Darshan Vs Indrajit Lankesh: ಇಂದ್ರಜಿತ್ ಲಂಕೇಶ್ ವಿರುದ್ಧ ಗೃಹ ಸಚಿವರಿಗೆ ದೂರು!

ನಟ ದರ್ಶನ್ ವಿರುದ್ಧ ಗಂಭೀರ ಆರೋಪ ಮಾಡಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್‌ ಅವರಿಗೆ ಈಗ ಸಂಕಷ್ಟ ಎದುರಾಗಿದೆ. ಅವರ ವಿರುದ್ಧ ಗೃಹ ಸಚಿವರಿಗೆ ದೂರು ನೀಡಲಾಗಿದೆ. ಅಷ್ಟಕ್ಕೂ ದೂರು ನೀಡಿದ್ದು ಯಾರು? ಇಲ್ಲಿದೆ ಮಾಹಿತಿ.

Darshan Vs Indrajit Lankesh: ಇಂದ್ರಜಿತ್ ಲಂಕೇಶ್ ವಿರುದ್ಧ ಗೃಹ ಸಚಿವರಿಗೆ ದೂರು!
Linkup
ನಟ ಅವರು ದಲಿತ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಿರ್ದೇಶಕ ಆರೋಪ ಮಾಡಿದ್ದರು. ಆದರೆ, ಅದೇ ಈಗ ಇಂದ್ರಜಿತ್‌ಗೆ ತಿರುಗುಬಾಣವಾಗಿದೆ. ಪ್ರಕರಣದಲ್ಲಿ ದಲಿತ ಎಂಬ ಪದ ಬಳಸಿ, ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುವುದಕ್ಕೆ ಪ್ರಯತ್ನ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಅವರು ಆರೋಪ ಮಾಡಿವೆ. ಜೊತೆಗೆ ಕೆಲ ಸಂಘಟನೆಗಳು ಕೂಡ ಇದೇ ಮಾತನ್ನು ಹೇಳಿವೆ. ಗೃಹ ಸಚಿವ ಬಸವರಾಜ ಬೊಮ್ಮಯಿ ಅವರನ್ನು ಭೇಟಿ ಮಾಡಿ, ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಟಿ.ಜೆ. ಅಬ್ರಾಹಂ ಅವರು, 'ಗೃಹ ಮಂತ್ರಿಗಳನ್ನು ಭೇಟಿ ನೀಡಿ, ದೂರು ನೀಡಿದ್ದೇನೆ. ಇಂದ್ರಜಿತ್ ಲಂಕೇಶ್‌ ಅವರು ಕೆಲ ದಿನಗಳ ಹಿಂದೆ ಗೃಹ ಸಚಿವರನ್ನು ಭೇಟಿಯಾಗಿ ದೂರು ನೀಡುತ್ತಾರೆ. ಎಲ್ಲೋ ಒಂದು ಕಡೆ ಹೊಡೆದಾಟ ಆಗಿದೆ. ಆ ಹೊಡೆದಾಟ ಆದಾಗ ಒಬ್ಬ ದಲಿತ ಸಪ್ಲೈಯರ್‌ಗೆ ಹೊಡೆತ ಬಿದ್ದಿದೆ ಎಂದು ಪದೇಪದೇ ಒತ್ತಿ ಹೇಳಿದ್ದರು. ಅವರು ದಲಿತರೋ ಇಲ್ಲೋವೋ ಅನ್ನೋದು ಆಗ ಗೊತ್ತಿರಲಿಲ್ಲ. ಇಂದ್ರಜಿತ್ ಮಾಡುವ ಎರಡನೇ ಆರೋಪ ಏನೆಂದರೆ, ಮೈಸೂರಿನ ಪೊಲೀಸ್ ಠಾಣೆಗಳು ಸೆಟ್ಲ್‌ಮೆಂಟ್ ಸ್ಟೇಷನ್‌ಗಳಾಗಿವೆ ಎನ್ನುತ್ತಾರೆ. ಇವೆರಡೂ ಅವರು ಮಾಡಿದ ಗಂಭೀರ ಆರೋಪಗಳಾಗಿವೆ' ಎಂದು ಹೇಳಿದ್ದಾರೆ. ದ್ವೇಷ ಉಂಟಾಗಲಿ ಎಂದು ಹಾಗೇ ಹೇಳಿದ್ರಾ?'ಇಂದ್ರಜಿತ್ ಅವರು ದಲಿತ ಎಂದು ಹೇಳಿದ ಗಂಗಾಧರ್ ಎಂಬ ಸಪ್ಲೈಯರ್ ಹೇಳಿಕೆ ನೀಡಿದ್ದಾರೆ. ಅವರು, ನಾನು ಬ್ರಾಹ್ಮಣ ಎಂದಿದ್ದಾರೆ. ಹಾಗಾದರೆ, ಇಂದ್ರಜಿತ್‌ ಪದೇ ಪದೇ ದಲಿತ ದಲಿತ ಅಂತ ಹೇಳಿದ್ದು ಯಾಕೆ? ದಲಿತರಿಗೂ ಮತ್ತು ಬೇರೆ ಸಮಾಜದವರಿಗೂ ಬಾಂಧವ್ಯ ಬೆಳೆಯಲಿ ಅಂತ ಹಾಗೇ ಹೇಳಿದ್ರಾ ಅವರು ಅಥವಾ ದ್ವೇಷ ಉಂಟಾಗಲಿ ಎಂದು ಹೇಳಿದ್ರಾ? ಇದು ಸಮಾಜದ ಸಾಮರಸ್ಯವನ್ನು ಕೆಡಿಸಬೇಕು ಎಂಬ ಉದ್ದೇಶದಿಂದಲೇ ಹೇಳಿರೋದು ಅಲ್ವಾ? ಅವರಿಗೆ ಶಿಕ್ಷೆ ಆಗಬೇಕು. ನಾನು ಗೃಹ ಸಚಿವರಿಗೆ ದೂರು ನೀಡಿದ್ದೇನೆ' ಎಂದು ಟಿ.ಜೆ. ಅಬ್ರಾಹಂ ತಿಳಿಸಿದ್ದಾರೆ. 'ಇನ್ನೊಂದು ಏನೆಂದರೆ, ಪೊಲೀಸ್ ಇಲಾಖೆಯನ್ನು ಸೆಟ್ಲಮೆಂಟ್ ಸ್ಟೇಷನ್ ಅಂತಾರೆ. ಅದನ್ನು ಕೇಳಿಸಿಕೊಂಡು ಸುಮ್ಮನೇ ಇರ್ತಿವಾ? ಕಾನೂನಿನಲ್ಲಿ ಇದಕ್ಕೆ ಶಿಕ್ಷೆ ಇಲ್ವಾ? ಇವರ ಹೇಳಿಕೆಯಿಂದ ಪೊಲೀಸರ ಮಾನ-ಮರ್ಯಾದೆ ಹೋಗಿದೆ. ಮೈಸೂರಿನ ಪೊಲೀಸರಿಗೆ ಮಾನ-ಮರ್ಯಾದೆ ಇದ್ದರೆ, ಪ್ರತಿ ಠಾಣೆಯಲ್ಲೂ ಇವರ ಮೇಲೆ ಎರಡು ಕೇಸ್ ಹಾಕಬಹುದು. ಇದರ ಬಗ್ಗೆ ಗೃಹ ಸಚಿವರಿಗೆ ಹೇಳಿದ್ದೇನೆ. ಅವರು ಅದನ್ನು ತನಿಖೆಗೆ ಕಳುಹಿಸಿದ್ದಾರೆ. ಇಲ್ಲಿ ಸರಿಯಾಗಿ ನ್ಯಾಯ ಸಿಗದೇ ಇದ್ದಾಗ ಕೋರ್ಟ್ ಹೋಗುತ್ತೇವೆ, ಆದೇಶ ತರುತ್ತೇವೆ' ಎಂದು ಟಿ.ಜೆ. ಅಬ್ರಾಹಂ ಹೇಳಿದ್ದಾರೆ.