ದಿಲ್ಲಿಯಲ್ಲಿ ಕಡಿಮೆಯಾದ ಕೋವಿಡ್ ಪ್ರಕರಣ: ಅನ್‌ಲಾಕ್ ಪ್ರಕ್ರಿಯೆ ಶುರು!

ದಿಲ್ಲಿಯಲ್ಲಿ ಸುಮಾರು ಒಂದು ತಿಂಗಳಿಗೂ ಹೆಚ್ಚು ಸಮಯದ ಲಾಕ್‌ಡೌನ್ ಬಳಿಕ ಅನ್‌ಲಾಕ್ ಪ್ರಕ್ರಿಯೆ ಆರಂಭವಾಗಿದೆ. ಸಮ-ಬೆಸ ದಿನಗಳಲ್ಲಿ ಮಾಲ್ ಮತ್ತು ಮಾರುಕಟ್ಟೆಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ದಿಲ್ಲಿಯಲ್ಲಿ ಕಡಿಮೆಯಾದ ಕೋವಿಡ್ ಪ್ರಕರಣ: ಅನ್‌ಲಾಕ್ ಪ್ರಕ್ರಿಯೆ ಶುರು!
Linkup
ಹೊಸದಿಲ್ಲಿ: ಸುಮಾರು ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಲಾಕ್‌ಡೌನ್ ಕ್ರಮವನ್ನು ಮುಂದುವರಿಸಿದ್ದ ಮುಖ್ಯಮಂತ್ರಿ , ಪ್ರಕ್ರಿಯೆಗೆ ಶನಿವಾರ ಚಾಲನೆ ನೀಡಿದ್ದಾರೆ. ವಾರದ ದಿನ ಬಿಟ್ಟು ದಿನದ ಆಧಾರದಲ್ಲಿ ನಗರದಲ್ಲಿನ ಮಾರುಕಟ್ಟೆಗಳು ಮತ್ತು ಶಾಪಿಂಗ್ ಮಾಲ್‌ಗಳನ್ನು ತೆರೆಯಲು ಅನುಮತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ದಿಲ್ಲಿಯಲ್ಲಿ ಕಠಿಣ ಲಾಕ್‌ಡೌನ್ ಬಳಿಕ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಕೆಲವು ನಿಯಮಗಳನ್ನು ಸಡಿಲಿಸಲು ಸರ್ಕಾರ ಮುಂದಾಗಿದೆ. ಪ್ರತ್ಯೇಕವಾಗಿರುವ ಅಂಗಡಿಗಳನ್ನು ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ತೆರೆಯಲು ಅನುಮತಿ ನೀಡಲಾಗಿದೆ. ಇ-ಕಾಮರ್ಸ್ ವೇದಿಕೆಗಳ ಮೂಲಕ ಹೋಮ್ ಡೆಲಿವರಿಗೆ ಕೂಡ ಅವಕಾಶ ಕಲ್ಪಿಸಲಾಗಿದೆ. ದಿಲ್ಲಿ ಮೆಟ್ರೋ ಕೂಡ ಮರು ಕಾರ್ಯಾಚರಣೆ ಆರಂಭಿಸಲಿದೆ. ಆದರೆ ಶೇ 50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ವಿಭಿನ್ನ ಕೆಲಸ ಅವಧಿಗಳಲ್ಲಿ ಶೇ 50ರಷ್ಟು ಉದ್ಯೋಗಿಗಳೊಂದಿಗೆ ಖಾಸಗಿ ಕಚೇರಿಗಳನ್ನು ತೆರೆಯಬಹುದಾಗಿದೆ. ಆದರೆ ವರ್ಕ್ ಫ್ರಂ ಹೋಮ್ ಮಾದರಿಗೆ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ಸಾರ್ವಜನಿಕ ವಲಯದಲ್ಲಿ, ಎ ವರ್ಗದ ಉದ್ಯೋಗಿಗಳು ಎಲ್ಲ ದಿನಗಳಲ್ಲಿಯೂ ಕೆಲಸ ಮಾಡಬಹುದಾಗಿದೆ. ಆದರೆ ಅವರ ಅಡಿಯಲ್ಲಿ ಬರುವ ಎಲ್ಲ ವರ್ಗಗಳೂ ಶೇ 50ರಷ್ಟು ಸಾಮರ್ಥ್ಯದೊಂದಿಗೆ ಕೆಲಸ ಮಾಡಬೇಕು ಎಂದು ರಾಜ್ಯ ಸರ್ಕಾರ ಹೇಳಿದೆ. 'ಪರಿಸ್ಥಿತಿ ಹೀಗೆಯೇ ಸುಧಾರಣೆಯಾದರೆ ಮತ್ತಷ್ಟು ವಿನಾಯಿತಿಗಳನ್ನು ಪ್ರಕಟಿಸಲಾಗುವುದು. ನಾವು ಈಗ ಮೂರನೇ ಅಲೆ ಎದುರಿಸಲು ಸಿದ್ಧತೆ ನಡೆಸುತ್ತಿದ್ದೇವೆ. 37,000 ಪ್ರಕರಣಗಳು ವರದಿಯಾದರೂ ಆಗಬಹುದು ಎಂಬುದನ್ನು ಮನದಲ್ಲಿಟ್ಟುಕೊಂಡಿದ್ದೇವೆ. ಸರ್ಕಾರ 64 ಆಕ್ಸಿಜನ್ ಪ್ಲಾಂಟ್‌ಗಳನ್ನು ಸ್ಥಾಪಿಸುತ್ತಿದೆ' ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.