ಜನ್ಮದಿನದ ಸಂಭ್ರಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರ

ಸ್ಯಾಂಡಲ್‌ವುಡ್‌ನ ಸೂಪರ್ ಸ್ಟಾರ್ ಉಪೇಂದ್ರ ಅವರಿಗೆ ಇಂದು ಜನ್ಮದಿನದ ಸಂಭ್ರಮ. ತಮ್ಮ ಹುಟ್ಟುಹಬ್ಬವನ್ನು ಇವತ್ತು ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆಗೆ ರಿಯಲ್ ಸ್ಟಾರ್ ಉಪೇಂದ್ರ 

ಜನ್ಮದಿನದ ಸಂಭ್ರಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರ
Linkup

ಸ್ಯಾಂಡಲ್‌ವುಡ್‌ನ ಸೂಪರ್ ಸ್ಟಾರ್ ಉಪೇಂದ್ರ ಅವರಿಗೆ ಇಂದು ಜನ್ಮದಿನದ ಸಂಭ್ರಮ. ತಮ್ಮ ಹುಟ್ಟುಹಬ್ಬವನ್ನು ಇವತ್ತು ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆಗೆ ರಿಯಲ್ ಸ್ಟಾರ್ ಉಪೇಂದ್ರ ಆಚರಿಸಿಕೊಳ್ಳುತ್ತಿದ್ದಾರೆ. ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಇಂದು ಅಭಿಮಾನಿಗಳ ಜೊತೆಗೆ ತಮ್ಮ ಬರ್ತಡೇಯನ್ನು ಉಪೇಂದ್ರ ಸೆಲೆಬ್ರೇಟ್ ಮಾಡಿಕೊಳ್ಳುತ್ತಿಲ್ಲ. 

ಬೆಂಗಳೂರಿನಲ್ಲಿ ಇರುವುದಿಲ್ಲ ಎಂಬುದನ್ನು ತಿಳಿಸಿದ್ದ ಉಪೇಂದ್ರ 

''ಪ್ರತಿವರ್ಷ ಅಭಿಮಾನಿಗಳೊಂದಿಗೆ ಆಚರಿಸುತ್ತಿದ್ದ ಅಭಿಮಾನಿಗಳ ದಿನದ ಸಂಭ್ರಮ ಈ ವರ್ಷವೂ ಆಚರಿಸಲು ಆಗದಿರುವುದಕ್ಕೆ ವಿಷಾದಿಸುತ್ತೇನೆ. ನಾನು ಬೆಂಗಳೂರಿನಲ್ಲಿ ಇಲ್ಲದಿರುವ ಕಾರಣ ಎಲ್ಲಾ ಅಭಿಮಾನಿಗಳು ಅವರವರು ಇರುವ ಕಡೆಯೇ ಸರಳವಾಗಿ ಈ ದಿನವನ್ನು ಆಚರಿಸಿ ಹಾರೈಸಬೇಕಾಗಿ ಬಯಸುತ್ತೇನೆ'' ಎಂದು ಮೊನ್ನೆಯಷ್ಟೇ ಉಪೇಂದ್ರ ಟ್ವೀಟ್ ಮಾಡಿದ್ದರು. 

ಕೋವಿಡ್ ಕಾರಣದಿಂದ ರಿಯಲ್ ಸ್ಟಾರ್‌ ಉಪೇಂದ್ರಗೆ ಕೈ ಕುಲುಕಿ, ಶುಭಾಶಯ ಕೋರಿ, ಕೇಕ್ ತಿನ್ನಿಸಿ, ಪಟಾಕಿ ಹೊಡೆದು ಸಂಭ್ರಮಿಸಲು ಸಾಧ್ಯವಾಗದೇ ಇದ್ದರೂ 'ಸೂಪರ್ ಸ್ಟಾರ್' ಬರ್ತಡೆಯನ್ನ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಚರಣೆ ಮಾಡುತ್ತಿದ್ದಾರೆ. ಉಪೇಂದ್ರಗೆ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳು ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. 

ಅಭಿಮಾನಿಗಳ ಜೊತೆಗೆ ಇಂದು ಉಪೇಂದ್ರ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಇದ್ದರೂ, ಫ್ಯಾನ್ಸ್‌ಗೆ ಖುಷಿಯಾಗುವ ಸುದ್ದಿಯೊಂದನ್ನು ಅದಾಗಲೇ ನೀಡಿದ್ದಾರೆ. ಉಪೇಂದ್ರ ನಿರ್ದೇಶನ ಮಾಡುವ ಹೊಸ ಚಿತ್ರದ ಪೋಸ್ಟರ್‌ವೊಂದು ಇತ್ತೀಚೆಗಷ್ಟೇ ಲೀಕ್ ಆಗಿತ್ತು. ಪೋಸ್ಟರ್‌ನಲ್ಲಿ 'ಮೂರು ನಾಮ'ದ ಚಿಹ್ನೆಯನ್ನೇ ಚಿತ್ರಕ್ಕೆ ಶೀರ್ಷಿಕೆಯಾಗಿ ಇಡಲಾಗಿದೆ. ಈ ಚಿತ್ರದ ಬಗ್ಗೆ ಉಪೇಂದ್ರ ಇಂದು ಅಧಿಕೃತವಾಗಿ ಮಾಹಿತಿ ನೀಡಿದರೇ ಅದೇ 'ರಿಯಲ್ ಫ್ಯಾನ್ಸ್‌'ಗೆ ಹಬ್ಬದೂಟ ಸಿಕ್ಕ ಹಾಗೆ…