virat: 'ಅದ್ದೂರಿ ಲವರ್' ಆದ ಕನ್ನಡದ 'ಕಿಸ್' ಸಿನಿಮಾ ಹೀರೋ ವಿರಾಟ್!

ಕಿಸ್‌ ಚಿತ್ರದ ಮೂಲಕ ಹೀರೊ ಆಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟ ವಿರಾಟ್‌ ಈಗ 'ಅದ್ದೂರಿ ಲವರ್‌' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತೆರೆ ಕಾಣಲಿರುವ ಇದರ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ.

virat: 'ಅದ್ದೂರಿ ಲವರ್' ಆದ ಕನ್ನಡದ 'ಕಿಸ್' ಸಿನಿಮಾ ಹೀರೋ ವಿರಾಟ್!
Linkup
(ಪದ್ಮಾ ಶಿವಮೊಗ್ಗ) ಎ.ಪಿ. ಅರ್ಜುನ್‌ ನಿರ್ದೇಶನದ 'ಕಿಸ್‌' ಚಿತ್ರದಲ್ಲಿ ವಿರಾಟ್‌ ಮತ್ತು ಶ್ರೀಲೀಲಾ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರ ನೂರು ದಿನ ಪ್ರದರ್ಶನವನ್ನೂ ಕಂಡಿತ್ತು. ಮೊದಲ ಚಿತ್ರದಲ್ಲೇ ಎಲ್ಲರ ಗಮನ ಸೆಳೆದಿದ್ದ ವಿರಾಟ್‌ ಈಗ ಪುನಃ ಎ.ಪಿ. ಅರ್ಜುನ್‌ ನಿರ್ದೇಶನದ ಮತ್ತೊಂದು ಸಿನಿಮಾಗೂ ಆಯ್ಕೆಯಾಗಿದ್ದಾರೆ. 'ಅದ್ದೂರಿ ಲವರ್‌' ಎಂಬ ಹೆಸರಿನ ಈ ಚಿತ್ರದಲ್ಲಿ ಅವರು ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಕಿಸ್‌ ಚಿತ್ರ ಮೈಸೂರು, ತುಮಕೂರು, ಹಾಸನ ಹೀಗೆ ಸುಮಾರು ಹತ್ತು ಊರುಗಳಲ್ಲಿ ನೂರು ದಿನ ಪ್ರದರ್ಶನ ಕಂಡಿತ್ತು. ಈಗ ತೆಲುಗು ಭಾಷೆಗೂ ಡಬ್‌ ಆಗಿದೆ. ಕಿಸ್‌ ಮತ್ತು ಅದ್ದೂರಿ ಲವರ್‌ ಚಿತ್ರಗಳಲ್ಲಿ ಲವ್‌ ಸ್ಟೋರಿ ಇದ್ದರೂ ಅವೆರಡೂ ಸಂಪೂರ್ಣವಾಗಿ ಬೇರೆ ರೀತಿಯ ಸಿನಿಮಾಗಳಾಗಿವೆ. ಅದ್ದೂರಿ ಲವರ್‌ನಲ್ಲಿ ಆ್ಯಕ್ಷನ್‌ ದೃಶ್ಯಗಳಿಗೂ ಪ್ರಾಮುಖ್ಯತೆ ನೀಡಲಾಗಿದೆ' ಎಂದಿದ್ದಾರೆ ವಿರಾಟ್‌ ಇದೊಂದು ಕಮರ್ಷಿಯಲ್‌, ಆ್ಯಕ್ಷನ್‌ ಓರಿಯೆಂಟೆಡ್‌ ಸಿನಿಮಾ. ಇದರಲ್ಲಿ ನನ್ನ ಪಾತ್ರ, ಲುಕ್‌ಗಳೆಲ್ಲವೂ ಚೇಂಜ್‌. ಈ ಚಿತ್ರದಲ್ಲಿ ನನ್ನದು ಎನರ್ಜೆಟಿಕ್‌ ಕ್ಯಾರೆಕ್ಟರ್‌. ಪ್ರೀತಿಸುವ ಹುಡುಗಿಗಾಗಿ ಏನು ಬೇಕಾದರೂ ಮಾಡಬಲ್ಲ ಹುಡುಗನ ಪಾತ್ರವಿದು. ಪ್ರತಿ ಹುಡುಗಿಯೂ ಇಂಥ ಲವರ್‌ ತಮಗೂ ಸಿಗಬೇಕು ಎಂದು ಬಯಸುವಂಥ ಪಾತ್ರ ಇದು' ಎಂದಿದ್ದಾರೆ ವಿರಾಟ್‌. ಕಿಸ್‌ ಚಿತ್ರದಲ್ಲಿತಮ್ಮ ಡಾನ್ಸ್‌ನಿಂದ ಮೆಚ್ಚುಗೆ ಗಳಿಸಿರುವ ಅವರು 'ಅದ್ದೂರಿ ಲವರ್‌'ಗಾಗಿ ಡಾನ್ಸ್‌ ಮತ್ತು ಫೈಟ್‌ ದೃಶ್ಯಗಳಿಗೆ ವಿಶೇಷವಾಗಿ ಪ್ರ್ಯಾಕ್ಟೀಸ್‌ ಮಾಡುತ್ತಿದ್ದಾರೆ. 'ಲಾಕ್‌ಡೌನ್‌ ಇದ್ದಾಗ ಪ್ರತಿದಿನ ಅರ್ಜುನ್‌ ಸರ್‌ ಆಫೀಸ್‌ನಲ್ಲಿ ಸಿನಿಮಾ ಬಗ್ಗೆ ಡಿಸ್ಕಸ್‌ ಮಾಡುತ್ತಿದ್ದೆವು. ಹಾಗಾಗಿ ಸ್ಕ್ರಿಪ್ಟ್‌ ಇನ್ನೂ ಚೆನ್ನಾಗಿ ಇಂಪ್ರೂವ್‌ ಆಯ್ತು. ಕಿಸ್‌ ಚಿತ್ರದಂತೆಯೇ ಈ ಚಿತ್ರವೂ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ನನಗಿದೆ. ಶೂಟ್‌ಗೆ ಮೊದಲು ವರ್ಕ್‌ಶಾಪ್‌ ಮಾಡಲಿದ್ದಾರೆ. ಅರ್ಜುನ್‌ ಸರ್‌ ಪ್ರೀ ಪ್ರೊಡಕ್ಷನ್‌ ವರ್ಕ್ ಬಹಳ ಮಾಡಿದ್ದಾರೆ' ಎಂದು ವಿರಾಟ್‌ ಹೇಳಿದ್ದಾರೆ. ಪ್ರತಿ ಶಾಟ್‌, ಡೈಲಾಗ್‌ ಹೀಗೇ ಬರಬೇಕು ಅಂತ ಸ್ಕೆಚ್‌ ಹಾಕಿದ್ದಾರೆ. ಎರಡು ಭಾಷೆಗಳಲ್ಲಿ ರಿಲೀಸ್‌ ಆಗುತ್ತಿರುವುದರಿಂದ ದೊಡ್ಡ ಬಜೆಟ್‌ ಸಿನಿಮಾ ಇದಾಗಲಿದೆ. ಅರ್ಜುನ್‌ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ, ಟಾಲಿವುಡ್‌ಗೆ ಕೂಡ 'ಅದ್ದೂರಿ ಲವರ್‌' ಸೂಕ್ತ ಸಿನಿಮಾ ಆಗಲಿದೆ. ತೆಲುಗು ಚಿತ್ರರಂಗಕ್ಕೆ ನಾನು ಎಂಟ್ರಿ ಕೊಡಲು ಕೂಡ ಇದು ಬೆಸ್ಟ್‌ ಸಿನಿಮಾ ಅನಿಸಿದೆ. ಅರ್ಜುನ್‌ ಅವರ ನಿರ್ದೇಶನದಲ್ಲಿ ಮತ್ತೆ ನಟಿಸುತ್ತಿರೋದು ಖುಷಿಯ ಸಂಗತಿ' ಎಂದು ವಿರಾಟ್‌ ಹೇಳಿದ್ದಾರೆ. ದಾಂಡೇಲಿಯ ಲ್ಲಿಈ ಸಿನಿಮಾದ ಮೊದಲ ಶೆಡ್ಯೂಲ್‌ನ ಚಿತ್ರೀಕರಣ ನಡೆಯಲಿದೆ. ನಂತರ ಯಲ್ಲಾಪುರ, ಊಟಿ, ಬೆಂಗಳೂರು, ಕೂರ್ಗ್‌ಗಳಲ್ಲಿ ಚಿತ್ರೀಕರಣ ನಡೆಯಲಿದೆ. ಧ್ರುವ ಸರ್ಜಾ ನಟನೆಯ ಚಿತ್ರವೊಂದನ್ನೂ ಎ.ಪಿ. ಅರ್ಜುನ್‌ ನಿರ್ದೇಶನ ಮಾಡಲಿದ್ದಾರೆ. 'ಅದ್ದೂರಿ ಲವರ್‌' ಚಿತ್ರಕ್ಕೆ ನಾಯಕಿಯ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ. ಈ ಮೊದಲು ಇದಕ್ಕೆ ಸಂಜನಾ ಆನಂದ್‌ ಹೆಸರು ಕೇಳಿಬಂದಿತ್ತು. ಈಗ ಅವರು ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ತಿಳಿದುಬಂದಿದೆ. ಅದ್ದೂರಿ ಲವರ್‌ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಾಣಲಿದೆ. ನಾನು ಟಾಲಿವುಡ್‌ಗೆ ಎಂಟ್ರಿ ಕೊಡುತ್ತಿರುವುದು ಖುಷಿಯ ಸಂಗತಿ. ಆದರೆ, ನನ್ನ ಪ್ರಾಮುಖ್ಯತೆ ಕನ್ನಡಕ್ಕೇ ಇರಲಿದೆ. ಕನ್ನಡದ ಸೀರಿಯಲ್‌ ಮತ್ತು ಸಿನಿಮಾಗಳಿಂದ ಬಂದವನು ನಾನು ಎಂದು ಹೇಳಿದ್ದಾರೆ ವಿರಾಟ್‌