ಕೋವಿಡ್ ಪಾಸಿಟಿವ್‌ಗೆ ತುತ್ತಾದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿದೆ. ತಮ್ಮಲ್ಲಿ ಲಘು ಲಕ್ಷಣಗಳಿದ್ದು, ಮನೆಯಲ್ಲಿಯೇ ಪ್ರತ್ಯೇಕವಾಗಿರುವುದಾಗಿ ಅವರು ತಿಳಿಸಿದ್ದಾರೆ. ದಿಲ್ಲಿಯಲ್ಲಿ ಶೇ 81ರಷ್ಟು ಕೋವಿಡ್ ಪ್ರಕರಣಗಳು ಓಮಿಕ್ರಾನ್ ತಳಿಯದ್ದಾಗಿವೆ ಎಂದು ಭಾನುವಾರ ವರದಿಯಾಗಿತ್ತು.

ಕೋವಿಡ್ ಪಾಸಿಟಿವ್‌ಗೆ ತುತ್ತಾದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
Linkup
ಹೊಸದಿಲ್ಲಿ: ಮುಖ್ಯಮಂತ್ರಿ ಅವರಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಅವರು ಮನೆಯಲ್ಲಿಯೇ ಸ್ವತಃ ಪ್ರತ್ಯೇಕವಾಗಿ ಉಳಿದುಕೊಂಡಿದ್ದಾರೆ. ಈ ಮಾಹಿತಿಯನ್ನು ಅವರು ಮಂಗಳವಾರ ಬೆಳಿಗ್ಗೆ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮಲ್ಲಿ ಲಘು ಲಕ್ಷಣಗಳು ಇರುವುದಾಗಿ ತಿಳಿಸಿದ್ದಾರೆ. 'ನನ್ನ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದಿದೆ. ನನ್ನಲ್ಲಿ ಲಘು ಲಕ್ಷಣಗಳಿವೆ. ಮನೆಯಲ್ಲಿ ಸ್ವಯಂ ಐಸೋಲೇಟ್ ಆಗಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನೊಂದಿಗೆ ಸಂಪರ್ಕಕಕ್ಕೆ ಬಂದವರು, ದಯವಿಟ್ಟು ನಿಮ್ಮನ್ನು ನೀವು ಐಸೋಲೇಟ್ ಮಾಡಿಕೊಳ್ಳಿ ಮತ್ತು ಪರೀಕ್ಷೆಗೆ ಒಳಗಾಗಿ' ಎಂದು ಕೇಜ್ರಿವಾಲ್ ತಿಳಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅವರು ಪಂಜಾಬ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಾಗಿ ಎಎಪಿ ಪರ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಿದ್ದರು. ದಿಲ್ಲಿಯಲ್ಲಿ ಸೋಮವಾರ 4,099 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಶೇ 6.46ರಷ್ಟು ಪಾಸಿಟಿವಿಟಿ ದರ ದಾಖಲಾಗಿದೆ. 1509 ಮಂದಿ ಸೋಂಕಿತರು ಚೇತರಿಸಿಕೊಂಡಿದ್ದು, ಒಬ್ಬರು ಮೃತಪಟ್ಟಿದ್ದಾರೆ. 6,288 ಕೋವಿಡ್ ರೋಗಿಗಳು ಮತ್ತು ಶಂಕಿತ ಕೋವಿಡ್ 19 ಪ್ರಕರಣಗಳನ್ನು ಹೋಮ್ ಐಸೋಲೇಷನ್‌ನಲ್ಲಿ ಇರಿಸಲಾಗಿದೆ. 'ಕೋವಿಡ್ 19 ಪ್ರಕರಣಗಳು ದಿಲ್ಲಿಯಲ್ಲಿ ಸತತವಾಗಿ ಏರಿಕೆಯಾಗುತ್ತಿದೆ. ಆದರೆ ಜನರು ಆತಂಕಪಡುವ ಅಗತ್ಯವಿಲ್ಲ. ಪ್ರಸ್ತುತ ನಗರದಲ್ಲಿ ಸಕ್ರಿಯ ಪ್ರಕರಣಗಳು 6,360 ಇವೆ. ಇಂದು 3,100 ಹೊಸ ಪ್ರಕರಣಗಳು ವರದಿಯಾಗುವ ನಿರೀಕ್ಷೆ ಇದೆ. ಆದರೆ 246 ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲ ಪ್ರಕರಣಗಳೂ ಲಘು ಲಕ್ಷಣ ಅಥವಾ ಲಕ್ಷಣ ರಹಿತ ಪ್ರಕರಣಗಳಾಗಿವೆ. ಹೀಗಾಗಿ ಕಳವಳ ಪಡುವ ಅಗತ್ಯವಿಲ್ಲ' ಎಂದು ಅರವಿಂದ್ ಕೇಜ್ರಿವಾಲ್ ಭಾನುವಾರ ತಿಳಿಸಿದ್ದಾರೆ. ಜನವರಿ 3 ರಿಂದ ದೇಶಾದ್ಯಂತ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನ ಸೋಮವಾರ ಆರಂಭವಾಗಿದೆ. ದಿಲ್ಲಿಯಲ್ಲಿ 20,998 ಮಕ್ಕಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಜಿಲ್ಲೆಗಳಲ್ಲಿ ಲಸಿಕೆ ಶಿಬಿರಗಳು ಆರಂಭವಾಗುತ್ತಿರುವುದರಿಂದ ಮಂಗಳವಾರದಿಂದ ಈ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ. ದಿಲ್ಲಿ ಸರ್ಕಾರದ ದತ್ತಾಂಶದ ಪ್ರಕಾರ ರಾಜ್ಯದಲ್ಲಿ 1.01 ಮಿಲಿಯನ್ ಮಕ್ಕಳು ಕೋವಿಡ್ ಲಸಿಕೆ ಪಡೆದುಕೊಳ್ಳಲು ಅರ್ಹರಾಗಿದ್ದಾರೆ. ಕಳೆದ ಎರಡು ದಿನಗಳಲ್ಲಿ ಪತ್ತೆಯಾದ ಒಟ್ಟಾರೆ ಮಾದರಿಗಳಲ್ಲಿ ಶೇ 81ಕ್ಕೂ ಅಧಿಕ ಪ್ರಕರಣಗಳು ತಳಿ ಪ್ರಕರಣಗಳಾಗಿವೆ ಎಂದು ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಸೋಮವಾರ ತಿಳಿಸಿದ್ದರು. ಎರಡು ದಿನಗಳಲ್ಲಿ ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾದ 187 ಮಾದರಿಗಳಲ್ಲಿ 152 ಓಮಿಕ್ರಾನ್ ಎಂದು ದೃಢಪಟ್ಟಿದೆ. ರಾಜಧಾನಿಯಲ್ಲಿ ಸತತ ಎರಡನೇ ದಿನ ಶೇ 5ಕ್ಕಿಂತಲೂ ಅಧಿಕ ಪಾಸಿಟಿವಿಟಿ ದರವಿದೆ. ದಿಲ್ಲಿಯಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಸಂಪೂರ್ಣ ಕರ್ಫ್ಯೂ ವಿಧಿಸುವ, ಅಗತ್ಯವಲ್ಲದ ಅಂಗಡಿಗಳನ್ನು ಮುಚ್ಚುವ, ಮಾಲ್‌ಗಳು, ಸಲೂನ್‌ಗಳನ್ನು ಸ್ಥಗಿತಗೊಳಿಸುವ, ಸಾರ್ವಜನಿಕ ಸಾರಿಗೆ, ಮದುವೆ ಸಮಾರಂಭ ಮತ್ತು ಅಂತ್ಯಸಂಸ್ಕಾರಗಳಲ್ಲಿನ ಜನರ ಪಾಲ್ಗೊಳ್ಳುವಿಕೆಯನ್ನು ಮತ್ತಷ್ಟು ನಿರ್ಬಂಧಿಸುವ ರೆಡ್ ಅಲರ್ಟ್ ಸನ್ನಿವೇಶ ಎದುರಾಗಿದೆ. ಡಿ. 29ರಿಂದಲೂ ಯೆಲ್ಲೋ ಅಲರ್ಟ್ ಜಾರಿಯಲ್ಲಿದ್ದು, ಸಿನಿಮಾಗಳು, ಜಿಮ್‌ಗಳನ್ನು ಬಂದ್ ಮಾಡಲಾಗಿದೆ. ಅಂಗಡಿಗಳನ್ನು ಒಂದು ದಿನ ಬಿಟ್ಟು ಒಂದು ದಿನ ತೆರೆಯಲು ಅವಕಾಶ ನೀಡಲಾಗಿದೆ. ಮೆಟ್ರೋ ಮತ್ತು ಬಸ್‌ಗಳು ಅರ್ಧದಷ್ಟು ಸಾಮರ್ಥ್ಯದೊಂದಿಗೆ ಸಂಚರಿಸಲು ಅವಕಾಶ ನೀಡಲಾಗಿದೆ.