100% ಎಲ್‌ಪಿಜಿ ಸಂಪರ್ಕದತ್ತ ಭಾರತ, ಐತಿಹಾಸಿಕ ಸಾಧನೆಯತ್ತ ದೇಶ

ದೇಶದ ಪ್ರತಿ ಮನೆಗೂ ಎಲ್‌ಪಿಜಿ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ ನಿರ್ಣಾಯಕ ಪಾತ್ರ ವಹಿಸಿದ್ದು, ಭಾರತದಲ್ಲಿ ಅಡುಗೆ ಅನಿಲ ಸಂಪರ್ಕ ಶೇ.99.8ಕ್ಕೆ ಏರಿಕೆಯಾಗಿದ್ದು, ಶೇ.100ರ ಸನಿಹದಲ್ಲಿದೆ.

100% ಎಲ್‌ಪಿಜಿ ಸಂಪರ್ಕದತ್ತ ಭಾರತ, ಐತಿಹಾಸಿಕ ಸಾಧನೆಯತ್ತ ದೇಶ
Linkup
ಭಾರತದಲ್ಲಿ ಸಂಪರ್ಕ ಶೇ.99.8ಕ್ಕೆ ಏರಿಕೆಯಾಗಿದ್ದು, ಶೇ.100ರ ಸನಿಹದಲ್ಲಿದೆ. ದೇಶದ ಪ್ರತಿ ಮನೆಗೂ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ (ಪಿಎಂಯುವೈ) ನಿರ್ಣಾಯಕ ಪಾತ್ರ ವಹಿಸಿದೆ. ಈ ಹಿನ್ನೆಲೆಯಲ್ಲಿ ಭಾರತದ ಅಡುಗೆ ಮನೆಗಳಲ್ಲಿ ಎಲ್‌ಪಿಜಿ ಬಳಕೆಯ ಪಕ್ಷಿನೋಟ ಇಲ್ಲಿದೆ. ಎಲ್‌ಪಿಜಿ ಸಂಪರ್ಕದ ಪ್ರಗತಿ ಹೀಗೆ 2016 ಮೇನಲ್ಲಿ: 62% 2021 ಏಪ್ರಿಲ್‌ಗೆ : 99.8 ಎಲ್‌ಪಿಜಿಗೆ 57 ವರ್ಷಗಳ ಇತಿಹಾಸ ಭಾರತದಲ್ಲಿ ಮೊದಲ ಬಾರಿಗೆ ಎಲ್ಪಿಜಿ ಸಂಪರ್ಕ ಕಲ್ಪಿಸಿದ್ದು 1965ರ ಅಕ್ಟೋಬರ್‌ 22ರಂದು. ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ನ ಇಂಡೇನ್‌ ಕೋಲ್ಕೊತಾದಲ್ಲಿ ಮನೆಗಳಿಗೆ ಅಡುಗೆ ಅನಿಲ ಸಂಪರ್ಕ ಒದಗಿಸಿತು. ಈಗ ಐಒಸಿ ಜಗತ್ತಿನ 2ನೇ ಅತಿ ದೊಡ್ಡ ಎಲ್‌ಪಿಜಿ ಮಾರಾಟ ಕಂಪನಿಯಾಗಿದೆ. 28 ಕೋಟಿ ಎಲ್ಪಿಜಿ ಸಂಪರ್ಕ ಭಾರತದಲ್ಲಿ 28 ಕೋಟಿ ಅಡುಗೆ ಅನಿಲ ಗ್ರಾಹಕರಿದ್ದಾರೆ. ಇದರಲ್ಲಿಉಜ್ವಲ ಯೋಜನೆಯ ಫಲಾನುಭವಿಗಳೂ ಸೇರಿದ್ದಾರೆ. ಭಾರತ ಈಗ ವಿಶ್ವದಲ್ಲೇ 2ನೇ ಅತಿ ದೊಡ್ಡ ಎಲ್‌ಪಿಜಿ ಬಳಕೆದಾರ ರಾಷ್ಟ್ರವಾಗಿದೆ. ಉಜ್ವಲ 2ನೇ ಹಂತಕ್ಕೆ ಚಾಲನೆ ಕೇಂದ್ರ ಸರಕಾರ ಬಡ ಮಹಿಳೆಯರ ಕುಟುಂಬಕ್ಕೆ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಲು ಆರಂಭಿಸಿದ ನಂತರ ಶೇ.100 ಎಲ್‌ಪಿಜಿ ಕವರೇಜ್‌ ಗುರಿ ಸಮೀಪಿಸಿದೆ. 8 ಕೋಟಿ ಮಂದಿಗೆ ಉಜ್ವಲ ಎಲ್‌ಪಿಜಿ 2016ರ ಮೇನಲ್ಲಿ ಆರಂಭವಾದ ಉಜ್ವಲ ಯೋಜನೆಯಡಿಯಲ್ಲಿ ಒಟ್ಟು 8 ಕೋಟಿ ಮಂದಿ ಅಡುಗೆ ಅನಿಲ ಸಂಪರ್ಕ ಗಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಉಜ್ವಲ 2ನೇ ಹಂತಕ್ಕೆ ಚಾಲನೆ ನೀಡಿದ್ದು, ಇನ್ನೂ 1 ಕೋಟಿ ಕುಟುಂಬಕ್ಕೆ ಸಂಪರ್ಕ ಕಲ್ಪಿಸುವ ಗುರಿ ಇದೆ. ಕಳೆದ ವರ್ಷ ಉಜ್ವಲ ಫಲಾನುಭವಿಗಳಿಗೆ 3 ಉಚಿತ ರಿಫಿಲ್‌ ಸಿಲಿಂಡರ್‌ಗಳನ್ನೂ ವಿತರಿಸಲಾಗಿತ್ತು. ಸಬ್ಸಿಡಿ ನಿರ್ಮೂಲನೆ ಕಳೆದ ವರ್ಷ ಸೆಪ್ಟೆಂಬರ್‌ನಿಂದ ಜನತೆಗೆ ಅಡುಗೆ ಅನಿಲಕ್ಕೆ ಸಬ್ಸಿಡಿ ದೊರೆಯುತ್ತಿಲ್ಲ. ಆಮದು ವೆಚ್ಚ ಮತ್ತು ಮಾರುಕಟ್ಟೆ ದರ ಸಮಾನವಾಗಿರುವುದರಿಂದ ಸರಕಾರ ಸಬ್ಸಿಡಿ ವಿತರಿಸುತ್ತಿಲ್ಲ. ಹೀಗಾಗಿ ಜನತೆಯ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆಯಾಗುತ್ತಿದ್ದ ಸಬ್ಸಿಡಿ ಸ್ಥಗಿತವಾಗಿದೆ. ಹೀಗಿದ್ದರೂ, ಸಬ್ಸಿಡಿ ಸ್ಥಗಿತದಿಂದ ಮಧ್ಯಮ ವರ್ಗದ ಜನತೆಗೆ ಹೊರೆಯಾಗಿದೆ.