ಪುನೀತ್ ರಾಜ್‌ಕುಮಾರ್ ಪ್ರತಿಮೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ ರಾಘವೇಂದ್ರ ರಾಜ್‌ಕುಮಾರ್

'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಅವರ ಕಂಚಿನ ಪ್ರತಿಮೆ ತಯಾರಿಕೆ ಹಂತದಲ್ಲಿ ಶೇಕಡ 90%ರಷ್ಟು ಕೆಲಸ ಮುಗಿದಿದೆ. ಪ್ರತಿಮೆ ವೀಕ್ಷಿಸಲು ನಟ ರಾಘವೇಂದ್ರ ರಾಜ್‌ಕುಮಾರ್ ಆಗಮಿಸಿದ್ದರು.

ಪುನೀತ್ ರಾಜ್‌ಕುಮಾರ್ ಪ್ರತಿಮೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ ರಾಘವೇಂದ್ರ ರಾಜ್‌ಕುಮಾರ್
Linkup
ಬನಶಂಕರಿಯಲ್ಲಿ ಸ್ತಪತಿ ಕ್ರಿಯೇಷನ್ಸ್ ಸಂಸ್ಥೆಯಲ್ಲಿ 'ಪವರ್ ಸ್ಟಾರ್' ಅವರ ಕಂಚಿನ ಪ್ರತಿಮೆ ತಯಾರಿಕೆ ಹಂತದಲ್ಲಿ ಶೇಕಡ 90%ರಷ್ಟು ಕೆಲಸ ಮುಗಿದಿದೆ. ಪ್ರತಿಮೆ ವೀಕ್ಷಿಸಲು ಡಾ.ರಾಜ್‌ಕುಮಾರ್ ಕುಟುಂಬದ ಚಲನಚಿತ್ರ ನಟ , ಮಾಜಿ ಮಹಾಪೌರ ಜೆ.ಹುಚ್ಚಪ್ಪ ,ಬೆಂಗಳೂರು ನಗರ ಜಿಲ್ಲೆ ಬಿಜೆಪಿ ಅಧ್ಯಕ್ಷ ಎನ್ ಆರ್ ರಮೇಶ್, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಅಮೃತ್ ರಾಜ್ ಪಾಲಿಕೆ ಕನ್ನಡ ಸಂಘದ ಅಧ್ಯಕ್ಷ ಸಂಗೂಳ್ಳಿ ಕೃಷ್ಣಮೂರ್ತಿ, ಬಿಬಿಎಂಪಿ ಕೇಂದ್ರ ಕಛೇರಿ ಆವರಣದಲ್ಲಿರುವ ನಟ ಡಾ. ರಾಜ್‌ಕುಮಾರ್ ಅವರ ಪ್ರತಿಮೆ ಮಾಲಾರ್ಪಣೆ ಮಾಡಿ, ಪ್ರತಿಮೆ ವೀಕ್ಷಣೆ ಮಾಡುವ ಸ್ಥಳಕ್ಕೆ ತೆರಳಿದರು. ಸ್ತಪತಿ ಕ್ರಿಯೇಷನ್ಸ್ ಸಂಸ್ಥೆ ಶಿಲ್ಪಿ ಶಿವದತ್ತ, ಕನ್ನಡ ಹೋರಾಟಗಾರ ಸಾಯಿಶಂಕರ್, ವಾಟಾಳ್ ವೆಂಕಟೇಶ್, ರಾಮಚಂದ್ರ, ಮಂಜೇಗೌಡ ,ರಾಮು ಉಪಸ್ಥಿತರಿದ್ದರು. ನಟ ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿ "ಪುನೀತ್ ರಾಜ್‌ಕುಮಾರ್ ನಮ್ಮ ಕುಟುಂಬಕ್ಕಿಂತ ಹೆಚ್ಚು ಪ್ರೀತಿ, ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ. ಅಪ್ಪು ನಮ್ಮಿಂದ ದೂರವಾಗಿ 20 ದಿನವಾದರು ಜನರು ಇನ್ನು ನೋವನ್ನೂ ಮರೆತಿಲ್ಲ. ಅಪ್ಪು ಮಾಡಿದ ಸಮಾಜ ಸೇವಾ ಕಾರ್ಯಗಳನ್ನು ನಾವು ಮುನ್ನೆಡಿಸಿಕೊಂಡು ಹೋಗುತ್ತೇವೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಎಲ್ಲೂ ಹೋಗಿಲ್ಲ, ನಮ್ಮ ಜೊತೆ ಇದ್ದಾರೆ. ಅಪ್ಪು ಪ್ರತಿಮೆ ತುಂಬಾ ಚನ್ನಾಗಿ ಮೂಡಿ ಬಂದಿದೆ, ಅಂತಿಮ ರೂಪ ನೀಡಿದಾಗ ಎದುರಲ್ಲಿ ನಮ್ಮ ಜೊತೆ ನಿಂತಂತೆ ಭಾಸವಾಗುತ್ತದೆ" ಎಂದು ಹೇಳಿದರು. ಮಾಜಿ ಆಡಳಿತ ಪಕ್ಷದ ನಾಯಕ ಎನ್ ಆರ್ ರಮೇಶ್ ಮಾತನಾಡಿ "ನಟ ಡಾ.ರಾಜ್‌ಕುಮಾರ್ ಕುಟುಂಬ ಭಾರತೀಯ ಚಿತ್ರರಂಗಕ್ಕೆ ಮತ್ತು ಸಮಾಜಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ. ಡಾ. ರಾಜ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಲನಚಿತ್ರಗಳು ಸದಭಿರುಚಿ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರಗಳಾಗಿವೆ. ಅಪ್ಪು ಅಂಧ ಮಕ್ಕಳ ಶಾಲೆ, ವೃದ್ಧಾಶ್ರಮ, ಗೋಶಾಲೆ, ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಎಲೆ ಮರೆ ಕಾಯಿಯಂತೆ ಸೇವೆ ಸಲ್ಲಿಸಿದರು" ಎಂದು ಹೇಳಿದರು. ಅಮೃತ್ ರಾಜ್‌ ಮಾತನಾಡಿ "ಪುನೀತ್ ರಾಜ್ ಕುಮಾರ್ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಲನಚಿತ್ರಗಳನ್ನು ನಟಿಸಿದರು. ಅವರ ಸರಳತೆ, ಸಮಾಜ ಸೇವೆ ಇಡಿ ದೇಶದ ಗಮನ ಸೆಳಿಯಿತು. ಸಾವಿನಲ್ಲಿಯೂ ಸಾರ್ಥಕ ಜೀವನ ಎಂಬಂತೆ ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾದರು. ಅತಿ ಕಿರಿಯ ವಯಸ್ಸಿನಲ್ಲಿ, ಹಿರಿಯ ಸಾಧನೆ ಮಾಡಿದ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೀವನ, ಆದರ್ಶಗಳ ಮಾರ್ಗದರ್ಶನದಲ್ಲಿ ನಾವು ಸಾಗಬೇಕು. ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಸವಿನೆನಪಿನಲ್ಲಿ ನೇತ್ರದಾನ ಜಾಗೃತಿ ಅಭಿಯಾನ ಮತ್ತು ನೇತ್ರದಾನಕ್ಕೆ ಸಹಿ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇನ್ನು ಎರಡು ತಿಂಗಳ ಒಳಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಪ್ಪು ಕಂಚಿನ ಪುತ್ಥಳಿ ಲೋಕರ್ಪಣೆಯಾಗಲಿದೆ" ಎಂದು ಹೇಳಿದರು.