ಕೋವಿಡ್ ನಿಯಮ ಉಲ್ಲಂಘನೆ: ನಟ ಮಮ್ಮುಟಿ ಸೇರಿದಂತೆ 300 ಮಂದಿ ವಿರುದ್ಧ ಪ್ರಕರಣ ದಾಖಲು

ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮಲಯಾಳಂ ನಟ ಮುಮ್ಮುಟಿ ಸೇರಿದಂತೆ 300 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಕೋವಿಡ್ ನಿಯಮ ಉಲ್ಲಂಘನೆ: ನಟ ಮಮ್ಮುಟಿ ಸೇರಿದಂತೆ 300 ಮಂದಿ ವಿರುದ್ಧ ಪ್ರಕರಣ ದಾಖಲು
Linkup
ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮಲಯಾಳಂ ನಟ ಮುಮ್ಮುಟಿ ಸೇರಿದಂತೆ 300 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಕಳೆದ ಮಂಗಳವಾರ ಕೋಯಿಕ್ಕೋಡ್‌ನಲ್ಲಿರುವ ಆಸ್ಪತ್ರೆಯೊಂದರಲ್ಲಿ ಜನಸಂದಣಿ ಕಂಡುಬಂದ ಪರಿಣಾಮ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಸಲಿಗೆ ನಡೆದಿದ್ದೇನು? ಕೋಯಿಕ್ಕೋಡ್‌ನಲ್ಲಿರುವ ಮೈತ್ರಾ ಆಸ್ಪತ್ರೆಯಲ್ಲಿ ರೋಬೋಟ್ ನೆರವಿನ ಶಸ್ತ್ರಚಿಕಿತ್ಸೆ ಸೇವೆಯ ಉದ್ಘಾಟನೆ ಸಮಾರಂಭ ಕಳೆದ ಮಂಗಳವಾರ ನೆರವೇರಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದವರು ಮಲಯಾಳಂ ನಟ ಮುಮ್ಮುಟಿ. ಉದ್ಘಾಟನೆ ಸಮಾರಂಭದ ಬಳಿಕ ಆಸ್ಪತ್ರೆಯಲ್ಲಿ ಮುಮ್ಮುಟಿ ಬಳಿ ಸುಮಾರು 300 ಮಂದಿ ನೆರೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಸಮಾರಂಭದಲ್ಲಿ ಹೆಚ್ಚು ಜನ ಸೇರಿದ್ದ ಕಾರಣ ಸಾಂಕ್ರಾಮಿಕ ರೋಗ ಕಾಯ್ದೆ ಅನ್ವಯ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಮಾರಂಭದ ಫೋಟೋ ಹಾಗೂ ವಿಡಿಯೋಗಳನ್ನು ಪರಿಶೀಲಿಸಿದ ಪೊಲೀಸರು ಆಸ್ಪತ್ರೆಯ ಆಡಳಿತ ಸಿಬ್ಬಂದಿಯ ವಿರುದ್ಧವೂ ಕೇಸ್ ಹಾಕಿದ್ದಾರೆ. ''ಸಮಾರಂಭದ ಆರಂಭದಲ್ಲಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡಿದರು. ಆದರೆ, ಸ್ವಲ್ಪ ಸಮಯದ ಬಳಿಕ ಸಮಾರಂಭದಲ್ಲಿ ಭಾಗವಹಿಸಿದವರು ಸಾಮಾಜಿಕ ಅಂತರ ಕಾಪಾಡಿಕೊಳ್ಳಲಿಲ್ಲ. ಸಮಾರಂಭಕ್ಕೆ ಬಂದಿದ್ದ ಅತಿಥಿಗಳು ಬೇಜವಾಬ್ದಾರಿಯಿಂದ ನಡೆದುಕೊಂಡರು'' ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿರುವ ಆರೋಪವನ್ನು ಆಸ್ಪತ್ರೆಯ ಸಿಬ್ಬಂದಿ ತಳ್ಳಿ ಹಾಕಿದ್ದಾರೆ. ಸಮಾರಂಭಕ್ಕೆ ಸೆಲೆಬ್ರಿಟಿಗಳು ಬಂದಿದ್ದರಿಂದ ಕೆಲ ಅನಿರೀಕ್ಷಿತ ಸನ್ನಿವೇಶಗಳು ಎದುರಾಯ್ತು ಎಂದು ಮೈತ್ರಾ ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ.