ಕೋರಮಂಗಲ ಐಶಾರಾಮಿ ಕಾರು ಅಪಘಾತ: ಭೀಕರ ಅಪಘಾತಕ್ಕೆ ಕಾರಣವೇನು? ಸ್ಥಳದಲ್ಲಿ ಮೊಬೈಲ್‌ ಪತ್ತೆ!

ಕೋರಮಂಗಲದಲ್ಲಿ ನಡೆದ ಐಶಾರಾಮಿ ಕಾರು ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಎಲ್ಲರೂ ಶ್ರೀಮಂತರ ಮಕ್ಕಳೇ. ಆದರೆ ಈ ಅಪಘಾತಕ್ಕೆ ಕಾರಣವೇನು ಎಂಬುವುದು ಪೊಲೀಸರು ಕಂಡು ಹಿಡಿಯುತ್ತಿದ್ದಾರೆ. ಅಪಘಾತಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಸಂಚಾರ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದುವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

ಕೋರಮಂಗಲ ಐಶಾರಾಮಿ ಕಾರು ಅಪಘಾತ: ಭೀಕರ ಅಪಘಾತಕ್ಕೆ ಕಾರಣವೇನು? ಸ್ಥಳದಲ್ಲಿ ಮೊಬೈಲ್‌ ಪತ್ತೆ!
Linkup
ಬೆಂಗಳೂರು: ನಗರದಲ್ಲಿ ಸೋಮವಾರ ಮಧ್ಯರಾತ್ರಿ ನಡೆದ ಭೀಕರ ಅಪಘಾತಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಸಂಚಾರ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದುವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಅಪಘಾತದಲ್ಲಿ ಮೃತಪಟ್ಟವರು, ಕಾರಿನಲ್ಲಿ ಎಲ್ಲೆಲ್ಲಿ ಓಡಾಡಿದ್ದಾರೆ, ದುರ್ಘಟನೆಗೂ ಮುನ್ನ ಪಾರ್ಟಿಯಲ್ಲಿ ಭಾಗಿಯಾಗಿದ್ದರೇ ಎಂಬುದರ ಬಗ್ಗೆ ಮಾಹಿತಿ ಕಲೆಹಾಕಲು ಪೊಲೀಸರು ನಡೆದ ಸ್ಥಳದಲ್ಲಿ ಸಿಕ್ಕ ಮೊಬೈಲ್‌ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಯುವಕರು ಎಲ್ಲೆಲ್ಲಿ ಹೋಗಿದ್ದರು ಎಂಬ ಮಾಹಿತಿಯನ್ನು ಮೊಬೈಲ್‌ ನೆಟ್‌ವರ್ಕ್ ಮೂಲಕ ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ತಮಿಳುನಾಡಿನ ಹೊಸೂರು ಕ್ಷೇತ್ರದ ಡಿಎಂಕೆ ಶಾಸಕ ವೈ. ಪ್ರಕಾಶ್‌ ಅವರ ಏಕೈಕ ಪುತ್ರ ಕರುಣಾ ಸಾಗರ್‌ (25), ಈತ ಮದುವೆಯಾಗಬೇಕಿದ್ದ ಮುರುಗೇಶ್‌ ಪಾಳ್ಯದ ಯುವತಿ ಬಿಂದು (28), ಮಹಾರಾಷ್ಟ್ರ ಮೂಲದ ಇಷಿತಾ ಬಿಸ್ವಾಸ್‌ (21), ಕೇರಳ ಮೂಲದ ಡಾ.ಧನುಷಾ (29), ಕೇರಳದ ಅಕ್ಷಯ್‌ ಗೋಯಲ್‌ (25), ಹರಿಯಾಣದ ಉತ್ಸವ್‌ (25), ಹುಬ್ಬಳಿಯ ರೋಹಿತ್‌ (23) ಅಪಘಾತದಲ್ಲಿ ಮೃತಪಟ್ಟಿದ್ದರು. ಯುವತಿಯರ ಓಡಾಟ ಸಿಸಿಟಿವಿಯಲ್ಲಿಸೆರೆ: ಕಾರಿನಲ್ಲಿ ಹೋಗುವ ಮುನ್ನ ಬಿಂದು ಹಾಗೂ ಇಷಿತಾ ಬ್ಯಾಂಗ್‌ವೊಂದರಲ್ಲಿ ಏನನ್ನೋ ತುಂಬಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೊಂದೆಡೆ, ಅವಘಡ ಸಂಭವಿಸುವ ಮುನ್ನ ಏಳು ಮಂದಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂಬ ಶಂಕೆಯ ಮೇರೆಗೆ ಕೋರಮಂಗಲದಲ್ಲಿರುವ ಎಲ್ಲಾ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಹಾಗೂ ಪಬ್‌ಗಳ ಸಿಸಿಟಿವಿ ಪರಿಶೀಲಿಸಲಾಗುತ್ತಿದೆ. ಆದರೆ, ಈ ಭಾಗದಲ್ಲಿ ಎಲ್ಲಿಯೂ ಪಾರ್ಟಿ ಮಾಡಿರುವ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ. ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆ ಸುತ್ತಮುತ್ತಲೂ ಪಾರ್ಟಿ ಮಾಡಿರುವ ಅನುಮಾನದ ಹಿನ್ನೆಲೆಯಲ್ಲಿ ಅಲ್ಲಿರುವ ಪಬ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳ ಸಿಸಿಟಿವಿ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಮೃತದೇಹಗಳ ಹಸ್ತಾಂತರ: ಏಳೂ ಮಂದಿಯ ಮೃತದೇಹಗಳನ್ನು ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿತ್ತು. ಮಂಗಳವಾರ ಆರು ಮಂದಿಯ ಮೃತದೇಹವನ್ನು ಅವರ ಪೋಷಕರಿಗೆ ಹಸ್ತಾಂತರಿಸಲಾಗಿತ್ತು. ಬುಧವಾರ ದಂತ ವೈದ್ಯೆ ಧನುಷಾ ಅವರ ಮೃತದೇಹವನ್ನು ಅವರ ಪೋಷಕರಿಗೆ ಹಸ್ತಾಂತರಿಸಲಾಯಿತು. ತನಿಖೆ ಮುಂದುವರಿಕೆಅಪಘಾತಕ್ಕೊಳಗಾಗುವ ಮುನ್ನ ಏಳು ಮಂದಿಯೂ ಕೋರಮಂಗಲದಲ್ಲಿ ಜಾಲಿ ರೈಡ್‌ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತಪಟ್ಟವರೆಲ್ಲರು ಎಲ್ಲಿ ಗುಂಪುಗೂಡಿದರು, ಯಾವ ಕಾರಣಕ್ಕೆ ಕಾರಿನಲ್ಲಿ ತೆರಳಿದರು, ಎಲ್ಲೆಲ್ಲಿ ಓಡಾಡಿದ್ದಾರೆ, ಕಾರು ಚಲಾಯಿಸುತ್ತಿದ್ದವರು ಮದ್ಯ ಸೇವಿಸಿದ್ದರೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಬೇಕಿದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದರು. ಏನಿದು ಘಟನೆ! ಸೋಮವಾರ ಮಧ್ಯರಾತ್ರಿ ಬೆಂಗಳೂರಿನೆ ಕೋರಮಂಗಲದಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಆಡಿ ಕ್ಯೂ ಕಾರು ಫೂಟ್‌ಪಾತ್‌ ಮೇಲಿನ ಕಂಬಕ್ಕೆ ಡಿಕ್ಕಿಯಾಗಿತ್ತು. ಘಟನೆಯಿಂದಾಗಿ ಸ್ಥಳದಲ್ಲೇ 6 ಮಂದಿ ಮೃತಪಟ್ಟರೆ. ಒಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಭೀಕರ ಅಪಘಾತ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದೆ.