ಕ್ರಿಪ್ಟೋ ಕರೆನ್ಸಿಗಳ ಬಗ್ಗೆ ಮತ್ತೆ ಗಂಭೀರ ಪ್ರಶ್ನೆಗಳನ್ನು ಎತ್ತಿದ ಆರ್‌ಬಿಐ ಗವರ್ನರ್‌

ಭಾರತೀಯ ಆರ್ಥಿಕತೆ ಮುಂದುವರೆಯಲು ಖಾಸಗಿ ಕ್ರಿಪ್ಟೋ ಕರೆನ್ಸಿಗಳ ಕೊಡುಗೆಯ ಬಗ್ಗೆ ನಮಗೆ ‘ವಿಶ್ವಾಸಾರ್ಹ ಉತ್ತರಗಳು’ ಬೇಕು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್‌ ದಾಸ್ ಹೇಳಿದ್ದು, ತಮ್ಮ ಗಂಭೀರ ಹಾಗೂ ಪ್ರಮುಖ ಕಾಳಜಿಗಳನ್ನು ಕೇಂದ್ರ ಸರಕಾರದ ಗಮನಕ್ಕೆ ತರಲಾಗಿದೆ ಎಂದಿದ್ದಾರೆ.

ಕ್ರಿಪ್ಟೋ ಕರೆನ್ಸಿಗಳ ಬಗ್ಗೆ ಮತ್ತೆ ಗಂಭೀರ ಪ್ರಶ್ನೆಗಳನ್ನು ಎತ್ತಿದ ಆರ್‌ಬಿಐ ಗವರ್ನರ್‌
Linkup
ಹೊಸದಿಲ್ಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ () ಗವರ್ನರ್‌ ಶಕ್ತಿಕಾಂತ್‌ ದಾಸ್‌ ಬಗ್ಗೆ ಮತ್ತೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮಾಧ್ಯಮದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕ್ರಿಪ್ಟೋ ಕರೆನ್ಸಿಗಳ ಬಗೆಗಿನ ತಮ್ಮ ಗಂಭೀರ ಹಾಗೂ ಪ್ರಮುಖ ಕಾಳಜಿಗಳನ್ನು ಕೇಂದ್ರ ಸರಕಾರದ ಗಮನಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಈ ರೀತಿಯ ಪ್ಲಾಟ್‌ಫಾರ್ಮ್‌ಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಕೇಂದ್ರ ಸರಕಾರವೇ ಒಂದು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಭಾರತೀಯ ಆರ್ಥಿಕತೆ ಮುಂದುವರೆಯಲು ಖಾಸಗಿ ಕ್ರಿಪ್ಟೋ ಕರೆನ್ಸಿಗಳ ಕೊಡುಗೆ ಕುರಿತು ನಮಗೆ ‘ವಿಶ್ವಾಸಾರ್ಹ ಉತ್ತರಗಳು’ ಬೇಕು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್‌ ದಾಸ್ ಹೇಳಿದ್ದಾರೆ. ಆರ್‌ಬಿಐ ಗವರ್ನರ್‌ ಕ್ರಿಪ್ಟೋ ಕರೆನ್ಸಿಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಕೇಂದ್ರ ಸರಕಾರಕ್ಕೆ ಅವರು ಕ್ರಿಪ್ಟೋ ಕರೆನ್ಸಿಗಳ ಬಗ್ಗೆ ಎಚ್ಚರಿಕೆ ನೀಡಿದ್ದರು. ಫೆಬ್ರವರಿಯಲ್ಲಿ, ದೇಶದ ಆರ್ಥಿಕತೆಯ ಸ್ಥಿರತೆ ಮೇಲೆ ಕ್ರಿಪ್ಟೋ ಕರೆನ್ಸಿಗಳು ಉಂಟು ಮಾಡಬಹುದಾದ ಅಪಾಯಗಳ ಬಗ್ಗೆಯೂ ಅವರು ಕಾಳಜಿ ವ್ಯಕ್ತಪಡಿಸಿದ್ದರು. ಖಾಸಗಿ ಕ್ರಿಪ್ಟೋ ಕರೆನ್ಸಿ ವಹಿವಾಟನ್ನು ಆರ್‌ಬಿಐ ವಿರೋಧಿಸುತ್ತಾ ಬಂದಿದ್ದು, ತಮ್ಮ ಕಾಳಜಿಗಳನ್ನು ಸರಕಾರದ ಗಮನಕ್ಕೆ ತಂದಿರುವುದಾಗಿ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ. 2021ರ ಮೇ ತಿಂಗಳಿನಲ್ಲಿ ಪ್ರತಿಕ್ರಿಯೆ ನೀಡಿದ್ದ ಆರ್‌ಬಿಐ ಉಪ ಗವರ್ನರ್‌, ಆರ್‌ಬಿಐನಿಂದಲೇ ಸೆಂಟ್ರಲ್‌ ಬ್ಯಾಂಕ್‌ ಡಿಜಿಟಲ್‌ ಕರೆನ್ಸಿ (ಸಿಬಿಡಿಸಿ) ಜಾರಿಗೊಳಿಸುವ ಬಗ್ಗೆ ದಾರಿಗಳನ್ನು ಹುಡುಕುತ್ತಿರುವುದಾಗಿ ಹೇಳಿದ್ದರು. ಇತ್ತೀಚೆಗೆ, ಬ್ಲೂಂಬರ್ಗ್‌ಗೆ ಪ್ರತಿಕ್ರಿಯೆ ನೀಡಿದ್ದ ಆರ್‌ಬಿಐನ ಮಾಜಿ ಗವರ್ನರ್ ಆರ್ ಗಾಂಧಿ, ಕ್ರಿಪ್ಟೋ ಕರೆನ್ಸಿಗಳನ್ನು ಭಾರತದಲ್ಲಿ ಆಸ್ತಿ ಅಥವಾ ಸರಕು ಎಂದು ಪರಿಗಣಿಸಬೇಕು ಮತ್ತು ಅಸ್ತಿತ್ವದಲ್ಲಿರುವ ವಿನಿಮಯ ಕಾನೂನುಗಳಿಂದ ನಿಯಂತ್ರಿಸಬೇಕು ಎಂದು ಹೇಳಿದ್ದರು. ಆರಂಭದಲ್ಲಿ ಕ್ರಿಪ್ಟೋ ಟ್ರೇಡ್‌ಗಳ ಮೇಲೆ ನಿಷೇಧ ಹೇರಲು ಮುಂದಾಗಿದ್ದ ಕೇಂದ್ರ ಸರಕಾರ, ಇದೀಗ ಡಿಜಿಟಲ್ ಕರೆನ್ಸಿಗಳ ಬಗ್ಗೆ ನಿಬಂಧನೆಗಳನ್ನು ಅಂತಿಮಗೊಳಿಸುತ್ತಿದ್ದು, ಇದರ ಹಿನ್ನೆಲೆಯಲ್ಲೇ ಆರ್‌ ಗಾಂಧಿ ಈ ಮಾತುಗಳನ್ನು ಹೇಳಿದ್ದಾರೆ. ಒಂದೆಡೆ ಸರಕಾರ ಕ್ರಿಪ್ಟೋ ಕರೆನ್ಸಿಗಳಿಗೆ ಅಧಿಕೃತ ಮಾನ್ಯತೆ ನೀಡುವ ಹಾದಿಯಲ್ಲಿದ್ದರೆ, ಇನ್ನೊಂದೆಡೆ ಆರ್‌ಬಿಐ ಇದರ ಬಗ್ಗೆ ಪದೇ ಪದೇ ಪ್ರಶ್ನೆಗಳನ್ನು ಎತ್ತುತ್ತಲೇ ಇದೆ. ಇವೆಲ್ಲದರ ನಡುವೆ ಕ್ರಿಪ್ಟೋ ಕರೆನ್ಸಿಗಳ ವಹಿವಾಟು ಭಾರಿ ವೇಗದಲ್ಲಿ ಹೆಚ್ಚುತ್ತಲೇ ಇದ್ದು, ಮೇ ವೇಳೆಗೆ ದೇಶದಲ್ಲಿ 6.6 ಬಿಲಿಯನ್‌ ಡಾಲರ್‌ ಮೊತ್ತದ ವಹಿವಾಟು ನಡೆಯುತ್ತಿದೆ. ಇದೇ ವಹಿವಾಟು ಪ್ರಮಾಣ 2020ರ ಏಪ್ರಿಲ್‌ನಲ್ಲಿ ಕೇವಲ 923 ಮಿಲಿಯನ್‌ ಡಾಲರ್‌ ಇತ್ತು ಎಂಬುದು ಗಮನಾರ್ಹ. ಸದ್ಯಕ್ಕೆ ದೇಶದಲ್ಲಿ ಕ್ರಿಪ್ಟೋ ಕರೆನ್ಸಿಗಳ ಮೇಲೆ ಯಾವುದೇ ಕಾನೂನು, ನಿಯಂತ್ರಣ ಕ್ರಮಗಳು ಜಾರಿಯಲ್ಲಿ ಇಲ್ಲ. ಇದಕ್ಕೆ ನಿಯಂತ್ರಣ ಹೇರಲು ಕರಡು ಮಸೂದೆಯೊಂದನ್ನು ಕೇಂದ್ರ ಸರಕಾರ ರೂಪಿಸುತ್ತಿದೆ.