ಏರ್‌ ಇಂಡಿಯಾ ಖಾಸಗೀಕರಣ ಪ್ರಕ್ರಿಯೆ ಚುರುಕು, ಸೆ.15ರೊಳಗೆ ಹಣಕಾಸು ಬಿಡ್‌ ಸ್ವೀಕೃತಿ ಸಾಧ್ಯತೆ

2019ರ ಮಾರ್ಚ್ ವೇಳೆಗೆ ಇಂಡಿಯನ್‌ ಏರ್‌ಲೈನ್‌ 60,074 ಕೋಟಿ ರೂ. ಸಾಲವನ್ನು ಹೊಂದಿದ್ದು, ಇದರಲ್ಲಿ 23,286 ಕೋಟಿ ರೂ.ಗಳನ್ನು ಖರೀದಿದಾರರು ಕೊಳ್ಳಬೇಕಾಗುತ್ತದೆ. ಉಳಿದ ಸಾಲ ಏರ್‌ ಇಂಡಿಯಾ ಅಸೆಟ್ಸ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌ಗೆ ವರ್ಗಾವಣೆಯಾಗಲಿದೆ

ಏರ್‌ ಇಂಡಿಯಾ ಖಾಸಗೀಕರಣ ಪ್ರಕ್ರಿಯೆ ಚುರುಕು, ಸೆ.15ರೊಳಗೆ ಹಣಕಾಸು ಬಿಡ್‌ ಸ್ವೀಕೃತಿ ಸಾಧ್ಯತೆ
Linkup
ಹೊಸದಿಲ್ಲಿ: ಏರ್‌ ಇಂಡಿಯಾದ ಮಾರಾಟಕ್ಕೆ ಸಂಬಂಧಿಸಿ ಹಣಕಾಸು ಬಿಡ್‌ಗಳನ್ನು ಸೆಪ್ಟೆಂಬರ್‌ 15ರೊಳಗೆ ಸ್ವೀಕರಿಸುವ ನಿರೀಕ್ಷೆ ಇದೆ ಎಂದು ನಾಗರಿಕ ವಿಮಾನಯಾನ ಖಾತೆ ಸಹಾಯಕ ಸಚಿವ ವಿ.ಕೆ ಸಿಂಗ್‌ ತಿಳಿಸಿದ್ದಾರೆ. ಏರ್‌ ಇಂಡಿಯಾದ ಖರೀದಿಗೆ ಸಂಬಂಧಿಸಿ ಹಲವಾರು ಪ್ರಸ್ತಾಪಗಳನ್ನು (ಇಒಐ) ಈಗಾಗಲೇ ಸ್ವೀಕರಿಸಲಾಗಿದೆ. ಅರ್ಹ ಬಿಡ್ಡರ್‌ಗಳು (ಕ್ಯೂಐಬಿ) ಸೆ.15ರೊಳಗೆ ಹಣಕಾಸು ಬಿಡ್‌ಗಳನ್ನು ಸಲ್ಲಿಸುವ ನಿರೀಕ್ಷೆ ಇದೆ ಎಂದು ಲೋಕಸಭೆಗೆ ಸಲ್ಲಿಸಿದ ಲಿಖಿತ ಉತ್ತರದಲ್ಲಿ ತಿಳಿಸಿದರು. ಕ್ಯೂಐಬಿಗಳ ವಿವರವನ್ನು ಕೇಂದ್ರ ಬಹಿರಂಗಪಡಿಸಿಲ್ಲ. 2019ರ ಮಾರ್ಚ್ ವೇಳೆಗೆ ಇಂಡಿಯನ್‌ ಏರ್‌ಲೈನ್‌ 60,074 ಕೋಟಿ ರೂ. ಸಾಲವನ್ನು ಹೊಂದಿದೆ. ಇದರಲ್ಲಿ 23,286 ಕೋಟಿ ರೂ.ಗಳನ್ನು ಖರೀದಿದಾರರು ಕೊಳ್ಳಬೇಕಾಗುತ್ತದೆ. ಉಳಿದ ಸಾಲವು ಅಸೆಟ್ಸ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌ಗೆ ವರ್ಗಾವಣೆಯಾಗಲಿದೆ. ಏರ್‌ ಇಂಡಿಯಾದ ಆಸ್ತಿಗಳನ್ನು ಮಾರಾಟ ಮಾಡುವುದರ ಮೂಲಕ ಎಐಎಎಚ್‌ಎಲ್‌ಗೆ ವರ್ಗಾವಣೆಯಾಗಲಿರುವ ಸಾಲವನ್ನು ತೀರಿಸಲಾಗುವುದು ಎಂದು ತಿಳಿಸಿದರು. ಏರ್‌ ಇಂಡಿಯಾದ ಆಸ್ತಿಗಳ ಮೀಸಲು ದರವನ್ನು ಮೇಲುಸ್ತುವಾರಿ ಸಮಿತಿಯು ನಿರ್ಧರಿಸುತ್ತದೆ. ಆರಂಭಿಕ ಹರಾಜಿನಲ್ಲಿ ವಿಫಲವಾದ ನಂತರ 16 ಪ್ರಾಪರ್ಟಿಗಳ ದರದಲ್ಲಿ ಶೇ.10ರಷ್ಟು ಕಡಿತಗೊಳಿಸಲಾಗಿದೆ. ಏರ್‌ ಇಂಡಿಯಾದಲ್ಲಿರುವ ತನ್ನ ಶೇ.100 ಷೇರುಗಳನ್ನು ಸರಕಾರ ಮಾರಲಿದೆ.