ಖ್ಯಾತ ಹೃದ್ರೋಗ ತಜ್ಞ, ಪದ್ಮಶ್ರೀ ಪುರಸ್ಕೃತ ಡಾ. ಕೆಕೆ ಅಗರವಾಲ್ ಕೋವಿಡ್‌ನಿಂದ ನಿಧನ

ದೇಶದ ಖ್ಯಾತ ಹೃದ್ರೋಗ ತಜ್ಞರಲ್ಲಿ ಒಬ್ಬರಾದ, ಭಾರತೀಯ ವೈದ್ಯಕೀಯ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ಕೆಕೆ ಅಗರವಾಲ್ ಅವರು ಕೋವಿಡ್ ಸಮಸ್ಯೆಯಿಂದಾಗಿ ಸೋಮವಾರ ರಾತ್ರಿ ದೆಹಲಿಯ ಏಮ್ಸ್‌ನಲ್ಲಿ ನಿಧನರಾದರು.

ಖ್ಯಾತ ಹೃದ್ರೋಗ ತಜ್ಞ, ಪದ್ಮಶ್ರೀ ಪುರಸ್ಕೃತ ಡಾ. ಕೆಕೆ ಅಗರವಾಲ್ ಕೋವಿಡ್‌ನಿಂದ ನಿಧನ
Linkup
ಹೊಸದಿಲ್ಲಿ: ಭಾರತೀಯ ವೈದ್ಯಕೀಯ ಸಂಸ್ಥೆಯ ಮಾಜಿ ಅಧ್ಯಕ್ಷ, ಪದ್ಮಶ್ರೀ ಪುರಸ್ಕೃತ ಡಾ. ಅವರು ಕೋವಿಡ್‌ನಿಂದಾಗಿ ಸೋಮವಾರ ರಾತ್ರಿ ನಿಧನರಾದರು. ದೇಶದ ಪ್ರಸಿದ್ಧ ವೈದ್ಯಕೀಯ ತಜ್ಞರಲ್ಲಿ ಒಬ್ಬರಾದ ಅವರು, ಕಳೆದ ಕೆಲವು ದಿನಗಳಿಂದ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೋವಿಡ್ ವಿರುದ್ಧದ ಸುದೀರ್ಘ ಹೋರಾಟದ ಬಳಿಕ ಡಾ. ಅಗರವಾಲ್ (62) ಸೋಮವಾರ ರಾತ್ರಿ 11.30ಕ್ಕೆ ಕೊನೆಯುಸಿರೆಳೆದರು ಎಂದು ಅವರ ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತ ಹೇಳಿಕೆ ನೀಡಲಾಗಿದೆ. ಅವರು ಕೋವಿಡ್‌ನ ಎರಡೂ ಡೋಸ್ ಲಸಿಕೆಗಳನ್ನು ಪಡೆದುಕೊಂಡಿದ್ದರು. "ಅವರು ವೈದ್ಯರಾದ ಸಂದರ್ಭದಿಂದಲೂ ತಮ್ಮ ಜೀವನವನ್ನು ಸಾರ್ವಜನಿಕರ ಕಲ್ಯಾಣ ಹಾಗೂ ಆರೋಗ್ಯ ಜಾಗೃತಿ ಮೂಡಿಸುವುದಕ್ಕೆ ಮುಡಿಪಾಗಿಟ್ಟಿದ್ದರು. ಸಾಂಕ್ರಾಮಿಕ ಸನ್ನಿವೇಶದ ನಡುವೆಯೂ ಅವರು ಜನಸಮೂಹಕ್ಕೆ ತಿಳಿವಳಿಕೆ ನೀಡುವ ನಿರಂತರ ಪ್ರಯತ್ನ ಮಾಡುತ್ತಿದ್ದರು. ಅನೇಕ ವಿಡಿಯೋಗಳು, ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಅವರು ಒಂದು ಕೋಟಿಗೂ ಅಧಿಕ ಜನರನ್ನು ತಲುಪುವ ಮೂಲಕ ಅಸಂಖ್ಯಾತ ಜೀವಗಳನ್ನು ಉಳಿಸಿದ್ದರು' ಎಂದು ಹೇಳಿಕೆ ವಿವರಿಸಿದೆ. ಹೃದ್ರೋಗ ತಜ್ಞರಾಗಿದ್ದ ಅಗರವಾಲ್ ಅವರು, ಭಾರತೀಯ ಹೃದಯ ಕಾಳಜಿ ಪ್ರತಿಷ್ಠಾನದ ಮುಖ್ಯಸ್ಥರೂ ಆಗಿದ್ದರು. 2010ರಲ್ಲಿ ಪದ್ಮಶ್ರೀ ಪುರಸ್ಕಾರ ಪಡೆದಿದ್ದರು. ಫೆಬ್ರವರಿಯಲ್ಲಿ ಎರಡನೆಯ ಡೋಸ್ ಲಸಿಕೆ ಪಡೆದುಕೊಂಡ ಬಳಿಕ, ಲಸಿಕೆ ಪಡೆಯುವುದರ ಕುರಿತಾದ ಹಿಂಜರಿಕೆ ಹಾಗೂ ತಪ್ಪು ಅಭಿಪ್ರಾಯಗಳ ಬಗ್ಗೆ ಫೇಸ್‌ಬುಕ್‌ನಲ್ಲಿ ಪ್ರಶ್ನೋತ್ತರಗಳನ್ನು ಪ್ರಕಟಿಸಿದ್ದರು.