ಸೊಂಟಕ್ಕೆ ಟವಲ್‌ ಸುತ್ತಿಕೊಂಡು ಆನ್‌ಲೈನ್ ಪಾಠ: ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಚೆನ್ನೈನ ಶಿಕ್ಷಕ ಅರೆಸ್ಟ್‌!

ವಿದ್ಯೆ ಹೇಳಿಕೊಟ್ಟು ಸರಿ ದಾರಿಯಲ್ಲಿ ನಡೆಸಬೇಕಾದ ಶಿಕ್ಷಕನೊಬ್ಬ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದೆ. ಕೊರೊನಾ ಹಿನ್ನೆಲೆ ಆನ್‌ಲೈನ್‌ ತರಗತಿ ನಡೆಯುತ್ತಿದೆ. ಈ ವೇಳೆ ಈ ಶಿಕ್ಷಕ ಅರಬೆತ್ತಲೆಯಾಗಿ ವಿದ್ಯಾರ್ಥಿಗಳ ಮುಂದೆ ಬಂದು ಪಾಠ ಮಾಡಿದ್ದಾನೆ.

ಸೊಂಟಕ್ಕೆ ಟವಲ್‌ ಸುತ್ತಿಕೊಂಡು ಆನ್‌ಲೈನ್ ಪಾಠ: ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಚೆನ್ನೈನ ಶಿಕ್ಷಕ ಅರೆಸ್ಟ್‌!
Linkup
ಚೆನ್ನೈ: ವರ್ಚುಯಲ್‌ ತರಗತಿಯಲ್ಲಿಅಸಭ್ಯವಾಗಿ ವರ್ತಿಸುವುದಲ್ಲದೇ ಅಶ್ಲೀಲ ಮಾಹಿತಿಗಳನ್ನು ವಿದ್ಯಾರ್ಥಿಗಳ ಜತೆ ಹಂಚಿಕೊಂಡ ಆರೋಪದಲ್ಲಿ ನಗರದ ಪ್ರತಿಷ್ಠಿತ ಶಾಲೆಯೊಂದರ ಶಿಕ್ಷಕನನ್ನು ಬಂಧಿಸಲಾಗಿದೆ. 59 ವರ್ಷದ ಶಿಕ್ಷಕನ ಕುರಿತು ಶಾಲೆಯ ಹಾಲಿ ಮತ್ತು ಮಾಜಿ ವಿದ್ಯಾರ್ಥಿಗಳು ಕೆಲದಿನಗಳ ಹಿಂದೆ ಆರೋಪ ಮಾಡಿದ್ದರು. ಶಿಕ್ಷಕ ಸೊಂಟಕ್ಕೆ ಕೇವಲ ಟವೆಲ್‌ ಸುತ್ತಿಕೊಂಡು, ಅರೆಬೆತ್ತಲೆಯಾಗಿ ಪಾಠ ಮಾಡುವ ಸ್ಕ್ರೀನ್‌ಶಾಟ್‌ ಹಾಗೂ ಅವರು ಕಳಿಸಿದ ಅಶ್ಲೀಲ ಸಂದೇಶಗಳ ಸ್ಕ್ರೀನ್‌ಶಾಟ್‌ ಲಗತ್ತಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ಶಾಲಾ ಆಡಳಿತ ಮಂಡಳಿಗೆ ಈತನ ಕುಚೇಷ್ಟೆ ತಿಳಿದಿದ್ದರೂ ಕ್ರಮ ಕೈಗೊಳ್ಳದೆ ಸುಮ್ಮನಿದೆ ಎಂದೂ ಕೆಲವರು ಆರೋಪಿಸಿದ್ದರು. ಇನ್ನು ಘಟನೆ ಭಾರೀ ವಿವಾದವಾಗುತ್ತಿದ್ದಂತೆ ಶಾಲೆಯ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆ ಪೊಲೀಸರು ಅವರನ್ನು ಅರೆಸ್ಟ್‌ ಮಾಡಿ, ನ್ಯಾಯಾಲಯ ಬಂಧನಕ್ಕೆ ಒಳಪಡಿಸಿದೆ. ತನಿಖೆ ಮುಂದುವರಿದಿದೆ.