ಹಗಲಿನಲ್ಲಿ ಆಲಸ್ಯ ತಪ್ಪಿಸಲು ಏನು ಮಾಡಬೇಕು? ಇಲ್ಲಿವೆ ಕೆಲವು ಸಲಹೆಗಳು..

ಶಕ್ತಿ ಕುಂಠಿತ, ದೌರ್ಬಲ್ಯ, ಕಡಿಮೆ ಉತ್ಪಾದಕತೆ, ಕಿರಿಕಿರಿ, ನೆನಪಿನ ಶಕ್ತಿಯ ಸಮಸ್ಯೆಗಳು, ವಿವರಿಸಲಾಗದ ನೋವು ಮತ್ತು ಯಾತನೆ ಮತ್ತು ಪ್ರತ್ಯೇಕತೆಯ ಭಾವನೆಗಳು ಕಂಡುಬಂದರೆ ಅವು ಆಯಾಸದ ಚಿಹ್ನೆಗಳಾಗಿರಬಹುದು. ಇದಕ್ಕೆ ಕಾರಣಗಳು ಹಲವಿದ್ದರೂ, ಬದಲಿಸಬೇಕಾದ ಜೀವನಶೈಲಿ ಅಂಶಗಳ ಬಗ್ಗೆ ಇಲ್ಲಿ ಹೇಳಲಾಗಿದೆ. ಮುಂಜಾನೆಯಲ್ಲೇ ನಿಮಗೆ ಆಯಾಸದ ಭಾವ ಕಾಡುತ್ತಿದೆಯೇ?. ಒಂದು ಕಪ್ ಚಹಾ ಅಥವಾ ಕಾಫಿ ಸೇವಿಸುವವರೆಗೆ ನಿಮ್ಮ ಬೆಳಗ್ಗೆ ಅಪೂರ್ಣವಾಗಿರುತ್ತದೆಯೇ? ನೀವು ದಿನವಿಡೀ ಆಲಸ್ಯ, ನಿದ್ದೆ ಅಥವಾ ದಣಿವನ್ನು ಅನುಭವಿಸುತ್ತೀರಾ? ಹಾಗಿದ್ದರೆ ನೀವು ಹಗಲಿನಲ್ಲಿ ಆಯಾಸವನ್ನು ಅನುಭವಿಸುತ್ತಿರಬಹುದು. ಇದು ನಿಮ್ಮ ಶಕ್ತಿಯ ಮಟ್ಟ, ಏಕಾಗ್ರತೆ ಮತ್ತು ಪ್ರೇರಣೆಯ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಹೋಗಲಾಡಿಸಲು ನಿಮ್ಮ ಜೀವನಶೈಲಿಯಲ್ಲಿ ಯಾವ ಬದಲಾವಣೆ ಬೇಕೆಂದು ತಿಳಿಯಲು ಇದನ್ನ ಓದಿ...
ಹಗಲಿನ ವೇಳೆಯಲ್ಲಾಗುವ ಆಯಾಸವನ್ನು ಗಮನಿಸದೆ ಹಾಗೇ ಬಿಟ್ಟರೆ, ಅದು ನಿಮ್ಮ ದೈಹಿಕ ಆರೋಗ್ಯ ಮಾತ್ರವಲ್ಲದೆ ನಿಮ್ಮ ದೈನಂದಿನ ಕಾರ್ಯನಿರ್ವಹಣೆ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಶಕ್ತಿ ಕುಂಠಿತ, ದೌರ್ಬಲ್ಯ, ಕಡಿಮೆ ಉತ್ಪಾದಕತೆ, ಕಿರಿಕಿರಿ, ನೆನಪಿನ ಶಕ್ತಿಯ ಸಮಸ್ಯೆಗಳು, ವಿವರಿಸಲಾಗದ ನೋವು ಮತ್ತು ಯಾತನೆ ಮತ್ತು ಪ್ರತ್ಯೇಕತೆಯ ಭಾವನೆಗಳು ಕಂಡುಬಂದರೆ ಅವು ಆಯಾಸದ ಚಿಹ್ನೆಗಳಾಗಿರಬಹುದು. ಇದಕ್ಕೆ ಕಾರಣಗಳು ಹಲವಿದ್ದರೂ, ಬದಲಿಸಬೇಕಾದ ಜೀವನಶೈಲಿ ಅಂಶಗಳ ಬಗ್ಗೆ ಇಲ್ಲಿ ಹೇಳಲಾಗಿದೆ.
ಗುಣಮಟ್ಟದ ನಿದ್ರೆ: ಉತ್ತಮ ನಿದ್ರೆಯು ಸೆಲ್ಯುಲಾರ್ ಶಕ್ತಿಯ ಮೂಲವಾದ ಎಟಿಪಿ (ಅಡೆನೊಸಿನ್ ಟ್ರೈಫಾಸ್ಫೇಟ್) ಅನ್ನು ಉತ್ಪಾದಿಸುವ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಒಂದು ರಾತ್ರಿ ನಿದ್ದೆಗೆಟ್ಟರೂ ಸಹ ಅದು ಇದರ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಸರ್ಕಾಡಿಯನ್ ಲಯಕ್ಕೆ ಹೊಂದಿಕೆಯಾಗಲು ವಾರದಲ್ಲಿ ಐದು ದಿನಗಳು ನಿಗದಿತ ನಿದ್ರೆಯ ವೇಳಾಪಟ್ಟಿ ಮಾಡಿಕೊಳ್ಳಿ. ಮಲಗುವ ಮುನ್ನ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ, ಪ್ರೀತಿಪಾತ್ರರ ಜೊತೆ ಆಹ್ಲಾದಕರ ಸಂಭಾಷಣೆಯಲ್ಲಿ ತೊಡಗಿ, ಓದಿ ಮತ್ತು ಯೋಗ ನಿದ್ರಾದಂತಹ ಕೆಲವು ಉಸಿರಾಟದ ವ್ಯಾಯಾಮಗಳನ್ನು ಮಾಡಿ. ಮಲಗುವ ಕೋಣೆಯಲ್ಲಿ ಪರಿಪೂರ್ಣ ಕತ್ತಲೆಯ ಪರಿಸರವನ್ನು ರಚಿಸಿ ಮತ್ತು ಉತ್ತಮ ಗುಣಮಟ್ಟದ ಹಾಸಿಗೆ ಮತ್ತು ದಿಂಬುಗಳನ್ನು ಕೊಂಡುಕೊಳ್ಳಿ.
ದೀರ್ಘಕಾಲದ ಒತ್ತಡ: ಹೆಚ್ಚಿನ ಕಾರ್ಟಿಸೋಲ್ ಮಟ್ಟಗಳು ಉರಿಯೂತವನ್ನು ಹೆಚ್ಚಿಸುತ್ತವೆ ಮತ್ತು ಆಯಾಸಕ್ಕೆ ಕಾರಣವಾಗುತ್ತವೆ. ನಿಮ್ಮಿಷ್ಟದ ಹವ್ಯಾಸದಲ್ಲಿ ತೊಡಗಿಸಿಕೊಳ್ಳಿ, ಪ್ರಕೃತಿಯ ನಡುವೆ ವಾಕಿಂಗ್, ವ್ಯಾಯಾಮ ಅಥವಾ ಧ್ಯಾನ ಮಾಡುವ ಮೂಲಕ ವಿಶ್ರಾಂತಿ ಪಡೆಯಲು ಸಮಯ ತೆಗೆದುಕೊಳ್ಳಿ.
ಸರಿಯಾಗಿ ತಿನ್ನುವುದು: ಏನನ್ನು ತಿನ್ನಬೇಕು ಎಂದು ನಿರ್ಧಾರ ಮಾಡುವುದು ನೀವಾಗಿರುತ್ತೀರ. ಧಾನ್ಯಗಳು, ದ್ವಿದಳ ಧಾನ್ಯಗಳು, ಹಣ್ಣುಗಳು, ತರಕಾರಿಗಳು, ನಟ್ಸ್, ಸೀಡ್ಸ್‌ಗಳೊಂದಿಗೆ ನಿಮ್ಮ ಆಹಾರವು ಪೋಷಕಾಂಶಗಳಿಂದ ಕೂಡಿದೆಯೇ? ಅಥವಾ ಇದು ಅಲ್ಟ್ರಾ-ಸಂಸ್ಕರಿಸಿದ ಮತ್ತು ಸಕ್ಕರೆಯ ಅಂಶಗಳನ್ನು ಒಳಗೊಂಡಿದೆಯೇ ಎಂಬುದನ್ನು ನೋಡಿಕೊಳ್ಳಿ. ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳು, ಕೊಬ್ಬುಗಳು ಮತ್ತು ಪ್ರೋಟೀನ್‌ಗಳು ಸಮತೋಲಿತವಾಗಿದೆಯೇ ಎಂಬುದನ್ನು ನೋಡಿಕೊಳ್ಳಿ. ಕಡಿಮೆ ಮಟ್ಟದ ವಿಟಮಿನ್ ಬಿ 12 ಮತ್ತು ಡಿ ಸಹ ಬಳಲಿಕೆಗೆ ಕಾರಣವಾಗಬಹುದು.
ಇದನ್ನೂ ಓದಿ: ಮಹಿಳೆಯರಲ್ಲಿ ಪೌಷ್ಟಿಕತೆ: ಕುಟುಂಬಕ್ಕೆ ಆಧಾರಸ್ತಂಭವಾದ ಮಹಿಳೆಗೆ ಪೌಷ್ಟಿಕ ಆಹಾರ ಎಷ್ಟು ಮುಖ್ಯ ಗೊತ್ತಾ?
ಊಟದ ಸಮಯವು ಕೂಡ ಇಲ್ಲಿ ಸಮಾನ ಪಾತ್ರವನ್ನು ವಹಿಸುತ್ತದೆ. ಆದಷ್ಟು ನೀವು ಮಲಗುವ ಮತ್ತು ಊಟ ಮಾಡುವ ನಡುವೆ ಸಾಕಷ್ಟು ಸಮಯದ ಅಂತರವಿರುವಂತೆ ನೋಡಿಕೊಳ್ಳಿ. ಮಲಗುವ ಮುನ್ನ ಊಟ ಮಾಡಿದರೆ, ನಿಮ್ಮ ದೇಹಕ್ಕೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಕಷ್ಟು ಸಮಯ ಸಿಗುವುದಿಲ್ಲ. ಇದರಿಂದ, ಮರುದಿನ ನಿಮಗೆ ಭಾರವಾದ ಮತ್ತು ಆಲಸ್ಯ ಉಂಟುಮಾಡಬಹುದು.
ಉತ್ತೇಜಕಗಳ ಸೇವನೆ: ಒಂದು ಕಪ್ ಕಾಫಿ ಅಥವಾ ಕೆಫೀನ್ ಹೊಂದಿರುವ ಪಾನೀಯಗಳು ನಿಮಗೆ ಶಕ್ತಿ ನೀಡುತ್ತಿರುವಂತೆ ಹಲವಾರು ಅಂದುಕೊಳ್ಳಬಹುದು. ಆದರೆ, ಅವು ತಾತ್ಕಾಲಿಕ ನರ-ಉತ್ಸಾಹವನ್ನು ಮಾತ್ರ ಸೃಷ್ಟಿಸುತ್ತವೆ. ಅದಾದ ಬಳಿಕ, ಶಕ್ತಿಯ ಕುಸಿತಕ್ಕೆ ಕಾರಣವಾಗುತ್ತವೆ. ಹೀಗಾಗಿ, ಸಾಧ್ಯವಾದಷ್ಟು ಅವುಗಳನ್ನು ಕಡಿತಗೊಳಿಸಿ.
ನೀರಿನ ಸೇವನೆ: ಸ್ವಲ್ಪ ಮಟ್ಟಿನ ನಿರ್ಜಲೀಕರಣವೂ ಕೂಡ ನಿಮ್ಮನ್ನು ವ್ಯವಸ್ಥೆಯಿಂದ ಹೊರಹಾಕುತ್ತದೆ. ಬೆವರು, ಮಲವಿಸರ್ಜನೆ, ಮೂತ್ರವಿಸರ್ಜನೆ ಮತ್ತು ಇಡೀ ದಿನ ದೇಹದಲ್ಲಿನ ನೀರಿನ ಪ್ರಮಾಣವನ್ನು ಕಳೆದುಕೊಳ್ಳುತ್ತಿರುವಿರಿ. ಹೀಗಾಗಿ, ಸಾಕಷ್ಟು ನೀರು ಕುಡಿಯುವ ಮೂಲಕ ಇದನ್ನು ಸರಿಯಾಗಿರುವಂತೆ ನೋಡಿಕೊಳ್ಳಿ. ನಿರ್ಜಲೀಕರಣವು ನಿಮ್ಮ ಶಕ್ತಿಯ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ನಿದ್ರೆಗೆ ಅಡ್ಡಿಪಡಿಸುತ್ತದೆ ಮತ್ತು ಜೀವನಕ್ರಮದ ದಕ್ಷತೆಯನ್ನು ಕಡಿಮೆ ಮಾಡುತ್ತದೆ.
ತೂಕದ ಮೇಲೆ ಗಮನವಿರಲಿ: ಅಧಿಕ ತೂಕ ಅಥವಾ ಬೊಜ್ಜು ನಿದ್ರೆ ಮತ್ತು ಇತರ ಆರೋಗ್ಯದ ಅಪಾಯಗಳನ್ನು ಹೆಚ್ಚಿಸಬಹುದು. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿರುತ್ತದೆ. ನೀವು ಅದನ್ನು ಹೇಗೆ ಮಾಡುತ್ತೀರಿ ಎಂಬುದು ಅಷ್ಟೇ ಮುಖ್ಯ. ತುಂಬಾ ತಡವಾಗಿ ವ್ಯಾಯಾಮ ಮಾಡುವುದು ಅಥವಾ ಅತಿಯಾದ ತರಬೇತಿ ಪಡೆಯುವುದು ಸರಿಯಲ್ಲ. ವ್ಯಾಯಾಮಗಳು ನಿಮಗೆ ಚೈತನ್ಯವನ್ನುಂಟುಮಾಡುವಂತಿರಬೇಕು.
ಇದನ್ನೂ ಓದಿ: ಸೂರ್ಯನ ಬೆಳಕು ಎಷ್ಟು ಮುಖ್ಯ: ಉತ್ತಮ ಮನಸ್ಥಿತಿ, ಹೆಚ್ಚು ಶಕ್ತಿ ಮತ್ತು ಉತ್ತಮ ನಿದ್ರೆಗಾಗಿ ಇವುಗಳನ್ನು ಫಾಲೋ ಮಾಡಿ
ದಿನಪೂರ್ತಿ ಕುಳಿತುಕೊಳ್ಳುವ ನಿಮಗೆ ದಿನದ ಒಂದು ಗಂಟೆ ವ್ಯಾಯಾಮ ಮಾಡುವುದು ನಿಷ್ಪ್ರಯೋಜಕವಾಗಿರುತ್ತದೆ. ರಾತ್ರಿಯಲ್ಲಿ ಉತ್ತಮವಾಗಿ ನಿದ್ರೆ ಮಾಡಲು ದಿನವಿಡೀ ಇತರೆ ಕಾರ್ಯಗಳಲ್ಲಿ ತೊಡಗಿಕೊಂಡಿರಿ.
ಆರೋಗ್ಯದ ಅಪಾಯಗಳು: ಟೈಪ್ 2 ಡಯಾಬಿಟಿಸ್, ಥೈರಾಯ್ಡ್ ಸಂಬಂಧಿತ ಸಮಸ್ಯೆಗಳು, ನಿದ್ರೆಯ ವೇಳೆ ಉಸಿರಾಟದ ತೊಂದರೆ, ನಿದ್ರಾಹೀನತೆ, ಮೂತ್ರಪಿಂಡದ ಸಮಸ್ಯೆಗಳು, ಹೃದಯ ಮತ್ತು ಶ್ವಾಸಕೋಶದ ಸಮಸ್ಯೆಗಳು ಆಗಾಗ್ಗೆ ಆಯಾಸಕ್ಕೆ ಕಾರಣವಾಗಬಹುದು. ಯಾವದರಿಂದ ನಿಮಗೆ ತೊಂದರೆ ಆಗುತ್ತಿದೆ ಎಂಬುದನ್ನು ನಿರ್ಧರಿಸಲು ವೈದ್ಯರ ಮಾರ್ಗದರ್ಶನ ಪಡೆಯಿರಿ.
ಮಲಗುವ ಮುನ್ನ ನಿಮ್ಮ ಆಲೋಚನೆಗಳು: ಮಲಗುವ ಮುನ್ನ ನಿಮ್ಮ ಆಲೋಚನೆಗಳು ಮರುದಿನ ಬೆಳಿಗ್ಗೆ ನೀವು ಹೇಗೆ ಎಚ್ಚರಗೊಳ್ಳುತ್ತೀರಿ ಎಂಬುದನ್ನು ನಿರ್ಧರಿಸುತ್ತದೆ. ನೀವು ಖಿನ್ನತೆಗೆ ಒಳಗಾದಾಗ, ಆತಂಕದಲ್ಲಿರುವಾಗ ಅಥವಾ ಮರುದಿನವನ್ನು ಎದುರಿಸಲು ಬಯಸದಿದ್ದಾಗ, ನೀವು ಆಯಾಸದಿಂದಲೇ ಎಚ್ಚರಗೊಳ್ಳುತ್ತೀರಿ. ಮಲಗುವ ಮುನ್ನ, ದಿನದ ಸಕಾರಾತ್ಮಕ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮಲಗಿ. ಇದರಿಂದ ಮುಂಜಾನೆ ಸುಂದರವಾಗಿರುತ್ತದೆ.