‘ಕಪ್ಪು ಪಟ್ಟಿಗೆ ಸೇರಿದ ಕಂಪನಿಗೆ ನೂರಾರು ಕೋಟಿ ರೂ. ಗುತ್ತಿಗೆ;ಕಮಿಷನ್‌ ಸಲುವಾಗಿಯೇ ಟೆಂಡರ್‌!’

ಕೊರೊನಾ ನಡುವೆಯೂ ಅನಗತ್ಯ ಕಾಮಗಾರಿಗಳಿಗೆ ಕಮಿಷನ್‌ ಸಲುವಾಗಿಯೇ ಟೆಂಡರ್‌ ನೀಡಲಾಗುತ್ತಿದೆ. ಐದು ವರ್ಷಗಳಲ್ಲಿ 700 ಕೋಟಿ ರೂ. ವೆಚ್ಚ ಮಾಡಲಾಗಿದೆ. ಜತೆಗೆ ಪ್ರತಿವರ್ಷ ನಿರ್ವಹಣೆಗೂ 700 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಕಾಮಗಾರಿ ಬಳಿಕ ಮೂರು ವರ್ಷ ಗುತ್ತಿಗೆದಾರರೇ ನಿರ್ವಹಣೆ ಮಾಡಬೇಕು ಎಂಬ ನಿಯಮವಿದ್ದರೂ ಒಂದು ವರ್ಷಕ್ಕೆ ಇಳಿಸಲಾಗಿದೆ. ಇದು ಅಪರಾಧ ಎಂದು ದೂರಿದರು.

‘ಕಪ್ಪು ಪಟ್ಟಿಗೆ ಸೇರಿದ ಕಂಪನಿಗೆ ನೂರಾರು ಕೋಟಿ ರೂ. ಗುತ್ತಿಗೆ;ಕಮಿಷನ್‌ ಸಲುವಾಗಿಯೇ ಟೆಂಡರ್‌!’
Linkup
ಬೆಂಗಳೂರು: ನಗರದಲ್ಲಿ ಕಪ್ಪು ಪಟ್ಟಿಗೆ ಸೇರಿದ ಗುತ್ತಿಗೆ ಕಂಪನಿಗೆ ನೂರಾರು ಕೋಟಿ ರೂ. ಗುತ್ತಿಗೆ ನೀಡಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಉದಯ ಶಿವಕುಮಾರ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಅನರ್ಹ ಕಂಪನಿಗೆ ಸಿಗ್ನಲ್‌ ಫ್ರೀ ಕಾರಿಡಾರ್‌ ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಕೂಡಲೇ ಗುತ್ತಿಗೆ ರದ್ದು ಮಾಡಬೇಕು. ತಪ್ಪಿದಲ್ಲಿ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಕೊರೊನಾ ನಡುವೆಯೂ ಅನಗತ್ಯ ಕಾಮಗಾರಿಗಳಿಗೆ ಕಮಿಷನ್‌ ಸಲುವಾಗಿಯೇ ಟೆಂಡರ್‌ ನೀಡಲಾಗುತ್ತಿದೆ. ಬಳ್ಳಾರಿ, ತುಮಕೂರು ರಸ್ತೆ ಸೇರಿ ನಗರದೆಲ್ಲೆಡೆ ಬೇಕಾಬಿಟ್ಟಿ ಟೆಂಡರ್‌ ನೀಡಲಾಗಿದೆ. ಪ್ರಸಕ್ತ ಪರಿಸ್ಥಿತಿ ನೋಡಿಕೊಂಡು ಅಗತ್ಯ ಇರುವ ಕಡೆ ಮಾತ್ರ ಗುತ್ತಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಐದು ವರ್ಷಗಳಲ್ಲಿ 700 ಕೋಟಿ ರೂ. ವೆಚ್ಚ ಮಾಡಲಾಗಿದೆ. ಜತೆಗೆ ಪ್ರತಿವರ್ಷ ನಿರ್ವಹಣೆಗೂ 700 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಕಾಮಗಾರಿ ಬಳಿಕ ಮೂರು ವರ್ಷ ಗುತ್ತಿಗೆದಾರರೇ ನಿರ್ವಹಣೆ ಮಾಡಬೇಕು ಎಂಬ ನಿಯಮವಿದ್ದರೂ ಒಂದು ವರ್ಷಕ್ಕೆ ಇಳಿಸಲಾಗಿದೆ. ಇದು ಅಪರಾಧ ಎಂದು ದೂರಿದರು. ಕಪ್ಪು ಪಟ್ಟಿಗೆ ಸೇರಿರುವ ಕಂಪನಿಗೆ ಗುತ್ತಿಗೆ ನೀಡಿರುವ ವಿಚಾರದಲ್ಲಿ ಪಕ್ಷದ ಮಟ್ಟದಲ್ಲಿ ಚರ್ಚೆ ಮಾಡಿ ಬೃಹತ್‌ ಹೋರಾಟ ಹಮ್ಮಿಕೊಳ್ಳಲಾಗುವುದು. ಬಿಜೆಪಿ ಸರಕಾರ ಬಂದಾಗಲೆಲ್ಲಾ ಇದೇ ರೀತಿ ಮಾಡಲಾಗುತ್ತಿದೆ. ಹಿಂದೊಮ್ಮೆ ರಾತ್ರಿ ಟೆಂಡರ್‌ ಕರೆದಿದ್ದರು. ಸರಕಾರ ಕೂಡಲೇ ಗುತ್ತಿಗೆ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು. 15 ಒಳ ರಸ್ತೆ ನಿರ್ಮಾಣಕ್ಕೆ 355 ಕೋಟಿ ರೂ. ವೆಚ್ಚ! ಬೆಂಗಳೂರಿನ ಒಳಭಾಗದ 15 ರಸ್ತೆಗಳ ನಿರ್ಮಾಣಕ್ಕೆ 355 ಕೋಟಿ ರೂ. ಟೆಂಡರ್‌, ನಿರ್ಮಾಣದ ಬಳಿಕ ಪ್ರತಿ ವರ್ಷ 150 ಕೋಟಿ ರೂ.ನಂತೆ ಐದು ವರ್ಷ ನಿರ್ವಹಣೆಗೆ 750 ಕೋಟಿ ರೂ. ಟೆಂಡರ್‌ ನೀಡಲಾಗಿದೆ. ಇಂತಹ ಪ್ರಕರಣ ದೇಶದಲ್ಲಿ ಎಲ್ಲೂ ನಡೆದಿಲ್ಲ ಎಂದು ರಾಮಲಿಂಗಾರೆಡ್ಡಿ ದೂರಿದರು.