ಗಡಿಯಲ್ಲಿ ಮತ್ತೆ ಚೀನಾ ಸೇನೆಯ ಕುತಂತ್ರ..! ಎಲ್‌ಎಸಿಯಲ್ಲಿ ಡ್ರ್ಯಾಗನ್ ಪ್ರಾಬಲ್ಯ ಹೆಚ್ಚಳ..!

ಸಮರದಂತಹ ತುರ್ತು ಪರಿಸ್ಥಿತಿಗಳಲ್ಲಿ ವಾಯು ಪ್ರದೇಶ ಮತ್ತು ಗಡಿ ಭಾಗದ ಭೂಪ್ರದೇಶದಿಂದ ಒಂದೇ ಬಾರಿಗೆ ಸಂಘಟಿತ ದಾಳಿ ನಡೆಸಿ, ಎದುರಾಳಿಯ ಎದೆಗುಂದಿಸುವ ತಂತ್ರವನ್ನು ಚೀನಾ ಸೇನೆಯು ಹೆಣೆಯುತ್ತಿದೆ.

ಗಡಿಯಲ್ಲಿ ಮತ್ತೆ ಚೀನಾ ಸೇನೆಯ ಕುತಂತ್ರ..! ಎಲ್‌ಎಸಿಯಲ್ಲಿ ಡ್ರ್ಯಾಗನ್ ಪ್ರಾಬಲ್ಯ ಹೆಚ್ಚಳ..!
Linkup
: ವಾಸ್ತವ ನಿಯಂತ್ರಣ ರೇಖೆ ()ಯಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸುವ ಮೂಲಕ ಭಾರತದ ಸೇನೆಗೆ ಎಚ್ಚರಿಕೆಯ ಸಂದೇಶ ರವಾನಿಸಲು ಚೀನಾ ಮುಂದಾಗಿದೆ. ಈ ನಿಟ್ಟಿನಲ್ಲಿ ಭೂಸೇನಾ ಪಡೆ ಮತ್ತು ವಾಯುಪಡೆಗಳನ್ನು ಸಂಯೋಜಿಸಿ ಹೊಸದಾದ ವಾಯು ರಕ್ಷಣಾ ವ್ಯವಸ್ಥೆಯೊಂದನ್ನು ರಚಿಸಲಾಗಿದೆ. ಇದೇ ಮೊದಲ ಬಾರಿಗೆ ಇಂಥದ್ದೊಂದು ವಿಶೇಷ ವ್ಯವಸ್ಥೆ ರಚನೆ ಮಾಡಿದ್ದು, ಗೌಪ್ಯ ಸ್ಥಳದಲ್ಲಿ ಇದರ ತಾಲೀಮು ಕೂಡ ಸಾಗಿದೆ ಎಂದು ತಿಳಿದು ಬಂದಿದೆ. ಗಡಿ ಹತ್ತಿರದ ಟಿಬೆಟ್‌ ಮತ್ತು ಕ್ಸಿನ್‌ಜಿಯಾಂಗ್‌ ಪ್ರಾಂತ್ಯಗಳಲ್ಲಿನ ತನ್ನ ನೆಲೆಗಳಿಗೆ ನೂತನ ಮಿಲಿಟರಿ ಶಸ್ತ್ರಾಸ್ತ್ರಗಳು, ಹೆಚ್ಚುವರಿ ರೆಡಾರ್‌ ಕೇಂದ್ರಗಳು ಹಾಗೂ ಇತರ ಸಾಧನಗಳನ್ನು ಎಲ್‌ಎಸಿಯಲ್ಲಿ ಪಾರಮ್ಯ ಸಾಧಿಸಲು ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ) ಸಮರ ಸಿದ್ಧತೆಯಲ್ಲಿ ತೊಡಗಿದೆ. ವಾಯುದಾಳಿಯನ್ನು ಸಮರ್ಥವಾಗಿ ಎದುರಿಸಿ, ತನ್ನ ಕ್ಷಿಪಣಿ ದಾಳಿ ಮತ್ತು ಯುದ್ಧ ವಿಮಾನಗಳ ಹಾರಾಟಕ್ಕೆ ಅಗತ್ಯವಾದ ಏರ್‌ಪೋರ್ಟ್‌ಗಳ ಪ್ರದೇಶವನ್ನು ಚೀನಾ ಸಜ್ಜುಗೊಳಿಸುವಲ್ಲಿ ನಿರತವಾಗಿದೆ ಎಂದು ಗುಪ್ತಚರ ವರದಿಗಳು ತಿಳಿಸಿವೆ. 10 ಸೇನಾಪಡೆಗಳ ನಿಯಂತ್ರಣ: ಹೊಸ ಪಿಎಲ್‌ಎನಲ್ಲಿನ 10 ಭೂಸೇನಾ ಪಡೆಗಳನ್ನು ಪೂರ್ಣವಾಗಿ ವಾಯು ಪಡೆಯ ನಿಯಂತ್ರಣಕ್ಕೆ ಒಪ್ಪಿಸಲಾಗಿದೆ. ಸಮರದಂತಹ ತುರ್ತು ಪರಿಸ್ಥಿತಿಗಳಲ್ಲಿ ವಾಯು ಪ್ರದೇಶ ಮತ್ತು ಗಡಿ ಭಾಗದ ಭೂಪ್ರದೇಶದಿಂದ ಒಂದೇ ಬಾರಿಗೆ ಸಂಘಟಿತ ದಾಳಿ ನಡೆಸಿ, ಎದುರಾಳಿಯ ಎದೆಗುಂದಿಸುವ ತಂತ್ರ ಇದಾಗಿದೆ. ಈ ವೇಳೆ ಭೂಸೇನಾ ಪಡೆಗಳು ವಾಯುಪಡೆಯ ನಿರ್ದೇಶನ ಪಾಲನೆಯಲ್ಲಿದ್ದರೆ, ಸಂಘಟಿತ ದಾಳಿ ಹೆಚ್ಚು ಪರಿಣಾಮಕಾರಿ ಆಗಿರಲಿದೆ ಎಂದು ಹೊಸ ವ್ಯವಸ್ಥೆ ಮಾಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.