ಶೀಘ್ರವೇ ದೇಶದಲ್ಲೂ ಮಕ್ಕಳಿಗೆ ಕೊರೊನಾ ಲಸಿಕೆ; ಬ್ರಿಟನ್‌ನಲ್ಲಿ ಫೈಜರ್‌ ವಾಕ್ಸಿನ್‌ಗೆ ಅನುಮತಿ

ಕೊರೊನಾ 3ನೇ ಅಲೆಯ ಭೀತಿಯ ನಡುವೆಯೇ ಮಕ್ಕಳಿಗೂ ಲಸಿಕೆ ನೀಡುವ ನಿಟ್ಟಿನಲ್ಲಿ ಪ್ರಯತ್ನಗಳು ತೀವ್ರಗೊಂಡಿವೆ. 12-18 ವರ್ಷದವರ ಮೇಲೆ ಕೊವ್ಯಾಕ್ಸಿನ್‌ ಲಸಿಕೆಯ ಪ್ರಯೋಗ ನಡೆಸಲು ಬೃಹನ್ಮುಂಬಯಿ ಮಹಾನಗರ ಪಾಲಿಕೆ ಕೇಂದ್ರ ಸರಕಾರದ ಅನುಮತಿ ಕೇಳಿದೆ.

ಶೀಘ್ರವೇ ದೇಶದಲ್ಲೂ ಮಕ್ಕಳಿಗೆ ಕೊರೊನಾ ಲಸಿಕೆ; ಬ್ರಿಟನ್‌ನಲ್ಲಿ ಫೈಜರ್‌ ವಾಕ್ಸಿನ್‌ಗೆ ಅನುಮತಿ
Linkup
ಮುಂಬಯಿ: ಕೊರೊನಾ ಮೂರನೇ ಅಲೆಯು ಅಪ್ಪಳಿಸುವ ಆತಂಕದ ನಡುವೆಯೇ ಮಕ್ಕಳಿಗೂ ಲಸಿಕೆ ನೀಡುವ ನಿಟ್ಟಿನಲ್ಲಿ ಪ್ರಯತ್ನಗಳು ತೀವ್ರಗೊಂಡಿವೆ. 12-18 ವರ್ಷದವರ ಮೇಲೆ ಕೊವ್ಯಾಕ್ಸಿನ್‌ ಲಸಿಕೆಯ ಪ್ರಯೋಗ ನಡೆಸಲು ಬೃಹನ್ಮುಂಬಯಿ ಮಹಾನಗರ ಪಾಲಿಕೆಯು ಕೇಂದ್ರ ಸರಕಾರದಿಂದ ಅನುಮತಿ ಕೇಳಿದೆ. ಇನ್ನೊಂದೆಡೆ, 12ರಿಂದ 15 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಸಮ್ಮತಿಸಿದೆ. ಹೀಗಾಗಿ ಭಾರತದಲ್ಲಿಯೂ ಮಕ್ಕಳಿಗೆ ಶೀಘ್ರದಲ್ಲಿಯೇ ಲಸಿಕೆ ಲಭ್ಯವಾಗಲಿದೆ ಎನ್ನುವ ವಿಶ್ವಾಸ ಮೂಡಿದೆ. "ಭಾರತ್‌ ಬಯೊಟೆಕ್‌ನ ದೇಶೀಯ ಲಸಿಕೆ ಕೊವ್ಯಾಕ್ಸಿನ್‌ ಅನ್ನು ಪ್ರೌಢ ವಯಸ್ಸಿನ ಮಕ್ಕಳಿಗೆ ನೀಡುವುದು ನಮ್ಮ ಉದ್ದೇಶ. ಅದಕ್ಕಾಗಿ ಲಸಿಕಾ ಕಂಪನಿಗಳು ನಮ್ಮನ್ನು ಸಂಪರ್ಕಿಸಿದ್ದವು. ಹಾಗಾಗಿ ಕೇಂದ್ರ ಸರಕಾರದಿಂದ ಅಧಿಕೃತ ಸಮ್ಮತಿ ಕೇಳಿದ್ದೇವೆ. ನಂತರ ನೀತಿ ಸಮಿತಿ ಎದುರು ಪ್ರಸ್ತಾವನೆ ಇರಿಸಲಿದ್ದೇವೆ. ಸದ್ಯಕ್ಕೆ ಐಸಿಎಂಆರ್‌ ಮಾರ್ಗಸೂಚಿಯಂತೆ ಎರಡು ಆಸ್ಪತ್ರೆಗಳಲ್ಲಿ ಲಸಿಕೆ ನೀಡಲು ಅನುಮತಿ ಕೋರಿದ್ದೇವೆ,' ಎಂದು ಬೃಹನ್ಮುಂಬಯಿ ಮಹಾನರ ಪಾಲಿಕೆಯ ಹೆಚ್ಚುವರಿ ಆಯುಕ್ತ ಸುರೇಶ್‌ ಕಾಕನಿ ಹೇಳಿದ್ದಾರೆ.

ಬಿಹಾರ ರಾಜಧಾನಿ ಪಟನಾದಲ್ಲಿನ ಏಮ್ಸ್‌, ದಿಲ್ಲಿಯಲ್ಲಿನ ಏಮ್ಸ್‌ನಲ್ಲಿ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಸಮ್ಮತಿ ಮೇರೆಗೆ ಮಕ್ಕಳ ಮೇಲೆ ಕೊವ್ಯಾಕ್ಸಿನ್‌ ಲಸಿಕೆ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಕಳೆದ ಮೇ 11ರಂದು ಡಿಸಿಜಿಐ ಇದಕ್ಕೆ ಅನುಮತಿ ನೀಡಿತ್ತು. 12 ರಿಂದ 18 ವರ್ಷದ ಮಕ್ಕಳ ಮೇಲೆ ಕೊವ್ಯಾಕ್ಸಿನ್‌ ಲಸಿಕೆಯ 2-3ನೇ ಹಂತದ ಪ್ರಯೋಗಕ್ಕೆ ಡಿಸಿಜಿಐ ಅನುಮತಿ ನೀಡಿದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪಾಲ್‌ ಕೆಲದಿನಗಳ ಮುನ್ನ ಹೇಳಿದ್ದರು. ಫೈಜರ್‌ಗೆ ಬ್ರಿಟನ್‌ ಸಮ್ಮತಿಫೈಜರ್‌ ಮತ್ತು ಬಯೊಎನ್‌ಟೆಕ್‌ ಕಂಪನಿಗಳು ಅಭಿವೃದ್ಧಿಪಡಿಸಿರುವ ಕೊರೊನಾ ನಿರೋಧಕ ಲಸಿಕೆಯನ್ನು 12 ರಿಂದ 15 ವರ್ಷದ ಮಕ್ಕಳಿಗೆ ನೀಡಲು ಬ್ರಿಟನ್‌ ಸರಕಾರ ಸಮ್ಮತಿ ನೀಡಿದೆ. ''ಅಮೆರಿಕ, ಐರೋಪ್ಯ ಒಕ್ಕೂಟದಲ್ಲಿ ಬಹಳಷ್ಟು ಪರಿಶೀಲನೆ, ಅಧ್ಯಯನಗಳ ಮೂಲಕ ಮಕ್ಕಳಿಗೆ ಈ ಲಸಿಕೆ ಸುರಕ್ಷಿತ ಎಂಬುದು ಖಾತ್ರಿಯಾಗಿದೆ," ಎಂದು ಬ್ರಿಟನ್‌ ಸರಕಾರ ಹೇಳಿದೆ. "ಎರಡು ಡೋಸ್‌ಗಳ ಲಸಿಕೆ ಸುರಕ್ಷತೆ, ಪರಿಣಾಮಕಾರಿ ಗುಣಮಟ್ಟದ ಪ್ರಯೋಗಗಳಲ್ಲಿ ಉತ್ತಮ ಫಲಿತಾಂಶ ನೀಡಿವೆ. ಯಾವ ದಿನಾಂಕದಿಂದ ಮಕ್ಕಳಿಗೆ ಲಸಿಕೆ ನೀಡಲು ಆರಂಭಿಸಬೇಕು ಎನ್ನುವುದನ್ನು ತಜ್ಞರ ಟಾಸ್ಕ್‌ಫೋರ್ಸ್‌ ನಿರ್ಧರಿಸಲಿದೆ,'' ಎಂದು ಬ್ರಿಟನ್‌ನ ಔಷಧ ನಿಯಂತ್ರಣ ಪ್ರಾಧಿಕಾರ ಎಂಎಚ್‌ಆರ್‌ಎ ಮುಖ್ಯಸ್ಥ ಜೂನ್‌ ರೈನಿ ಹೇಳಿದ್ದಾರೆ. ಐರೋಪ್ಯ ಒಕ್ಕೂಟದ ವೈದ್ಯಕೀಯ ಏಜೆನ್ಸಿ ಮತ್ತು ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣಾಲಯ ಕಳೆದ ತಿಂಗಳು, ಫೈಜರ್‌ ಲಸಿಕೆಯು ಮಕ್ಕಳಿಗೆ ನೀಡಲು ಸುರಕ್ಷಿತವಾಗಿವೆ ಎಂದಿದ್ದವು. ಅಮೆರಿಕದಲ್ಲಿ ಪ್ರೌಢ ಮಕ್ಕಳ ಲಸಿಕಾ ಅಭಿಯಾನವನ್ನು ಈಗಾಗಲೇ ಶುರು ಮಾಡಲಾಗಿದೆ. ಪಾಶ್ಚಿಮಾತ್ಯ ದೇಶಗಳ ಪೈಕಿ ಸಾಮೂಹಿಕ ಲಸಿಕಾ ಅಭಿಯಾನವನ್ನು ಆರಂಭಿಸಿದ ಮೊದಲ ದೇಶ ಬ್ರಿಟನ್‌ ಆಗಿದೆ.