ಗುಜರಾತ್‌ ನೂತನ ಸಿಎಂ ಭೂಪೇಂದ್ರ ಪಟೇಲ್ ಅವರಿಂದ ಸೆ. 13ಕ್ಕೆ ಪ್ರಮಾಣವಚನ ಸ್ವೀಕಾರ

ಗುಜರಾತ್‌ನ ನೂತನ ಮುಖ್ಯಮಂತ್ರಿಯಾಗಿ ತಮ್ಮ ಹೆಸರು ಘೋಷಣೆಯಾದ ನಂತರ ಭೂಪೇಂದ್ರ ಪಟೇಲ್ ಅವರ ಇದೇ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ್ದಾರೆ. ನೂತನ ಮುಖ್ಯಮಂತ್ರಿ ಪಟೇಲ್‌ ಸೋಮವಾರ (ಸೆ.13) ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಗುಜರಾತ್‌ ನೂತನ ಸಿಎಂ ಭೂಪೇಂದ್ರ ಪಟೇಲ್ ಅವರಿಂದ ಸೆ. 13ಕ್ಕೆ ಪ್ರಮಾಣವಚನ ಸ್ವೀಕಾರ
Linkup
ಅಹಮದಾಬಾದ್: ಗುಜರಾತ್‌ನ ನೂತನ ಮುಖ್ಯಮಂತ್ರಿಯಾಗಿ ತಮ್ಮ ಹೆಸರು ಘೋಷಣೆಯಾದ ನಂತರ ಭೂಪೇಂದ್ರ ಪಟೇಲ್ ಅವರ ಇದೇ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ್ದಾರೆ. ನೂತನ ಪಟೇಲ್‌ ಸೋಮವಾರ (ಸೆ.13) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನನ್ನ ಮೇಲೆ ವಿಶ್ವಾಸವಿಟ್ಟು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ. ಮಾಜಿ ಸಿಎಂ ಮತ್ತು ಉತ್ತರ ಪ್ರದೇಶದ ಹಾಲಿ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರ ಆಶೀರ್ವಾದ ಪಡೆಯಲು ಸಂತೋಷವಾಗುತ್ತಿದೆ. ನಾನು ಮುಖ್ಯಮಂತ್ರಿ ಆಗುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಸರ್ಕಾರದಿಂದ ಗುಜರಾತ್‌ನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಪಟೇಲ್‌ ಅವರು ಸಮಾಜದ ತಳಮಟ್ಟದಿಂದಲೇ ಕೆಲಸ ಮಾಡಿದ್ದಾರೆ. ಸಹಕಾರಿ ಕ್ಷೇತ್ರದ ಮೇಲೆ ಜ್ಞಾನವಿದ್ದು, ಪಕ್ಷದ ಕಾರ್ಯಕರ್ತರೊಂದಿಗೆ ಕೆಲಸ ಮಾಡಿದ್ದಾರೆ. ಅವರ ಈ ಆಡಳಿತಾತ್ಮಕ ಸಾಮರ್ಥ್ಯಗಳೇ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಲು ಪ್ರಮುಖ ಅಂಶಗಳಾಗಿವೆ ಎಂದು ಬಿಜೆಪಿ ಅಧ್ಯಕ್ಷ ಸಿ. ಆರ್‌. ಪಟೇಲ್‌ ಹೇಳಿದ್ದಾರೆ. ಭೂಪೇಂದ್ರ ಪಟೇಲ್ ಅವರು ಮಾತ್ರ ಸೋಮವಾರ (ಸೆ.13) ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಿಆರ್ ಪಾಟಿಲ್ ಹೇಳಿದ್ದಾರೆ. ಉಳಿದ ಸಚಿವರನ್ನು ಪಕ್ಷದ ವರಿಷ್ಠರು ಶೀಘ್ರದಲ್ಲೇ ನಿರ್ಧರಿಸಲಿದ್ದಾರೆ. ವಿಜಯ್ ರೂಪಾನಿ ಮತ್ತು ಹಿರಿಯ ನಾಯಕರ ಪಾತ್ರಗಳ ಬಗ್ಗೆ ಪಕ್ಷದ ಧುರೀಣರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸಿ. ಆರ್‌. ಪಟೇಲ್‌ ಹೇಳಿದರು. ಭೂಪೇಂದ್ರ ಪಟೇಲ್ ಅವರು ಸಿಎಂ ವಿಜಯ್ ರೂಪಾನಿ ಮತ್ತು ಬಿಜೆಪಿ ಅಧ್ಯಕ್ಷ ಸಿಆರ್ ಪಾಟೀಲ್ ಅವರೊಂದಿಗೆ ರಾಜಭವನವನ್ನು ತಲುಪಿ, ಸರ್ಕಾರ ರಚಿಸುವುದಕ್ಕಾಗಿ ಆಚಾರ್ಯ ದೇವವ್ರತ್ ಅವರಿಗೆ ಹಕ್ಕುಗಳನ್ನು ಹಸ್ತಾಂತರಿಸಿದರು. ಭೂಪೇಂದ್ರ ಪಟೇಲ್ ಸೋಮವಾರ ಮಧ್ಯಾಹ್ನ 2. 20ಕ್ಕೆ ಗುಜರಾತ್ ಸಿ.ಎಂ. ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರ ಸಚಿವ ಸಂಪುಟ ಬುಧವಾರ ಪ್ರಮಾಣವಚನ ಸ್ವೀಕರಿಸಬಹುದು. ಗುಜರಾತ್‌ನ (Gujarat) ನಿರ್ಗಮಿತ ಮುಖ್ಯಮಂತ್ರಿ ವಿಜಯ್‌ ರೂಪಾನಿ ಹಠಾತ್‌ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಅಚ್ಚರಿ ಎಂಬಂತೆ ಘಟ್ಲೋಡಿಯಾ ಕ್ಷೇತ್ರದ ಶಾಸಕ ಅವರನ್ನು ಬಿಜೆಪಿ ಶಾಸಕಾಂಗ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. 57 ವರ್ಷದ ಭೂಪೇಂದ್ರ ಪಟೇಲ್‌ ಅವರು ಗುಜರಾತ್‌ನ ಮಾಜಿ ಸಿಎಂ ಹಾಗೂ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌ ಅವರ ಅತ್ಯಾಪ್ತರರಾಗಿದ್ದು, ಅಹಮದಾಬಾದ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಅಮದ್ವಾಡ ಮುನ್ಸಿಪಲ್ ಕಾರ್ಪೋರೇಶನ್ ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಕೂಡ ಆಗಿ ಸೇವೆ ಸಲ್ಲಿಸಿದ್ದಾರೆ. ಭೂಪೇಂದ್ರ ಪಟೇಲ್‌ ಅವರ ಹೆಸರನ್ನು ವಿಜಯ್ ರೂಪಾನಿಯವರೇ ಸೂಚಿಸಿದ್ದಾರೆ ಎನ್ನಲಾಗಿದೆ. ಗುಜರಾತ್ನ ಘಾಟ್ಲೋಡಿಯಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಭೂಪೇಂದ್ರ ಪಟೇಲ್ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಶಿಕಾಂತ್ ಪಟೇಲ್ ವಿರುದ್ಧ 1,17,000 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು. ಈ ಕ್ಷೇತ್ರದಲ್ಲಿ ಭೂಪೇಂದ್ರ ಪಟೇಲ್ಗೂ ಮೊದಲು ಆನಂದಿಬೆನ್ ಪಟೇಲ್ ಅಭ್ಯರ್ಥಿಯಾಗಿದ್ದರು.