ಚೀನಾ ದೌರ್ಜನ್ಯ ಬಯಲಿಗೆಳೆದ ಭಾರತೀಯ ಮೂಲದ ಪತ್ರಕರ್ತೆಗೆ ಪುಲಿಟ್ಜರ್‌ ಪುರಸ್ಕಾರ

ಮುಸ್ಲಿಂ ಧರ್ಮ ಪ್ರತಿಪಾದಕರನ್ನು ಹತ್ತಿಕ್ಕಲು ಚೀನಾ ಕಮ್ಯುನಿಸ್ಟ್‌ ಸರಕಾರ ಮೆರೆದ ಕ್ರೌರ್ಯವನ್ನು ಸರಣಿ ವರದಿಗಳ ಮೂಲಕ ಬಿಚ್ಚಿಟ್ಟ ಭಾರತೀಯ ಮೂಲದ ಅಮೆರಿಕ ಪತ್ರಕರ್ತೆ ಮೇಘಾ ರಾಜಗೋಪಾಲನ್‌ ಅವರಿಗೆ ಪ್ರತಿಷ್ಠಿತ ಪುಲಿಟ್ಜರ್‌ ಪ್ರಶಸ್ತಿ ಸಂದಿದೆ.

ಚೀನಾ ದೌರ್ಜನ್ಯ ಬಯಲಿಗೆಳೆದ ಭಾರತೀಯ ಮೂಲದ ಪತ್ರಕರ್ತೆಗೆ ಪುಲಿಟ್ಜರ್‌ ಪುರಸ್ಕಾರ
Linkup
ನ್ಯೂಯಾರ್ಕ್: ಮುಸ್ಲಿಂ ಧರ್ಮ ಪ್ರತಿಪಾದಕರನ್ನು ಹತ್ತಿಕ್ಕಲು ಕಮ್ಯುನಿಸ್ಟ್‌ ಸರಕಾರ ಮೆರೆದ ಕ್ರೌರ್ಯವನ್ನು ಸರಣಿ ವರದಿಗಳ ಮೂಲಕ ಎಳೆ ಎಳೆಯಾಗಿ ಬಿಚ್ಚಿಟ್ಟು ಅಂತಾರಾಷ್ಟ್ರೀಯ ಗಮನ ಸೆಳೆದ ಭಾರತೀಯ ಮೂಲದ ಅಮೆರಿಕ ಪತ್ರಕರ್ತೆ ಅವರಿಗೆ ಪ್ರತಿಷ್ಠಿತ ಸಂದಿದೆ. ಅಮೆರಿಕದ 'ಬಝ್‌ಫೀಡ್‌' ಡಿಜಿಟಲ್‌ ಮಾಧ್ಯಮ ಸಂಸ್ಥೆಯಲ್ಲಿ ತನಿಖಾ ವರದಿಗಾರ್ತಿಯಾಗಿರುವ ಮೇಘಾ, ಭಾರತದ ಅಪ್ಪಟ ಪ್ರತಿಭೆ. ಅಂತಾರಾಷ್ಟ್ರೀಯ ವರದಿಗಾರಿಕೆ ವಿಭಾಗದಲ್ಲಿನ ಮೇರು ಸಾಧನೆಗಾಗಿ ಇವರಿಗೆ ಈ ಪ್ರಶಸ್ತಿ ದಕ್ಕಿದೆ. ಭಾರತೀಯ ಮೂಲದ ಇನ್ನೊಬ್ಬ ಪತ್ರಕರ್ತ ನೀಲ್‌ ಬೇಡಿ ಅವರಿಗೂ ಸ್ಥಳೀಯ ಶ್ರೇಷ್ಠ ತನಿಖಾ ವರದಿಗಾಗಿ ಪುಲಿಟ್ಜರ್‌ ಪ್ರಶಸ್ತಿ ಸಂದಿದೆ. ಉಕ್ಕಿನ ಕೋಟೆ ಭೇದಿಸಿದ ದಿಟ್ಟೆಸರ್ವಾಧಿಕಾರಿ ಶೈಲಿಯ ಆಡಳಿತ ವ್ಯವಸ್ಥೆ ಹೊಂದಿರುವ ಚೀನಾದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬೆಲೆ ಇಲ್ಲ. ಸರಕಾರದ ವಿಮರ್ಶೆ ಸುತಾರಾಂ ನಿಷಿದ್ಧ. ವೈಯಕ್ತಿಕ ನಂಬಿಕೆಗಳಿಗಿಂತ ಸರಕಾರದ ಆದೇಶವೇ ಇಲ್ಲಿ ಮಿಗಿಲು. ಇಂತಹ ಉಸಿರುಗಟ್ಟಿಸುವ ವಾತಾವರಣದ ನಡುವೆಯೂ ಧರ್ಮ ರಕ್ಷಣೆಗಾಗಿ ಹಪಹಪಿಸುವ ಪಂಗಡಗಳು ಇಲ್ಲಿ ನೂರಾರಿವೆ. ಉಯಿಘರ್‌ ಮತ್ತು ಕಜಾಖ್‌ ಮುಸ್ಲಿಂ ಪಂಗಡಗಳು ಅಂಥವುಗಳಲ್ಲಿ ಮುಖ್ಯ. ಇವು ತಮ್ಮ ಅಸ್ತಿತ್ವದ ಉಳಿವಿಗಾಗಿ ನಡೆಸಿದ ಹೋರಾಟವನ್ನು ಕ್ಸಿ ಜಿನ್‌ಪಿಂಗ್‌ ಸರಕಾರ ಕ್ರೌರ್ಯ ಕತ್ತಿ ಬಳಸಿ ಹತ್ತಿಕ್ಕುತ್ತಾ ಬಂದಿದೆ. ಧರ್ಮ ಪ್ರಚಾರ ನಡೆಸಿದ ಉಯಿಘರ್‌ ಮುಸ್ಲಿಮರನ್ನು ದಂಡನಾ ಶಿಬಿರಗಳಲ್ಲಿ ಕೂಡಿ ಹಾಕಿ ದೌರ್ಜನ್ಯ ಮೆರೆಯಲಾಗುತ್ತಿದೆ. 2017ರಲ್ಲಿ ಈ ಬಗ್ಗೆ ದೊಡ್ಡ ಚರ್ಚೆ ಹುಟ್ಟಿಕೊಂಡಾಗ ಚೀನಾ ಸರಕಾರ, ತಾನು ಅಂತಹ ದೌರ್ಜನ್ಯ ನಡೆಸಿಲ್ಲ ಎಂದು ಹೇಳಿಕೊಂಡಿತ್ತು. ಈ ನಡುವೆಯೇ ಕಮ್ಯುನಿಸ್ಟರ ಉಕ್ಕಿನ ಕೋಟೆ ಭೇದಿಸಿದ ಮೇಘ ರಾಜಗೋಪಾಲನ್‌, ಮುಸ್ಲಿಂ ದಂಡನಾ ಶಿಬಿರಗಳನ್ನು ಪತ್ತೆ ಹಚ್ಚಿ, ಅಲ್ಲಿನ ಕ್ರೌರ್ಯವನ್ನು ವರದಿ ಮಾಡಿದ್ದರು. ಧರ್ಮದ ಕಾರಣಕ್ಕೆ ಕತ್ತಲೆ ಶಿಬಿರಗಳಲ್ಲಿ ಕೊಳೆಯುತ್ತಿದ್ದ ಸಾವಿರಾರು ಮುಸ್ಲಿಮರನ್ನು ಮೇಘಾ ಸಂಪರ್ಕಿಸಿದ್ದರು. ಅವರಲ್ಲಿ ಅನೇಕರ ಸಂದರ್ಶನ ಮಾಡಿ ಪ್ರಕಟಿಸಿದಾಗ ಚೀನಾ ಬೆಚ್ಚಿ ಬಿದ್ದಿತ್ತು. ಕ್ಸಿಂಜಿಯಾಂಗ್‌ ಪ್ರಾಂತದಲ್ಲಿರುವ ಶಿಕ್ಷಾ ಶಿಬಿರಗಳ ಬಗ್ಗೆ ಹತ್ತಾರು ವರ್ಷಗಳಿಂದ ಚೀನಾ ರಹಸ್ಯ ಕಾಯ್ದುಕೊಂಡು ಬಂದಿತ್ತು. ಹೊರ ಜಗತ್ತಿನ ಯಾರಿಗೂ ಅಲ್ಲಿ ಎಂಟ್ರಿ ಇರಲಿಲ್ಲ. ವಿದೇಶಿ ಪತ್ರಕರ್ತರ ಪ್ರವೇಶವಂತೂ ದೂರದ ಮಾತಾಗಿತ್ತು. ಅಂತಹ ಕ್ಲಿಷ್ಟ ನಿರ್ಬಂಧಗಳ ನಡುವೆಯೇ ನುಸುಳಿಕೊಂಡು ಶಿಬಿರ ಸೇರಿದ್ದ ಮೇಘಾ, ಸರಣಿ ವರದಿಗಳನ್ನು ಬರೆದಿದ್ದರು. ನಂತರ ಅವರ ಬಾಯಿ ಮುಚ್ಚಿಸಲು ಚೀನಾ ಸರಕಾರ ವೀಸಾ ರದ್ದುಗೊಳಿಸಿತು. ನಂತರ ದೇಶದಿಂದ ಹೊರ ದಬ್ಬಿತು. ಆದರೂ ಎದೆಗುಂದದ ಮೇಘಾ, ಲಂಡನ್‌ಗೆ ತೆರಳಿ ಅಲ್ಲಿ ಆರ್ಕಿಟೆಕ್ಟ್ ಹಾಗೂ 3ಡಿ ಸ್ಯಾಟಲೈಟ್‌ ಇಮೇಜ್‌ ಎಕ್ಸ್‌ಪರ್ಟ್‌ ಅಲಿಸನ್‌ ಕಿಲ್ಲಿಂಗ್‌ ಮತ್ತು ದತ್ತಾಂಶ ತಜ್ಞ ಕ್ರಿಸ್ಟೋ ಬಸ್ಚೆಕ್‌ ಜತೆಗೂಡಿ ಶಿಬಿರದ ಸಮಗ್ರ ಚಿತ್ರಣ ಬಿಡಿಸಿ ವರದಿ ಮಾಡಿದ್ದರು. ಆ ಸಾಹಸ ಅವರಿಗೆ ಈಗ ಪುಲಿಟ್ಜರ್‌ ಪ್ರಶಸ್ತಿ ತಂದುಕೊಟ್ಟಿದೆ. ಸದ್ಯ ಲಂಡನ್‌ನಲ್ಲಿ ನೆಲೆಸಿರುವ ಮೇಘಾ, ''ನನ್ನ ಪಾಲಿಗೆ ಇದು ಅಚ್ಚರಿಯ ಸುದ್ದಿ. ಇಂತಹ ದೊಡ್ಡ ಗೌರವವನ್ನು ನಾನು ನಿರೀಕ್ಷಿಸಿರಲಿಲ್ಲ,'' ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. 11 ಲಕ್ಷ ಬಹುಮಾನ ಮೊತ್ತ ಪ್ರತಿ ವರ್ಷ ಹನ್ನೊಂದು ವಿಭಾಗಗಳಲ್ಲಿ ಪುಲಿಟ್ಜರ್‌ ಪ್ರಶಸ್ತಿ ನೀಡಲಾಗುತ್ತದೆ. ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರುವ ವರದಿ, ಲೇಖನಗಳನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ವಿಜೇತರಿಗೂ ತಲಾ 11 ಲಕ್ಷ ರೂ. (15,000 ಡಾಲರ್‌) ನಗದು ಬಹುಮಾನ ನೀಡಲಾಗುತ್ತದೆ. ಸ್ಥಳೀಯ ವರದಿಗಾರಿಕೆಗೆ ಬೇಡಿಗೆ ಪ್ರಶಸ್ತಿ ಭಾರತೀಯ ಮೂಲದ ಇನ್ನೊಬ್ಬ ಪತ್ರಕರ್ತ ನೀಲ್‌ ಬೇಡಿ ಅವರಿಗೂ ಪುಲಿಟ್ಜರ್‌ ಪ್ರಶಸ್ತಿ ಸಂದಿದೆ. ಅಮೆರಿಕದ 'ಟ್ಯಾಂಪಾ ಬೇ ಟೈಮ್ಸ್‌' ಪತ್ರಿಕೆಯ ತನಿಖಾ ವರದಿ ವಿಭಾಗದ ಮುಖ್ಯಸ್ಥರಾಗಿರುವ ಬೇಡಿ, ಫ್ಲೋರಿಡಾದ ಸ್ಥಳೀಯ ಕಾನೂನು ಜಾರಿ ಅಧಿಕಾರಿಗಳ ಗೋಲ್ಮಾಲ್‌ ಅನ್ನು ಪತ್ತೆ ಮಾಡಿ ವರದಿ ಬರೆದಿದ್ದರು. ಭವಿಷ್ಯದ ಅಪರಾಧ ಶಂಕಿತರನ್ನು ಗುರುತಿಸಲು ಕಂಪ್ಯೂಟರ್‌ ಮಾಡೆಲಿಂಗ್‌ ಬಳಸುವ ಅಧಿಕಾರಗಳ ವಿಧಾನದಲ್ಲಿ ಇರುವ ಪ್ರಮಾದ ಮತ್ತು ಸಂಚನ್ನು ಬೇಡಿ, ತಮ್ಮ ಪತ್ರಿಕೆಯ ಇನ್ನೊಬ್ಬ ವರದಿಗಾರ್ತಿ ಕ್ಯಾಥಲಿನ್‌ ಮ್ಯಾಕ್‌ಗ್ರೋರಿ ಜತೆಗೂಡಿ ಬಯಲಿಗೆಳೆದಿದ್ದರು. ಇಬ್ಬರಿಗೂ ಪುಲಿಟ್ಜರ್‌ ಲಭಿಸಿದೆ.