ತೆರಿಗೆ ವ್ಯಾಪ್ತಿಗೆ ಕ್ರಿಪ್ಟೊ ಕರೆನ್ಸಿ ತರಲು ಸಿದ್ಧತೆ, ಬಜೆಟ್‌ ಅಧಿವೇಶನದಲ್ಲಿ ಘೋಷಣೆ ನಿರೀಕ್ಷೆ

ಕ್ರಿಪ್ಟೊ ಕರೆನ್ಸಿಗಳನ್ನು ಆದಾಯ ತೆರಿಗೆ ವ್ಯಾಪ್ತಿಗೆ ತರಲು ಕೇಂದ್ರ ಸರಕಾರ ಉದ್ದೇಶಿಸಿದ್ದು, ಈ ಸಂಬಂಧ ಆದಾಯ ತೆರಿಗೆ ಕಾಯಿದೆಗೆ ಮುಂಬರುವ ಬಜೆಟ್‌ನಲ್ಲಿ ಕೆಲವು ಬದಲಾವಣೆ ತರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೆರಿಗೆ ವ್ಯಾಪ್ತಿಗೆ ಕ್ರಿಪ್ಟೊ ಕರೆನ್ಸಿ ತರಲು ಸಿದ್ಧತೆ, ಬಜೆಟ್‌ ಅಧಿವೇಶನದಲ್ಲಿ ಘೋಷಣೆ ನಿರೀಕ್ಷೆ
Linkup
ಹೊಸದಿಲ್ಲಿ: ಕ್ರಿಪ್ಟೊ ಕರೆನ್ಸಿಗಳನ್ನು ವ್ಯಾಪ್ತಿಗೆ ತರಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ ಆದಾಯ ತೆರಿಗೆ ಕಾಯಿದೆಗೆ ಮುಂಬರುವ ಬಜೆಟ್‌ನಲ್ಲಿ ಕೆಲವು ಬದಲಾವಣೆ ನಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವರು ಈಗಾಗಲೇ ಮೂಲಕ ಲಭಿಸಿರುವ ಅದಾಯಕ್ಕೆ ಕ್ಯಾಪಿಟಲ್‌ ಗೇನ್ಸ್‌ (ಬಂಡವಾಳ ವೃದ್ಧಿ) ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಡಿಯಲ್ಲಿಯೂ ಇತರ ಸೇವೆ ವ್ಯಾಪ್ತಿಯ ಅಡಿಯಲ್ಲಿ ತೆರಿಗೆ ವಿಧಿಸಲು ಅವಕಾಶ ಇದೆ ಎಂದು ಕಂದಾಯ ಕಾರ್ಯದರ್ಶಿ ತರುಣ್‌ ಬಜಾಜ್‌ ತಿಳಿಸಿದ್ದಾರೆ. "ಕ್ರಿಪ್ಟೊ ಕರೆನ್ಸಿಗೆ ಸಂಬಂಧಿಸಿ ತೆರಿಗೆ ವಿಧಿಸಲು ಕಾಲ ಸನ್ನಿಹಿತವಾಗಿದೆ. ಕಾನೂನಿನಲ್ಲಿ ಕೆಲ ಬದಲಾವಣೆ ತರಲು ಸಮಾಲೋಚನೆ ನಡೆಸಲಾಗುತ್ತಿದೆ. ಆದರೆ ಇದು ಬಜೆಟ್‌ ಚಟುವಟಿಕೆಯೂ ಆಗಿರಲಿದೆ," ಎಂದು ತರುಣ್‌ ಬಜಾಜ್‌ ವಿವರಿಸಿದ್ದಾರೆ. ಕ್ರಿಪ್ಟೊ ಕರೆನ್ಸಿಗಳ ಮೂಲಕ ಆದಾಯ ಗಳಿಸುವುದಿದ್ದರೆ ಅದಕ್ಕೆ ತೆರಿಗೆ ನಿಯಮಗಳೂ ಅನ್ವಯವಾಗುವುದು ಅವಶ್ಯಕ. ಅದು ಮೂಲದಲ್ಲಿಯೇ ಸಂಗ್ರಹಿಸುವ ತೆರಿಗೆಯೇ (ಟಿಸಿಎ) ಅಥವಾ ಬೇರೆಯೇ ಎಂಬುದನ್ನು ನಿರ್ಧರಿಸಬೇಕಾಗಿದೆ. ಈಗಾಗಲೇ ಕೆಲ ತೆರಿಗೆ ನಿಬಂಧನೆಗಳ ಪ್ರಕಾರ ಇದು ಆಸ್ತಿಯಾಗಿದ್ದು, ಕ್ಯಾಪಿಟಲ್‌ ಗೇನ್ಸ್‌ ತೆರಿಗೆ ಅನ್ವಯವಾಗುತ್ತದೆ ಎಂದು ಅವರು ತಿಳಿಸಿದರು. ಕ್ರಿಪ್ಟೊ ಕರೆನ್ಸಿಗಳಿಗೆ ಸಂಬಂಧಿಸಿ ಪ್ರತ್ಯೇಕ ವಿಧೇಯಕವನ್ನು ಕೂಡ ಸರಕಾರ ಮುಂಬರುವ ನವೆಂಬರ್‌ 29ರಿಂದ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವ ನಿರೀಕ್ಷೆ ಇದೆ. ಕ್ರಿಪ್ಟೊ ಕರೆನ್ಸಿಗಳಲ್ಲಿ ಹೂಡಿಕೆ ಮಾಡಲು ಹಾಗೂ ಆದಾಯ ಗಳಿಸುವ ಬಗ್ಗೆ ಸಿನಿಮಾ ನಟರು ಜಾಹೀರಾತುಗಳ ಮೂಲಕ ಪ್ರಚಾರ ನೀಡುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಸದ್ಯಕ್ಕೆ ಕ್ರಿಪ್ಟೊ ಕರೆನ್ಸಿ ಬಳಕೆಗೆ ಯಾವುದೇ ನಿಯಂತ್ರಕ ವ್ಯವಸ್ಥೆ ಅಥವಾ ನಿಷೇಧವಾಗಲಿ ದೇಶದಲ್ಲಿ ಜಾರಿಯಲ್ಲಿ ಇಲ್ಲ. ಹೀಗಾಗಿ ಇದು ದುಷ್ಟರ ಕೈ ಸೇರದಂತೆ ನೋಡಿಕೊಳ್ಳಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆ ಈ ಸಂದರ್ಭದಲ್ಲಿ ಮಹತ್ವ ಪಡೆದುಕೊಂಡಿದೆ.