ಕೇಂದ್ರದ ಹಠಮಾರಿತನಕ್ಕೆ ವಿಪಕ್ಷಗಳ ಆಕ್ರೋಶ; 14 ಪ್ರತಿಪಕ್ಷಗಳ 18 ನಾಯಕರ ಜಂಟಿ ಹೇಳಿಕೆ ಬಿಡುಗಡೆ

ಪೆಗಾಸಸ್‌ ಮತ್ತು ರೈತರ ಸಮಸ್ಯೆ ಕುರಿತು ಉಭಯ ಸದನಗಳಲ್ಲಿಯೂ ಚರ್ಚೆ ಆಗಬೇಕು ಎನ್ನುವುದು ನಮ್ಮ ಬೇಡಿಕೆ. ಆದರೆ ಸರಕಾರವು ಪ್ರತಿಪಕ್ಷಗಳ ಬೇಡಿಕೆ ಕುರಿತು ಕಠೋರ ನಿಲುವು ತಾಳಿದ್ದು, ಹಠಮಾರಿ-ತನದ ಧೋರಣೆಯನ್ನು ಪ್ರದರ್ಶಿಸುತ್ತಿದೆ. ಸರಕಾರ ಸಂಸದೀಯ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸಬೇಕು ಮತ್ತು ಚರ್ಚೆ ನಡೆಸಲು ಒಪ್ಪಿಕೊಳ್ಳಬೇಕು ಎಂಬುದಾಗಿ ಮತ್ತೊಮ್ಮೆ ಮನವಿ ಮಾಡುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೇಂದ್ರದ ಹಠಮಾರಿತನಕ್ಕೆ ವಿಪಕ್ಷಗಳ ಆಕ್ರೋಶ; 14 ಪ್ರತಿಪಕ್ಷಗಳ 18 ನಾಯಕರ ಜಂಟಿ ಹೇಳಿಕೆ ಬಿಡುಗಡೆ
Linkup
ಹೊಸದಿಲ್ಲಿ: ಕೇಂದ್ರ ಸರಕಾರದ ವಿರುದ್ಧ ಸಂಸತ್ತಿನಲ್ಲಿ ಒಗ್ಗಟ್ಟಿನ ಹೋರಾಟ ನಡೆಸಲು ತೀರ್ಮಾನಿಸಿರುವ ಪ್ರತಿಪಕ್ಷಗಳು, ಮುಂಗಾರು ಅಧಿವೇಶನದಲ್ಲಿ ಕಲಾಪ ನಡೆಯದಿರಲು ಸರಕಾರದ ಹಠಮಾರಿತನವೇ ಕಾರಣ ಎಂದು ಆರೋಪಿಸಿವೆ. 14 ಪ್ರತಿಪಕ್ಷಗಳ 18 ನಾಯಕರು ಬುಧವಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿ ಸರಕಾರದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರತಿಪಕ್ಷ ನಾಯಕರಿಗೆ 'ಉಪಾಹಾರ ಕೂಟ' ಆಯೋಜಿಸಿದ್ದ ಮರುದಿನವೇ ಜಂಟಿ ಹೇಳಿಕೆ ಹೊರಬಿದ್ದಿದೆ. ಸಂಸತ್‌ನಲ್ಲಿ ಉದ್ಭವವಾಗಿರುವ ಬಿಕ್ಕಟ್ಟಿಗೆ ಪ್ರತಿಪಕ್ಷಗಳೇ ಕಾರಣ ಎಂದು ಸರಕಾರ ಆರೋಪಿಸುತ್ತಿರುವುದು ದುರಾದೃಷ್ಟಕರ. ವಾಸ್ತವ ಎಂದರೆ ಇಂತಹ ಸನ್ನಿವೇಶ ನಿರ್ಮಾಣವಾಗಲು ಸರಕಾರವೇ ಕಾರಣ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಪೆಗಾಸಸ್‌ ಮತ್ತು ರೈತರ ಸಮಸ್ಯೆ ಕುರಿತು ಉಭಯ ಸದನಗಳಲ್ಲಿಯೂ ಚರ್ಚೆ ಆಗಬೇಕು ಎನ್ನುವುದು ನಮ್ಮ ಬೇಡಿಕೆ. ಆದರೆ ಸರಕಾರವು ಪ್ರತಿಪಕ್ಷಗಳ ಬೇಡಿಕೆ ಕುರಿತು ಕಠೋರ ನಿಲುವು ತಾಳಿದ್ದು, ಹಠಮಾರಿ-ತನದ ಧೋರಣೆಯನ್ನು ಪ್ರದರ್ಶಿಸುತ್ತಿದೆ. ಸರಕಾರ ಸಂಸದೀಯ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸಬೇಕು ಮತ್ತು ಚರ್ಚೆ ನಡೆಸಲು ಒಪ್ಪಿಕೊಳ್ಳಬೇಕು ಎಂಬುದಾಗಿ ಮತ್ತೊಮ್ಮೆ ಮನವಿ ಮಾಡುತ್ತೇವೆ ಎಂದು ಹೇಳಿಕೆ ತಿಳಿಸಿದೆ. ಸಹಿ ಹಾಕಿರುವ ಪ್ರಮುಖರು: ಮಲ್ಲಿಕಾರ್ಜುನ ಖರ್ಗೆ ಮತ್ತು ಆನಂದ್‌ ಶರ್ಮಾ (ಕಾಂಗ್ರೆಸ್‌), ಶರದ್‌ ಪವಾರ್‌ (ಎನ್‌ಸಿಪಿ), ಟಿ.ಆರ್‌.ಬಾಲು ಮತ್ತು ತಿರುಚ್ಚಿ ಶಿವ (ಡಿಎಂಕೆ), ರಾಮ್‌ಗೋಪಾಲ್‌ ಯಾದವ್‌ (ಸಮಾಜವಾದಿ ಪಾರ್ಟಿ), ಡೆರೆಕ್‌ ಓ'ಬ್ರಿಯಾನ್‌ ಮತ್ತು ಕಲ್ಯಾಣ್‌ ಬ್ಯಾನರ್ಜಿ (ಟಿಎಂಸಿ), ಸಂಜಯ್‌ ರಾವತ್‌ ಮತ್ತು ವಿನಾಯಕ ರಾವತ್‌ (ಶಿವಸೇನೆ), ಮನೋಜ್‌ ಝಾ (ಆರ್‌ಜೆಡಿ), ಎಲ- ಮಾರಂ ಕರೀಂ (ಸಿಪಿಐ-ಎಂ), ಬಿನೊಯ್‌ ವಿಶ್ವಂ (ಸಿಪಿಐ), ಸಶೀಲ್‌ ಗುಪ್ತಾ (ಆಪ್‌), ಮೊಹಮ್ಮದ್‌ ಬಷೀರ್‌ (ಐಯುಎಂಎಲ್‌), ಹಸ್ನೈನ್‌ ಮಸೂದಿ (ನ್ಯಾಷನಲ್‌ ಕಾನ್ಫರೆನ್ಸ್‌), ಎನ್‌.ಕೆ.ಪ್ರೇಮಚಂದ್ರನ್‌ (ಆರ್‌ಎಸ್‌ಪಿ), ಎಂ.ವಿ.ಶ್ರೇಯಸ್‌ಕುಮಾರ್‌ (ಎಲ್‌ಜೆಡಿ). ನಡೆಯದ ಕಲಾಪ: ಪೆಗಾಸಸ್‌, ಕೃಷಿ ಕಾಯಿದೆ ಮತ್ತು ಇಂಧನ ಬೆಲೆ ಏರಿಕೆ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳು ಧರಣಿ ನಡೆಸಿದ್ದರಿಂದ ಸಂಸತ್ತಿನ ಉಭಯ ಸದನಗಳಲ್ಲಿ ಬುಧವಾರವೂ ಕಲಾಪ ನಡೆಯಲಿಲ್ಲ. ಗದ್ದಲದ ನಡುವೆಯೇ ಕೆಲವು ವಿಧೇಯಕಗಳನ್ನು ಚರ್ಚೆ ಇಲ್ಲದೆ ಎರಡೂ ಸದನಗಳಲ್ಲಿಅಂಗೀಕರಿಸಲಾಯಿತು.