ಫೇಸ್‌ಬುಕ್‌ನಲ್ಲಿ ಬಿಜೆಪಿ ನಾಯಕನನ್ನು ಟೀಕಿಸಿದ್ದಕ್ಕೆ ಜೈಲು..! 'ಸುಪ್ರೀಂ' ಗುಡುಗಿದ ಬಳಿಕ ರಿಲೀಸ್..!

'ಟೀಕೆಗಳಿಂದ ತಾಳ್ಮೆಗೆಟ್ಟು ದೊಡ್ಡ ಪ್ರಕರಣ ದಾಖಲಿಸುವುದು ವಿಪರ್ಯಾಸ. ಇಂದು ಸಂಜೆ 5 ಗಂಟೆ ಒಳಗೆ ಲೈಚೋಂಬಮ್‌ ಅವರನ್ನು ಬಿಡುಗಡೆಗೊಳಿಸಿ. ಯಾವುದೇ ಸಬೂಬನ್ನು ನ್ಯಾಯಾಲಯ ಕೇಳುವುದಿಲ್ಲ' - ಸುಪ್ರೀಂ ಕೋರ್ಟ್‌ ಗುಡುಗು

ಫೇಸ್‌ಬುಕ್‌ನಲ್ಲಿ ಬಿಜೆಪಿ ನಾಯಕನನ್ನು ಟೀಕಿಸಿದ್ದಕ್ಕೆ ಜೈಲು..! 'ಸುಪ್ರೀಂ' ಗುಡುಗಿದ ಬಳಿಕ ರಿಲೀಸ್..!
Linkup
: ಬಿಜೆಪಿ ನಾಯಕರೊಬ್ಬರನ್ನು ಟೀಕಿಸಿದ ಆರೋಪದಡಿ ಜೈಲು ಸೇರಿದ್ದ ಮಣಿಪುರದ ಸಾಮಾಜಿಕ ಕಾರ್ಯಕರ್ತ ಅವರನ್ನು ಸುಪ್ರೀಂ ಕೋರ್ಟ್‌ ಆದೇಶದಂತೆ ಸೋಮವಾರ ಸಂಜೆ ಬಿಡುಗಡೆ ಮಾಡಲಾಗಿದೆ. ಬೆಳಗ್ಗೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ. ವೈ. ಚಂದ್ರಚೂಡ್‌ ಮತ್ತು ಎಂ. ಆರ್‌. ಶಾ ಅವರ ನ್ಯಾಯಪೀಠ, 'ಟೀಕೆಗಳಿಂದ ತಾಳ್ಮೆಗೆಟ್ಟು ದೊಡ್ಡ ಪ್ರಕರಣ ದಾಖಲಿಸುವುದು ವಿಪರ್ಯಾಸ. ಇಂದು ಸಂಜೆ 5 ಗಂಟೆ ಒಳಗೆ ಲೈಚೋಂಬಮ್‌ ಅವರನ್ನು ಬಿಡುಗಡೆಗೊಳಿಸಿ. ಯಾವುದೇ ಸಬೂಬನ್ನು ನ್ಯಾಯಾಲಯ ಕೇಳುವುದಿಲ್ಲ' ಎಂದು ಆದೇಶ ಮಾಡಿತು. ಆ ಪ್ರಕಾರ, ಸಂಜೆ 4.45ರ ವೇಳೆಗೆ ಲೈಚೋಂಬಮ್‌ ಅವರನ್ನು ಮಣಿಪುರದ ಸಾಜಿವಾದಲ್ಲಿನ ಸೆಂಟ್ರಲ್‌ ಜೈಲಿನಿಂದ ಬಿಡುಗಡೆ ಮಾಡಲಾಯಿತು. ' ಬಿಜೆಪಿ ಅಧ್ಯಕ್ಷ ಪ್ರೊ. ಎಸ್‌. ಟೀಕೇಂದ್ರ ಸಿಂಗ್‌ ಅವರು ಕೋವಿಡ್‌ ಸೋಂಕಿನಿಂದ ಮೃತಪಟ್ಟಾಗ ಅವರ ಸಾವಿನ ಬಗ್ಗೆ ಲೈಚೋಂಬಮ್‌ ಅಣಕವಾಡಿದ್ದರು. ಕೊರೊನಾ ಸೋಂಕಿತರ ಚಿಕಿತ್ಸೆಗೆ ಬೇಕಾಗುವುದು ಗೋ ಮೂತ್ರ ಅಥವಾ ಸೆಗಣಿ ಅಲ್ಲ. ಗುಣಪಡಿಸಲು ಬೇಕಾಗುವುದು ವಿಜ್ಞಾನ ಮತ್ತು ಕಾಮನ್‌ಸೆನ್ಸ್‌. ಪ್ರೊಫೆಸರ್‌ ಜೀ ಸಂತಾಪ ನಿಮಗೆ' ಎಂದು ಲೈಚೋಂಬಮ್‌ ಫೇಸ್‌ಬುಕ್‌ನಲ್ಲಿ ಬರೆದಿದ್ದರು. ಲೈಚೋಂಬಮ್‌ ಎರಂಡ್ರೊ ಅವರ ಈ ಪೋಸ್ಟ್‌ ಭಾರೀ ವೈರಲ್ ಆಗಿತ್ತು. ಪರ-ವಿರೋಧ ವಾದ ಸರಣಿಗೆ ವೇದಿಕೆಯೂ ಆಗಿತ್ತು. ಈ ಬಗ್ಗೆ ಬಿಜೆಪಿ ಕಾರ್ಯಕರ್ತರ ದೂರು ಆಧರಿಸಿ, ರಾಷ್ಟ್ರೀಯ ಭದ್ರತಾ ಕಾಯಿದೆ ಅಡಿ ಲೈಚೋಂಬಮ್‌ ಅವರನ್ನು ಬಂಧಿಸಿ, ಜೈಲಿಗೆ ಅಟ್ಟಲಾಗಿತ್ತು.