ಸೌರ ವಿದ್ಯುತ್‌ ವಲಯದಲ್ಲಿ ಅಂಬಾನಿ-ಅದಾನಿ ನಡುವೆ ಭಾರಿ ಪೈಪೋಟಿ, ದರ ಇಳಿಕೆ ನಿರೀಕ್ಷೆ

ರಿಲಯನ್ಸ್‌ ಸೌರ ವಿದ್ಯುತ್‌ ಉತ್ಪಾದನೆ, ಸೌರ ಫಲಕಗಳ ತಯಾರಿಕೆ ಸೇರಿದಂತೆ ನವೀಕರಿಸಬಹುದಾದ ಇಂಧನ ವಲಯದಲ್ಲಿ 75,000 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವುದಾಗಿ ಇತ್ತೀಚೆಗೆ ಘೋಷಿಸುವುದರೊಂದಿಗೆ ಈ ಕ್ಷೇತ್ರದಲ್ಲಿ ಅದಾನಿ ಮತ್ತು ಅಂಬಾನಿ ನಡುವೆ ಪೈಪೋಟಿ ಆರಂಭಗೊಂಡಿದೆ.

ಸೌರ ವಿದ್ಯುತ್‌ ವಲಯದಲ್ಲಿ ಅಂಬಾನಿ-ಅದಾನಿ ನಡುವೆ ಭಾರಿ ಪೈಪೋಟಿ, ದರ ಇಳಿಕೆ ನಿರೀಕ್ಷೆ
Linkup
ಹೊಸದಿಲ್ಲಿ: ಮುಖ್ಯಸ್ಥ ಮತ್ತು ಅದಾನಿ ಗ್ರೂಪ್‌ ಮುಖ್ಯಸ್ಥ ನಡುವೆ ಉತ್ಪಾದನೆ ವಲಯದಲ್ಲಿ ಪ್ರಬಲ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಸೌರ ವಿದ್ಯುತ್‌ ಉತ್ಪಾದನೆ, ಸೌರ ಫಲಕಗಳ ತಯಾರಿಕೆ ಸೇರಿದಂತೆ ನವೀಕರಿಸಬಹುದಾದ ಇಂಧನ ವಲಯದಲ್ಲಿ 75,000 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವುದಾಗಿ ಇತ್ತೀಚೆಗೆ ಘೋಷಿಸಿದೆ. 100 ಗಿಗಾವ್ಯಾಟ್‌ ಸಾಮರ್ಥ್ಯದ ಸೌರ ವಿದ್ಯುತ್‌ ಉತ್ಪಾದನಾ ಘಟಕ ಸ್ಥಾಪಿಸುವುದಾಗಿಯೂ ತಿಳಿಸಿದೆ. ಮತ್ತೊಂದು ಕಡೆ ಅದಾನಿ ಗ್ರೂಪ್‌ ಕೂಡ ಸೌರ ವಿದ್ಯುತ್‌ ಉತ್ಪಾದನೆ ವಲಯದಲ್ಲಿದೆ. ಹಾಗೂ ಈ ದಶಕದಲ್ಲಿ ಪ್ರತಿ ವರ್ಷ 5 ಗಿಗಾವ್ಯಾಟ್‌ನಂತೆ ಹಸಿರು ಇಂಧನ ಉತ್ಪಾದನಾ ಸಾಮರ್ಥ್ಯವನ್ನು ವೃದ್ಧಿಸುವುದಾಗಿ ತಿಳಿಸಿದೆ. ಈ ಎರಡೂ ದಿಗ್ಗಜ ಕಂಪನಿಗಳ ಪೈಪೋಟಿಯ ಪರಿಣಾಮ ಸೌರ ವಿದ್ಯುತ್‌ ಉತ್ಪಾದನೆ ಹೆಚ್ಚಳವಾಗಬಹುದು. ಜತೆಗೆ ದರಗಳಲ್ಲೂ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಭಾರತ 2030ರ ವೇಳೆಗೆ 450 ಗಿಗಾವ್ಯಾಟ್‌ಗಿಂತಲೂ ಹೆಚ್ಚು ನವೀಕರಿಸಬಹುದಾದ ಇಂಧನ ಉತ್ಪಾದಿಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಗುರಿಗೆ ಪೂರಕವಾಗಿ ಉಭಯ ಕಂಪನಿಗಳು ಹಸಿರು ಇಂಧನ ಉತ್ಪಾದನೆಯ ಸಾಮರ್ಥ್ಯ ಹೆಚ್ಚಿಸಲು ತೊಡಗಿವೆ. ಇದುವರೆಗೆ ಪೆಟ್ರೊಕೆಮಿಕಲ್ಸ್‌, ಜವಳಿ, ರಿಟೇಲ್‌, ಟೆಲಿಕಾಂ ವಲಯದಲ್ಲಿ ಉದ್ಯಮ ವಿಸ್ತರಿಸಿರುವ ಮುಕೇಶ್‌ ಅಂಬಾನಿ ಅವರು, ಇದೀಗ ಸೌರ ವಿದ್ಯುತ್‌ ಉತ್ಪಾದನೆಗೂ ಮುಂದಾಗುತ್ತಿದ್ದಾರೆ. ಗೌತಮ್‌ ಅದಾನಿ ಅವರೂ ವಿದ್ಯುತ್‌ ಉತ್ಪಾದನೆ, ವಿತರಣೆ, ಬಂದರು, ವಿಮಾನ ನಿಲ್ದಾಣ ನಿರ್ವಹಣೆ ವಲಯದಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರತದಲ್ಲಿನ ಸೌರ ವಿದ್ಯುತ್‌ ದರ ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಮಟ್ಟದ್ದಾಗಿದೆ. ಗುಜರಾತ್‌ನಲ್ಲಿ ಇತ್ತೀಚಿಗೆ ನಡೆದ ಹರಾಜಿನಲ್ಲಿ ಪ್ರತಿ ಕಿಲೊವ್ಯಾಟ್‌ ವಿದ್ಯುತ್‌ ದರ 2 ರೂ. ಒಳಗಿತ್ತು. '' 2030ರೊಳಗೆ ಸೌರ ವಿದ್ಯುತ್‌ ದರ ಬಹುಶಃ ಪ್ರತಿ ಕಿಲೋವ್ಯಾಟ್‌ಗೆ 1 ರೂ.ಗೆ ಇಳಿಕೆಯಾಗಲಿದೆ'' ಎಂದು ಇನ್‌ಸ್ಟಿಟ್ಯೂಟ್‌ ಆಫ್‌ ಎನರ್ಜಿ ಎಕನಾಮಿಕ್ಸ್‌ ಆ್ಯಂಡ್‌ ಫೈನಾನ್ಷಿಯಲ್‌ನ ನಿರ್ದೇಶಕ ಟಿಮ್‌ ಬಕ್ಲೆಅವರು ತಿಳಿಸಿದ್ದಾರೆ. ರಿಲಯನ್ಸ್‌ಗೆ ಪ್ರತಿಸ್ಪರ್ಧೆಯನ್ನು ಮುರಿಯುವ ಸಾಮರ್ಥ್ಯ ಇದೆ. ಈ ಹಿಂದೆ ಜಿಯೋ ಪ್ರವೇಶದ ನಂತರ ಟೆಲಿಕಾಂ ವಲಯದಲ್ಲಿ ಡೇಟಾ ಕರೆಗಳು ಅಗ್ಗವಾಗಿದ್ದವು. ಜಿಯೋ ಕೇವಲ 5 ವರ್ಷಗಳೊಳಗೆ ಭಾರ್ತಿ ಏರ್‌ಟೆಲ್‌, ವೊಡಾಫೋನ್‌ ಐಡಿಯಾವನ್ನು ಹಿಂದಿಕ್ಕಿ ಮುಂಚೂಣಿಯಲ್ಲಿದೆ.