ಕೊರೊನಾ ಬಿಕ್ಕಟ್ಟಿನಲ್ಲೂ ದಾಖಲೆಯ 1.84 ಲಕ್ಷ ಕೋಟಿ ರೂ. ಪ್ರೀಮಿಯಂ ಸಂಗ್ರಹಿಸಿದ ಎಲ್‌ಐಸಿ

​​​​ಎಲ್‌ಐಸಿಯು 2020-21ರಲ್ಲಿ 2.10 ಕೋಟಿ ಪಾಲಿಸಿಗಳನ್ನು ಮಾರಾಟ ಮಾಡಿದ್ದು, 2019-20ಕ್ಕೆ ಹೋಲಿಸಿದರೆ ಎಲ್‌ಐಸಿ ಪ್ರೀಮಿಯಂ ಸಂಗ್ರಹ ಶೇಕಡಾ 10ರಷ್ಟು ಹೆಚ್ಚಳವಾಗಿದೆ. ​​ಒಂದು ವರ್ಷದ ಅವಧಿಯಲ್ಲಿ 1.84 ಲಕ್ಷ ಕೋಟಿ ರೂ. ಹೊಸ ಪ್ರೀಮಿಯಂ ಮೊತ್ತ ಸಂಗ್ರಹಿಸಿದೆ.

ಕೊರೊನಾ ಬಿಕ್ಕಟ್ಟಿನಲ್ಲೂ ದಾಖಲೆಯ 1.84 ಲಕ್ಷ ಕೋಟಿ ರೂ. ಪ್ರೀಮಿಯಂ ಸಂಗ್ರಹಿಸಿದ ಎಲ್‌ಐಸಿ
Linkup
ಹೊಸದಿಲ್ಲಿ: ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) 2020-21ರಲ್ಲಿ ದಾಖಲೆಯ 1.84 ಲಕ್ಷ ಕೋಟಿ ರೂ.ಗಳಷ್ಟು ಮೌಲ್ಯದ ಹೊಸ ಪ್ರೀಮಿಯಂ ಸಂಗ್ರಹಿಸಿದೆ. ಕೊರೊನಾ ಬಿಕ್ಕಟ್ಟಿನ ನಡುವೆಯೂ ಪ್ರೀಮಿಯಂನಲ್ಲಿ ದಾಖಲೆಯ ಏರಿಕೆ ಕಂಡಿರುವುದು ಗಮನಾರ್ಹ. 2019-20ಕ್ಕೆ ಹೋಲಿಸಿದರೆ ಎಲ್‌ಐಸಿ ಪ್ರೀಮಿಯಂ ಸಂಗ್ರಹ ಶೇಕಡಾ 10ರಷ್ಟು ಹೆಚ್ಚಳವಾಗಿದೆ. 2021ರ ಮಾರ್ಚ್‌ನಲ್ಲಿ ಎಲ್‌ಐಸಿಯು ಮಾರುಕಟ್ಟೆಯಲ್ಲಿ ಶೇ. 81.04ರಷ್ಟು ಪಾಲಿಸಿ ಪಾಲನ್ನು ಹೊಂದಿತ್ತು. ಇಡೀ ವರ್ಷಕ್ಕೆ ಹೋಲಿಸಿದರೆ ವಿಮೆಯಲ್ಲಿ ಶೇ. 74.58 ಪಾಲನ್ನು ಎಲ್‌ಐಸಿ ಬಾಚಿಕೊಂಡಿದೆ. 2020-21ರಲ್ಲಿ ಎಲ್‌ಐಸಿ ಮೊದಲ ಪ್ರೀಮಿಯಂ ಮೂಲಕವೇ 56,406 ಕೋಟಿ ರೂ. ಆದಾಯವನ್ನು (ವೈಯಯಕ್ತಿಕ ಅಶ್ಶೂರೆನ್ಸ್‌ ಬಿಸಿನೆಸ್‌)ಗಳಿಸಿದೆ. ಇದೇ ಅವಧಿಯಲ್ಲಿ ಎಲ್‌ಐಸಿಯು ಪಾಲಿಸಿದಾರರಿಗೆ 1.34 ಲಕ್ಷ ಕೋಟಿ ರೂ.ಗಳನ್ನು ಪಾವತಿ ಮಾಡಿದೆ. ಒಟ್ಟು 2.19 ಕೋಟಿ ಮೆಚ್ಯೂರಿಟಿ ಕ್ಲೇಮ್‌ಗಳನ್ನು ನಿರ್ವಹಿಸಿದೆ. ಇವುಗಳ ಮೊತ್ತ 1.16 ಲಕ್ಷ ಕೋಟಿ ರೂ.ಗಳಾಗಿದೆ. ಎಲ್‌ಐಸಿಯು 2020-21ರಲ್ಲಿ 2.10 ಕೋಟಿ ಪಾಲಿಸಿಗಳನ್ನು ವಿಕ್ರಯಿಸಿದೆ. ಇದರಲ್ಲಿ 46.72 ಲಕ್ಷ ಹೊಸ ಪಾಲಿಸಿಗಳು ಮಾರ್ಚ್‌ ತಿಂಗಳೊಂದರಲ್ಲೇ ಮಾರಾಟವಾಗಿವೆ. ಎಲ್‌ಐಸಿಯ ಪಿಂಚಣಿ ಮತ್ತು ಸಮೂಹ ವಿಮೆ ಯೋಜನೆಗಳು ಜನಪ್ರಿಯವಾಗಿದ್ದು, ವಿಕ್ರಯಗೊಂಡ ಪಾಲಿಸಿಗಳಲ್ಲಿ ಇವುಗಳ ಪಾಲು ಹೆಚ್ಚಿದೆ. ಇದೇ ಅವಧಿಯಲ್ಕಿ ಸಂಸ್ಥೆಯು ಹೊಸ ಸ್ಕೀಮ್‌ ಗಳ ಮೂಲಕ 31,795 ಪಾಲಿಸಿಗಳನ್ನು ಮಾರಾಟ ಮಾಡಿದೆ. 2020-21ರಲ್ಲಿ ಎಲ್‌ಐಸಿಯು 3,45,469 ಏಜೆಂಟರನ್ನೂ ಸೇರ್ಪಡೆಗೊಳಿಸಿದೆ. ಇದರೊಂದಿಗೆ ಸಂಸ್ಥೆಯ ಏಜೆಂಟರ ಸಂಖ್ಯೆ 13,53,808ಕ್ಕೆ ಏರಿಕೆಯಾಗಿದೆ.