ಬ್ರೆಜಿಲ್‌ನಲ್ಲಿ ಕೋವ್ಯಾಕ್ಸಿನ್ ಲಸಿಕೆ ಹಗರಣ: ತಾನು ಯಾವ ತಪ್ಪೂ ಮಾಡಿಲ್ಲ ಎಂದ ಭಾರತ್ ಬಯೋಟೆಕ್

ಬ್ರೆಜಿಲ್ ಜತೆಗಿನ ಕೋವ್ಯಾಕ್ಸಿನ್ ಲಸಿಕೆ ಒಪ್ಪಂದದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಪ್ರತಿ ಪ್ರಕ್ರಿಯೆಯನ್ನು ನಿಯಮಬದ್ಧವಾಗಿಯೇ ನಡೆಸಲಾಗಿದೆ ಮತ್ತು ಇದರಲ್ಲಿ ಯಾವುದೇ ಮುಂಗಡ ಹಣ ಪಾವತಿಯಾಗಿಲ್ಲ ಎಂದು ಭಾರತ್ ಬಯೋಟೆಕ್ ತಿಳಿಸಿದೆ.

ಬ್ರೆಜಿಲ್‌ನಲ್ಲಿ ಕೋವ್ಯಾಕ್ಸಿನ್ ಲಸಿಕೆ ಹಗರಣ: ತಾನು ಯಾವ ತಪ್ಪೂ ಮಾಡಿಲ್ಲ ಎಂದ ಭಾರತ್ ಬಯೋಟೆಕ್
Linkup
ಹೈದರಾಬಾದ್: ಜತೆ ನಡೆಸಿದ ಖರೀದಿ ಒಪ್ಪಂದದಲ್ಲಿ ತನ್ನಿಂದ ಯಾವ ತಪ್ಪೂ ನಡೆದಿಲ್ಲ ಎಂದು ಸಂಸ್ಥೆ ಹೇಳಿದೆ. ತಾನು ಮುಂಗಡ ಪಾವತಿ ಸೇರಿದಂತೆ ಸಾಮಾನ್ಯವಾದ, ವ್ಯಾಪಕವಾಗಿ ಸ್ವೀಕರಿಸಲಾಗಿರುವ ಮತ್ತು ಸ್ಥಾಪಿತ ಪ್ರಕ್ರಿಯೆಯನ್ನು ಅನುಸರಿಸಿರುವುದಾಗಿ ಪ್ರತಿಪಾದಿಸಿದೆ. ಭಾರತದ ಮೊದಲ ಸ್ವದೇಶಿ ನಿರ್ಮಿತ ಕೋವಿಡ್ 19 ಎನಿಸಿರುವ ಕೋವ್ಯಾಕ್ಸಿನ್‌ನ 20 ಮಿಲಿಯನ್ ಡೋಸ್ ಖರೀದಿಗಾಗಿ ಮಾಡಿಕೊಂಡಿದ್ದ 324 ಮಿಲಿಯನ್ ಡಾಲರ್ ಒಪ್ಪಂದದಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನರೊ ಅಕ್ರಮ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಒಪ್ಪಂದವನ್ನು ಅಲ್ಲಿನ ಆರೋಗ್ಯ ಸಚಿವಾಲಯ ಅಮಾನತುಗೊಳಿಸಿದ ವರದಿ ಹಿನ್ನೆಲೆಯಲ್ಲಿ ಭಾರತ್ ಬಯೋಟೆಕ್ ಈ ಸ್ಪಷ್ಟೀಕರಣ ನೀಡಿದೆ. ಸಿಂಗಪುರದಲ್ಲಿನ ಮ್ಯಾಡಿಸನ್ ಬಯೋಟೆಕ್ ಪ್ರೈ.ಲಿ ಎಂಬ ನಕಲಿ ಕಂಪೆನಿಗೆ ಮುಂಗಡ ಹಣ ಪಾವತಿಸುವಂತೆ ತನ್ನ ಪಾಲುದಾರ ಪ್ರೆಸಿಸಾ ಮೆಡಿಕಾಮೆಂಟೊಸ್ ಸಂಸ್ಥೆಗೆ ಭಾರತ್ ಬಯೋಟೆಕ್ ಹೇಳಿತ್ತು ಎಂಬ ಬ್ರೆಜಿಲ್ ಆರೋಗ್ಯ ಸಚಿವಾಲಯದ ಮಾಜಿ ಅಧಿಕಾರಿಯ ಆರೋಪಕ್ಕೆ ಅದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಭಾರತ್ ಬಯೋಟೆಕ್ ಅಧ್ಯಕ್ಷ ಕೃಷ್ಣಾ ಎಲ್ಲಾ ಅವರು ಸ್ಥಾಪಿಸಿದ ಅಥವಾ ಖರೀದಿಸಿದ 13 ಕಂಪೆನಿಗಳಲ್ಲಿ ಮ್ಯಾಡಿಸನ್ ಬಯೋಟೆಕ್ ಕಂಪೆನಿ ಒಂದಾಗಿದೆ. ಈ ಎಲ್ಲ ಸಂಸ್ಥೆಗಳಲ್ಲಿ ಆರು ನಗರಗಳಲ್ಲಿ 3,000ಕ್ಕೂ ಅಧಿಕ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಸಂಸ್ಥೆ ಹೇಳಿಕೆ ನೀಡಿದೆ. 'ಬ್ರೆಜಿಲ್‌ನ ಆರೋಗ್ಯ ಸಚಿವಾಲಯದ ಜತೆ ನವೆಂಬರ್ 2020ರಿಂದ 2021ರ ಜೂನ್ 29ರವರೆಗೆ ನಡೆಸಿದ ಮೊದಲ ಕೆಲವು ಸಭೆಗಳಿಂದಲೂ ಈ ಎಂಟು ತಿಂಗಳ ಸುದೀರ್ಘ ಅವಧೀಯಲ್ಲಿ ಒಪ್ಪಂದ ಹಾಗೂ ನಿಯಂತ್ರಣಾ ಅನುಮೋದನೆಗಳಿಗಾಗಿ ಹಂತ ಹಂತದ ಪ್ರಕ್ರಿಯೆಗಳನ್ನು ಅನುಸರಿಸಲಾಗಿದೆ' ಎಂದು ವಿವರಣೆ ನೀಡಿದೆ. 2021ರ ಜೂನ್ 4ರಂದು ತುರ್ತು ಬಳಕೆಗೆ ಅನುಮೋದನೆ ಪಡೆದುಕೊಂಡಿದ್ದು, ಜೂನ್ 29ರವರೆಗೂ ಬ್ರೆಜಿಲ್ ಆರೋಗ್ಯ ಸಚಿವಾಲಯಕ್ಕೆ ಯಾವುದೇ ಲಸಿಕೆ ಪೂರೈಕೆ ಮಾಡಿಲ್ಲ ಹಾಗೂ ಅದರಿಂದ ಯಾವುದೇ ಮುಂಗಡ ಹಣ ಪಡೆದುಕೊಂಡಿಲ್ಲ ಎಂದು ತಿಳಿಸಿದೆ. ಮೊದಲೇ ಬೇಡಿಕೆ ಇರಿಸಿದ್ದರು'ಭಾರತ್ ಬಯೋಟೆಕ್ ಜಗತ್ತಿನಾದ್ಯಂತ ಅನೇಕ ದೇಶಗಳ ಜತೆಗೆ ಒಪ್ಪಂದ ಹಾಗೂ ನಿಯಂತ್ರಕ ಅನುಮೋದನೆಗಳಿಗೆ ಇದೇ ರೀತಿಯ ನಡೆಯನ್ನು ಅನುಸರಿಸಿದೆ. ಕೋವ್ಯಾಕ್ಸಿನ್ ಪೂರೈಕೆ ಯಶಸ್ವಿಯಾಗಿ ನಡೆಯುತ್ತಿದೆ ಕೂಡ. ಅಮೆರಿಕ, ಯುರೋಪ್ ಮತ್ತು ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಲಸಿಕೆಗೆ ಅನುಮತಿ ದೊರಕುವ ಮುನ್ನವೇ ಕೆಲವು ದೇಶಗಳಲ್ಲಿ ಆರೋಗ್ಯ ಸಚಿವಾಲಯಗಳು ಖರೀದಿಗಾಗಿ ಆರ್ಡರ್‌ಗಳನ್ನು ಇರಿಸಿದ್ದವು. ಆದರೆ ತುರ್ತು ಬಳಕೆ ಅನುಮೋದನೆ ಬಳಿಕವಷ್ಟೇ ಖರೀದಿ ನಡೆದಿವೆ' ಎಂದು ವಿವರಿಸಿದೆ.