ಒಂದೇ ತಿಂಗಳಲ್ಲಿ 20 ಲಕ್ಷಕ್ಕೂ ಅಧಿಕ ಭಾರತೀಯ ಅಕೌಂಟ್‌ಗಳನ್ನು ಬ್ಯಾನ್‌ ಮಾಡಿದ ವಾಟ್ಸ್‌ಆ್ಯಪ್‌!

ಹಾನಿಕಾರಕ ಮತ್ತು ಹಿಂಸಾತ್ಮಕ ಅಂಶವುಳ್ಳ ಸಂದೇಶ ರವಾನಿಸುವ ವಾಟ್ಸ್‌ಆ್ಯಪ್‌ ಖಾತೆಗಳನ್ನು ಗುರುತಿಸಿ, ಅವುಗಳನ್ನು ನಿಷೇಧಿಸಲಾಗುತ್ತಿದೆ. ಇಂತಹ ಖಾತೆಗಳನ್ನು ಗುರುತಿಸಲೆಂದೇ ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ ಎಂದು ವಾಟ್ಸ್‌ಆ್ಯಪ್‌ ತಿಳಿಸಿದೆ.

ಒಂದೇ ತಿಂಗಳಲ್ಲಿ 20 ಲಕ್ಷಕ್ಕೂ ಅಧಿಕ ಭಾರತೀಯ ಅಕೌಂಟ್‌ಗಳನ್ನು ಬ್ಯಾನ್‌ ಮಾಡಿದ ವಾಟ್ಸ್‌ಆ್ಯಪ್‌!
Linkup
ಹೊಸದಿಲ್ಲಿ: ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ನೂತನ ನಿಯಮಗಳ ಅನ್ವಯ ಒಂದು ತಿಂಗಳಲ್ಲಿ ದೇಶದ 20 ಲಕ್ಷಕ್ಕೂ ಅಧಿಕ ಖಾತೆಗಳನ್ನು ನಿಷೇಧಿಸಲಾಗಿದೆ. ನಿಯಮಗಳ ಅನ್ವಯ ವಾಟ್ಸ್‌ಆ್ಯಪ್‌ ಮೊದಲ ಮಾಸಿಕ ಪಾರದರ್ಶಕ ವರದಿ ನೀಡಿದ್ದು, ಮೇ 15ರಿಂದ ಜೂನ್‌ 15ರ ಅವಧಿಯಲ್ಲಿ 20 ಲಕ್ಷಕ್ಕೂ ಅಧಿಕ ಖಾತೆ ರದ್ದುಗೊಳಿಸಿದೆ. ಇದೇ ಅವಧಿಯಲ್ಲಿ 345 ದೂರುಗಳು ಸಹ ದಾಖಲಾಗಿವೆ ಎಂದು ಉಲ್ಲೇಖಿಸಿದೆ. ಹಾನಿಕಾರಕ ಮತ್ತು ಹಿಂಸಾತ್ಮಕ ಅಂಶವುಳ್ಳ ಸಂದೇಶ ರವಾನಿಸುವ ವಾಟ್ಸ್‌ಆ್ಯಪ್‌ ಖಾತೆಗಳನ್ನು ಗುರುತಿಸಿ, ಅವುಗಳನ್ನು ನಿಷೇಧಿಸಲಾಗುತ್ತಿದೆ. ಇಂತಹ ಖಾತೆಗಳನ್ನು ಗುರುತಿಸಲೆಂದೇ ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ ಎಂದು ವಾಟ್ಸ್‌ಆ್ಯಪ್‌ ತಿಳಿಸಿದೆ. ಹಾನಿಕಾರಕ ಅಂಶವುಳ್ಳ ಸಂದೇಶಗಳ ರವಾನೆ ಕುರಿತು ದಾಖಲಾಗಿರುವ 345 ದೂರುಗಳ ಕುರಿತು ಸಂಸ್ಥೆಯು ಪರಿಶೀಲಿಸಿ, ತನಿಖೆ ನಡೆಸಿ, 63 ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಲ್ಲಿ ಮಾಹಿತಿ ನೀಡಿದೆ. ಮೇ 26ರಿಂದ ನೂತನ ಐಟಿ ನಿಯಮಗಳು ಕಡ್ಡಾಯವಾಗಿದ್ದು, ನಿಯಮಗಳ ಅಡಿಯಲ್ಲಿ ಈಗಾಗಲೇ ಗೂಗಲ್‌, ಕೂ ಹಾಗೂ ಟ್ವಿಟರ್‌ ಸಂಸ್ಥೆಗಳು ಮಾಸಿಕ ವರದಿ ಸಲ್ಲಿಸಿವೆ.