ತಾರತಮ್ಯ ಏಕೆ? ಮಹಿಳೆಯರೂ ಎನ್‌ಡಿಎ ಪರೀಕ್ಷೆ ಬರೆಯಲಿ: ಭಾರತೀಯ ಸೇನೆಗೆ ಸುಪ್ರೀಂಕೋರ್ಟ್ ತರಾಟೆ

ಭಾರತೀಯ ಸೇನೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಸೈನಿಕ ಶಾಲೆ ಹಾಗೂ ಇತರೆ ವಿಭಾಗಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡದ ಭಾರತೀಯ ಸೇನೆಯ ನೀತಿಯನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ತಾರತಮ್ಯ ಏಕೆ? ಮಹಿಳೆಯರೂ ಎನ್‌ಡಿಎ ಪರೀಕ್ಷೆ ಬರೆಯಲಿ: ಭಾರತೀಯ ಸೇನೆಗೆ ಸುಪ್ರೀಂಕೋರ್ಟ್ ತರಾಟೆ
Linkup
ಹೊಸದಿಲ್ಲಿ: ಸೆಪ್ಟಂಬರ್ 5ರಂದು ನಡೆಯಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ () ಪ್ರವೇಶ ಪರೀಕ್ಷೆ ಬರೆಯಲು ಮಹಿಳೆಯರಿಗೆ ಅವಕಾಶ ನೀಡಿ ಬುಧವಾರ ಮಧ್ಯಂತರ ಆದೇಶ ಹೊರಡಿಸಿದೆ. ಸಹ ಶಿಕ್ಷಣವು ಏಕೆ ಸಮಸ್ಯೆಯಾಗಲಿದೆ ಎಂದು ಪ್ರಶ್ನಿಸಿರುವ ನ್ಯಾಯಾಲಯ, ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಭಾರತೀಯ ಸೇನೆಯನ್ನು ತರಾಟೆಗೆ ತೆಗೆದುಕೊಂಡಿದೆ. ಎನ್‌ಡಿಎ ಮತ್ತು ನೌಕಾದಳ ಅಕಾಡೆಮಿ ಪರೀಕ್ಷೆಗಳಿಗೆ ಹಾಜರಾಗಲು ಮಹಿಳಾ ಅಭ್ಯರ್ಥಿಗಳಿಗೆ ಅನುಮತಿ ನೀಡದ ಕೇಂದ್ರದ ನೀತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಹೃಷಿಕಶ್ ರಾಯ್ ಅವರನ್ನು ಒಳಗೊಂಡ ನ್ಯಾಯಪೀಠ ಈ ಆದೇಶ ನೀಡಿದೆ. ಈ ಪರೀಕ್ಷೆಯ ಫಲಿತಾಂಶಗಳು ಅರ್ಜಿ ಕುರಿತಾದ ತನ್ನ ಅಂತಿಮ ತೀರ್ಪಿನ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸ್ಪಷ್ಟಪಡಿಸಿರುವ ನ್ಯಾಯಪೀಠ, ಈ ಆದೇಶದ ಉದ್ದೇಶವು ಜಾರಿಗೆ ಬರುವಂತೆ ಪ್ರಚಾರ ಮಾಡುವಂತೆ ಅಧಿಸೂಚನೆ ಹೊರಡಿಸಲು ಯುಪಿಎಸ್‌ಸಿಗೆ ನಿರ್ದೇಶನ ನೀಡಿದೆ. ಸೇನೆಯ ಮೂರು ಮಾದರಿಗಳ ಪೈಕಿ ಭಾರತೀಯ ಸೇನಾ ಅಕಾಡೆಮಿ (ಐಎಂಎ) ಮತ್ತು ಅಧಿಕಾರಿಗಳ ತರಬೇತಿ ಅಕಾಡೆಮಿಗೆ (ಒಟಿಎ) ಮಹಿಳೆಯರಿಗೆ ಅವಕಾಶ ನೀಡಲಾಗುತ್ತದೆ. ಇದು ಅಂತಿಮವಾಗಿ ರಾಷ್ಟ್ರೀಯ ಭದ್ರತೆಯ ವಿಚಾರ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ವಾದಿಸಿದರು. ಸೇನೆಯ ನೀತಿಯು ಲಿಂಗ ತಾರತಮ್ಯ ಆಧಾರಿತವಾಗಿದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.