ಕೋವಿಡ್ 19 ರೋಗಿಗಳಲ್ಲಿ ಮಧುಮೇಹ ನಿರ್ವಹಣೆಗೆ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ

ಕೋವಿಡ್ 19 ರೋಗಿಗಳಲ್ಲಿನ ಮಧುಮೇಹ ಪತ್ತೆ ಹಾಗೂ ನಿರ್ವಹಣೆಗೆ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ. ಮಧುಮೇಹಿಗಳು ಬ್ಲ್ಯಾಕ್ ಫಂಗಸ್‌ಗೆ ಒಳಗಾಗದಂತೆ ತಡೆಯಲು ಸೂಕ್ತ ನಿಗಾವಣೆಗೆ ಸೂಚಿಸಿದೆ.

ಕೋವಿಡ್ 19 ರೋಗಿಗಳಲ್ಲಿ ಮಧುಮೇಹ ನಿರ್ವಹಣೆಗೆ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ
Linkup
ಹೊಸದಿಲ್ಲಿ: ರೋಗಿಗಳಲ್ಲಿ ಮಧುಮೇಹವನ್ನು ಪತ್ತೆಹಚ್ಚುವ ಮತ್ತು ಅದನ್ನು ನಿರ್ವಹಣೆ ಮಾಡುವ ಸಂಬಂಧ ಹೊಸ ಕ್ಲಿನಿಕಲ್ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಸೋಂಕಿನಿಂದ ಚೇತರಿಸಿಕೊಳ್ಳುವ ರೋಗಿಗಳು ಕಪ್ಪು ಶಿಲೀಂದ್ರ ಅಥವಾ ಮ್ಯುಕೊರ್ಮಿಕೊಸಿಸ್‌ಗೆ ಬಲಿಯಾಗುತ್ತಿರುವುದು ಹಾಗೂ ಈ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಆತಂಕ ಹೆಚ್ಚಿಸಿದೆ. ಅದರಲ್ಲಿಯೂ ತೀವ್ರವಾಗಿರುವ ರೋಗಿಗಳಲ್ಲಿ ಈ ಸಂಖ್ಯೆ ಅತ್ಯಧಿಕವಾಗಿದೆ. ಮಧುಮೇಹವುಳ್ಳ ರೋಗಿಗಳು ಹೈಪರ್‌ಗ್ಲೈಸೆಮಿಯಾ ಅಥವಾ ಅಧಿಕ ಬ್ಲಡ್ ಶುಗರ್ ಅಪಾಯಕ್ಕೆ ಒಳಗಾಗುವುದರಿಂದ ಅವರು ಬ್ಲ್ಯಾಕ್ ಫಂಗಸ್‌ಗೆ ಸಿಲುಕುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಮಧುಮೇಹಿ ರೋಗಿಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ನಿಗಾವಣೆ ಮಾಡುವ ಮಹತ್ವವನ್ನು ಸಚಿವಾಲಯ ಉಲ್ಲೇಖಿಸಿದೆ. 'ಮಧುಮೇಹದೊಂದಿಗೆ ದಾಖಲಾಗುವ ಪ್ರತಿ ರೋಗಿಯನ್ನೂ ಗ್ಲುಕೋಮೀಟರ್‌ನಲ್ಲಿ ಕನಿಷ್ಠ ಎರಡು ಕ್ಯಾಪಿಲರಿ ಬ್ಲಡ್ ಗ್ಲೂಕೋಸ್ ವ್ಯಾಲ್ಯುಗಳೊಂದಿಗೆ (ಒಂದು ಊಟಕ್ಕೆ ಮೊದಲು, ಮತ್ತೊಂದು ಊಟದ ನಂತರ) ಪರೀಕ್ಷಿಸಿ' ಎಂದು ತನ್ನ ಹೊಸ ರೋಗಿ ನಿರ್ವಹಣಾ ಮಾರ್ಗಸೂಚಿಯಲ್ಲಿ ತಿಳಿಸಿದೆ. ಸಾಮಾನ್ಯ ಆರಂಭಿಕ ಗ್ಲೈಸೆಮಿಕ್ ಲಕ್ಷಣವುಳ್ಳ ರೋಗಿಗಳು ಕಾಯಿಲೆಯ ಸಂದರ್ಭದಲ್ಲಿ ಒತ್ತಡದ ಹೈಪರ್‌ಗ್ಲೈಸೆಮಿಯಾಕ್ಕೆ ಒಳಗಾಗಬಹುದು. ಅದರಲ್ಲಿಯೂ ಕೋವಿಡ್ 19 ಸೋಂಕಿನ ತೀವ್ರತೆ ಹೆಚ್ಚಿದ್ದಾಗ ಇದು ಅಧಿಕವಾಗುತ್ತದೆ. ಪ್ರಾಥಮಿಕ ಕಾಯಿಲೆ ಚಿಕಿತ್ಸೆಗೆ ಗ್ಲುಕೊಕೊರ್ಟಿಕೊಯಿಡ್ಸ್ ಬಳಸುವುದು ಕೂಡ ಅಂತಹ ವ್ಯಕ್ತಿಗಳಲ್ಲಿ ಹೈಪರ್‌ಗ್ಲೈಸೆಮಿಯಾಕ್ಕೆ ಎಡೆಮಾಡಿಕೊಡಬಹುದು ಎಂದು ಸರ್ಕಾರ ಹೇಳಿದೆ. ರಕ್ತದಲ್ಲಿನ ಸಕ್ಕರೆ ಅಂಶವು ಆರಂಭದಲ್ಲಿ ಸಹಜ ಮಟ್ಟದಲ್ಲಿದ್ದರೂ, ಅದನ್ನು ಪದೇ ಪದೇ ಪರಿಶೀಲಿಸುತ್ತಿರಬೇಕು. ಪ್ರಸ್ತುತದಲ್ಲಿ ಗ್ಲೈಸೆಮಿಕ್ ಪರೀಕ್ಷೆಯು ಒಂದು ಸಮಯದ ಕೆಲಸವಾಗಬಾರದು. ಅದು ನಿರಂತರ ಪ್ರಕ್ರಿಯೆಯಾಗಿರಬೇಕು ಎಂದು ಹೊಸ ಹೇಳಿದೆ. ಮಧುಮೇಹವುಳ್ಳ ಪ್ರತಿ ರೋಗಿಯನ್ನೂ ಮಧುಮೇಹ ಡಯೆಟ್‌ನೊಂದಿಗೆ ಚಿಕಿತ್ಸೆಗೆ ಒಳಪಡಿಸಬೇಕು. ರೋಗಿಯು ಡಯಟ್ ಚಾರ್ಟ್‌ನಲ್ಲಿ ಸಲಹೆ ನೀಡಿರುವಂತೆ ಸಮಯ ಹಾಗೂ ಪ್ರಮಾಣಕ್ಕೆ ಬದ್ಧರಾಗಿರುವಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕು ಎಂದು ಸಚಿವಾಲಯ ತಿಳಿಸಿದೆ.