ಛತ್ರಪತಿ ಶಿವಾಜಿ ರೈಲು ನಿಲ್ದಾಣಕ್ಕೆ ವಾಜೆ ಕೊಂಡೊಯ್ದ ಎನ್‌ಐಎ: ಘಟನಾವಳಿಯ ಮರುಸೃಷ್ಟಿ!

ಮುಕೇಶ್ ಅಂಬಾನಿ ಭದ್ರತಾ ಲೋಪ ಪ್ರಕರಣದಲ್ಲಿ ಬಂಧಿತರಾಗಿರುವ ಮುಂಬಯಿ ಕ್ರೈಂ ಬ್ರ್ಯಾಂಚ್ ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು, ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಇಂದು ಛತ್ರಪತಿ ಶಿವಾಜಿ ಮಹಾರಾಜ್ ರೈಲು ನಿಲ್ದಾಣಕ್ಕೆ ಕೊಂಡೊಯ್ದಿದೆ.

ಛತ್ರಪತಿ ಶಿವಾಜಿ ರೈಲು ನಿಲ್ದಾಣಕ್ಕೆ ವಾಜೆ ಕೊಂಡೊಯ್ದ ಎನ್‌ಐಎ: ಘಟನಾವಳಿಯ ಮರುಸೃಷ್ಟಿ!
Linkup
ಮುಂಬಯಿ: ಮುಕೇಶ್ ಅಂಬಾನಿ ಭದ್ರತಾ ಲೋಪ ಪ್ರಕರಣದಲ್ಲಿ ಬಂಧಿತರಾಗಿರುವ ಮುಂಬಯಿ ಕ್ರೈಂ ಬ್ರ್ಯಾಂಚ್ ಮಾಜಿ ಪೊಲೀಸ್ ಅಧಿಕಾರಿ ಅವರನ್ನು, ರಾಷ್ಟ್ರೀಯ ತನಿಖಾ ಸಂಸ್ಥೆ() ಇಂದು ಛತ್ರಪತಿ ಶಿವಾಜಿ ಮಹಾರಾಜ್ ರೈಲು ನಿಲ್ದಾಣಕ್ಕೆ ಕೊಂಡೊಯ್ದಿದೆ. ಉದ್ಯಮಿ ಮನ್ಸೂಖ್ ಹಿರೇನ್ ಕೊಲೆಯಾದ ದಿನ, ಸಚಿನ್ ವಾಜೆ ಛತ್ರಪತಿ ಶಿವಾಜಿ ಮಹಾರಾಜ್ ರೈಲು ನಿಲ್ದಾಣದಿಂದ ಥಾಣೆ ರೈಲು ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದರು. ಅಂದು ವಾಜೆ ರೈಲು ಹತ್ತುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು(ಏ.06-ಮಂಗಳವಾರ) ಛತ್ರಪತಿ ಶಿವಾಜಿ ಮಹಾರಾಜ್ ರೈಲು ನಿಲ್ದಾಣಕ್ಕೆ ವಾಜೆ ಅವರನ್ನು ಕೊಂಡೊಯ್ದ ಎನ್‌ಐಎ, ಘಟನಾವಳಿಗಳನ್ನು ಮರುಸೃಷ್ಟಿಸಿ ತನಿಖೆ ನಡೆಸಿತು. ಬಳಿಕ ಮುನ್ಸೂಕ್ ಹಿರೇನ್ ಅವರ ಮೃತದೇಹ ದೊರೆತ ಸ್ಥಳಕ್ಕೂ ವಾಜೆ ಅವರನ್ನು ಕೊಂಡೊಯ್ದ ಎನ್‌ಐಎ ತಂಡ, ವಾಜೆ ಅವರನ್ನು ತೀವ್ರ ವಿಚಾರಣೆಗೆ ಗುರಿಪಡಿಸಿತು. ಮಾರ್ಚ್4 ರಂದು ಸಚಿನ್ ವಾಜೆ ಛತ್ರಪತಿ ಶಿವಾಜಿ ಮಹಾರಾಜ್ ರೈಲು ನಿಲ್ದಾಣದಿಂದ ಥಾಣೆಗೆ ರೈಲು ಹತ್ತಿದ್ದರು. ಮಾರ್ಚ್ 5 ರಂದು ಉದ್ಯಮಿ ಮನ್ಸೂಕ್ ಹಿರೇನ್ ಅವರ ಮೃತದೇಹ ಥಾಣೆ ಸಮೀಪ ಪತ್ತೆಯಾಗಿತ್ತು. ಫೆ. 25ರಂದು ದೇಶದ ಪ್ರಖ್ಯಾತ ಉದ್ಯಮಿ ಮತ್ತು ರಿಲಯನ್ಸ್ ಇಂಡಸ್ಟ್ರಿ ಮುಖ್ಯಸ್ಥ ಮುಕೇಶ್ ಅಂಬಾನಿ ಮನೆ ಮುಂದೆ, ಸ್ಪೋಟಕಗಳನ್ನು ತುಂಬಿದ್ದ ಕಾರು ಪತ್ತೆಯಾಗಿತ್ತು. ಈ ಕಾರು ಕೊಲೆಯಾದ ಉದ್ಯಮಿ ಮನ್ಸೂಕ್ ಅವರಿಗೆ ಸೇರಿದ್ದಾಗಿದ್ದು, ಈ ಕಾರಿನಲ್ಲಿ ಸ್ಪೋಟಕಗಳನ್ನು ತುಂಬಿ ಅದನ್ನು ಅಂಬಾನಿ ಮನೆ ಎದುರು ನಿಲ್ಲಿಸಿದ್ದು ಇದೇ ಸಚಿನ್ ವಾಜೆ ಎಂಬುದು ತನಿಖೆಯಿಂದ ಬಯಲಾಗಿದೆ.