ಷದಲ್ಲಿ ಅದರ ಶೇ 130ರಷ್ಟು ಹೆಚ್ಚಾಗಿದೆ.