ಬೆಂಗಳೂರು: ಮಾಲೀಕನ ವಿಶ್ವಾಸಗಿಟ್ಟಿಸಿ ಒಂದು ಕೋಟಿ ರೂಪಾಯಿ ವಂಚಿಸಿದ ಅಕೌಂಟೆಂಟ್‌

ಮೂಲತಃ ಚಿಕ್ಕಮಗಳೂರಿನ ಅನಿಲ್‌ಕುಮಾರ್‌ ಕದ್ದ ಹಣದಲ್ಲಿ ಐಷಾರಾಮಿ ಕಾರು, ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಸೇರಿದಂತೆ ಮನೆಗೆ ಬೇಕಾದ ಐಷಾರಾಮಿ ಪೀಠೋಪಕರಣಗಳನ್ನು ಖರೀದಿ ಮಾಡಿದ್ದ. ಅಲ್ಲದೆ, ಚಿಕ್ಕಮಗಳೂರಿನಲ್ಲಿ ಅಡಿಕೆ ತೋಟ ಖರೀದಿ ಮಾಡಿದ್ದು, ಆರ್‌.ಟಿ.ನಗರದಲ್ಲಿ ದೊಡ್ಡದಾಗಿ ಬೇಕರಿ ತೆರೆದಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಬೆಂಗಳೂರು: ಮಾಲೀಕನ ವಿಶ್ವಾಸಗಿಟ್ಟಿಸಿ ಒಂದು ಕೋಟಿ ರೂಪಾಯಿ ವಂಚಿಸಿದ ಅಕೌಂಟೆಂಟ್‌
Linkup
ಬೆಂಗಳೂರು: ಇಂಟೀರಿಯರ್‌ ಡಿಸೈನಿಂಗ್‌ ಕಂಪನಿಯ ಮಾಲೀಕನ ವಿಶ್ವಾಸ ಗಿಟ್ಟಿಸಿದ ಅಕೌಂಟೆಂಟ್‌ ಒಂದು ಕೋಟಿ ರೂ.ಗೂ ಹೆಚ್ಚು ಹಣ ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಜಯನಗರ ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ. ದೊಡ್ಡಕಲ್ಲಸಂದ್ರ ನಿವಾಸಿ ಅನಿಲ್‌ಕುಮಾರ್‌ (27) ಬಂಧಿತ. ಜೆ.ಪಿ.ನಗರ ಶಾಖಾಂಬರಿ ನಗರದ ಸಿದ್ದಾರ್ಥ್‌ ಇಂಟೀರಿಯರ್ಸ್‌ ಕಂಪನಿಯಲ್ಲಿ ಅನಿಲ್‌ಕುಮಾರ್‌ ಐದು ವರ್ಷಗಳ ಹಿಂದೆ ಅಕೌಂಟೆಂಟ್‌ ಆಗಿ ಕೆಲಸಕ್ಕೆ ಸೇರಿದ್ದ. ಚೆನ್ನಾಗಿ ಕೆಲಸ ಮಾಡಿ ಮಾಲೀಕರ ವಿಶ್ವಾಸ ಗಳಿಸಿದ್ದ. ಸೇವೆ ಪಡೆದ ಬಳಿಕ ಕೆಲವರು ಹಣವನ್ನು ಕಂಪನಿಗೆ ನಗದು ರೂಪದಲ್ಲಿ ಕೊಡುತ್ತಿದ್ದರು. ಆರೋಪಿ ಈ ನಗದಿನ ಬಗ್ಗೆ ಕಂಪನಿಯ ದಾಖಲೆಗಳಲ್ಲಿ ನಮೂದಿಸಿಲ್ಲ. ಹಂತ-ಹಂತವಾಗಿ ಬರೋಬ್ಬರಿ ಒಂದು ಕೋಟಿ ಹಣವನ್ನು ಲಪಾಟಾಯಿಸಿದ್ದಾನೆ ಎಂದು ಕಂಪನಿ ಮಾಲೀಕರು ದೂರಿನಲ್ಲಿ ವಿವರಿಸಿದ್ದಾರೆ. ಕಂಪನಿಯ ಮಾಲೀಕ ಕಚೇರಿಯಲ್ಲಿದ್ದ ವೇಳೆ ಗ್ರಾಹಕರೊಬ್ಬರು ಒಂದು ಲಕ್ಷ ಹಣ ಪಾವತಿ ಮಾಡಿದ್ದಾರೆ. ಆದರೆ ಸಂಜೆ ವೇಳೆ ಆರೋಪಿ ಲೆಕ್ಕ ತೋರಿಸುವಾಗ ಯಾವುದೇ ಹಣ ಬಂದಿಲ್ಲ ಎಂದು ಮಾಲೀಕರ ಬಳಿ ಹೇಳಿದ್ದ. ಮರು ದಿನ ಕೂಡ ಇದೇ ರೀತಿ ಆಗಿದೆ. ಈ ಬಗ್ಗೆ ಉದ್ಯಮಿ ಆರೋಪಿಯನ್ನು ತೀವ್ರವಾಗಿ ಪ್ರಶ್ನಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಮದುವೆ ಖರ್ಚಿಗೆ ಹಣವಿಲ್ಲ ಎಂಬ ಕಾರಣಕ್ಕೆ ಈ ರೀತಿ ವಂಚನೆ ಮಾಡಿದ್ದೆ ಎಂದು ಹೇಳಿದ್ದಾನೆ. ವಂಚನೆ ಹಣದಲ್ಲಿ ಕಾರು, ಬೈಕ್‌ ಖರೀದಿಮೂಲತಃ ಚಿಕ್ಕಮಗಳೂರಿನ ಅನಿಲ್‌ಕುಮಾರ್‌ ಕದ್ದ ಹಣದಲ್ಲಿ ಐಷಾರಾಮಿ ಕಾರು, ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಸೇರಿದಂತೆ ಮನೆಗೆ ಬೇಕಾದ ಐಷಾರಾಮಿ ಪೀಠೋಪಕರಣಗಳನ್ನು ಖರೀದಿ ಮಾಡಿದ್ದ. ಅಲ್ಲದೆ, ಚಿಕ್ಕಮಗಳೂರಿನಲ್ಲಿ ಅಡಿಕೆ ತೋಟ ಖರೀದಿ ಮಾಡಿದ್ದು, ಆರ್‌.ಟಿ.ನಗರದಲ್ಲಿ ದೊಡ್ಡದಾಗಿ ಬೇಕರಿ ತೆರೆದಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.