ಡಿಜಿಟಲ್‌ ರೂಪಾಯಿ ಬಿಡುಗಡೆಗೆ ಆರ್‌ಬಿಐ ಸಿದ್ಧತೆ: ಡೆಪ್ಯುಟಿ ಗವರ್ನರ್‌ ಟಿ. ರಬಿ ಶಂಕರ್‌

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ, ರೂಪಾಯಿಯ ಡಿಜಿಟಲ್‌ ಕರೆನ್ಸಿಯನ್ನು ಬಿಡುಗಡೆಗೊಳಿಸಲು ಪರಿಶೀಲಿಸುತ್ತಿದೆ ಎಂದು ಡೆಪ್ಯುಟಿ ಗವರ್ನರ್‌ ಟಿ. ರಬಿ ಶಂಕರ್‌ ಗುರುವಾರ ತಿಳಿಸಿದ್ದಾರೆ. ಸಗಟು, ರಿಟೇಲ್‌ ವಲಯದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ.

ಡಿಜಿಟಲ್‌ ರೂಪಾಯಿ ಬಿಡುಗಡೆಗೆ ಆರ್‌ಬಿಐ ಸಿದ್ಧತೆ: ಡೆಪ್ಯುಟಿ ಗವರ್ನರ್‌ ಟಿ. ರಬಿ ಶಂಕರ್‌
Linkup
ಮುಂಬಯಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ, ರೂಪಾಯಿಯ ಡಿಜಿಟಲ್‌ ಕರೆನ್ಸಿಯನ್ನು ಬಿಡುಗಡೆಗೊಳಿಸಲು ಪರಿಶೀಲಿಸುತ್ತಿದೆ ಎಂದು ಡೆಪ್ಯುಟಿ ಗವರ್ನರ್‌ ಟಿ. ರಬಿ ಶಂಕರ್‌ ಗುರುವಾರ ತಿಳಿಸಿದ್ದಾರೆ. ನೂತನ 'ಸೆಂಟ್ರಲ್‌ ಬ್ಯಾಂಕ್‌ 'ಯನ್ನು (ಸಿಬಿಡಿಸಿ) ಬಿಡುಗಡೆಗೊಳಿಸಲು ಪರಿಶೀಲಿಸುತ್ತಿದೆ. ಶೀಘ್ರದಲ್ಲೇ ಪ್ರಾಯೋಗಿಕ ಪರೀಕ್ಷೆ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ. '' ಯಾವುದೇ ಪರಿಕಲ್ಪನೆ ಕಾರ್ಯಗತವಾಗಲು ಕೆಲ ಕಾಲ ಬೇಕಾಗುತ್ತದೆ. ಡಿಜಿಟಲ್‌ ಕರೆನ್ಸಿಯ ಬಿಡುಗಡೆಗೂ ಕಾಲಾವಕಾಶ ಬೇಕು. ಆದರೆ ಭಾರತದ ಡಿಜಿಟಲ್‌ ಕರೆನ್ಸಿ ಬಗ್ಗೆ ಆರ್‌ಬಿಐ ಕಾರ್ಯಪ್ರವೃತ್ತವಾಗಲಿದೆ. ಉದ್ದೇಶಿತ ಡಿಜಿಟಲ್‌ ಕರೆನ್ಸಿಯ ಕಾನೂನಾತ್ಮನಕ ಚೌಕಟ್ಟುಗಳನ್ನು ಪರಿಶೀಲಿಸಲಾಗುತ್ತಿದೆ. ಸಿಬಿಡಿಸಿಯು ನಗದು ಮತ್ತು ಡಿಜಿಟಲ್‌ ಪೇಮೆಂಟ್‌ಗಳ ಜತೆಗೆ ಇರಲಿದೆ '' ಎಂದು ಡೆಪ್ಯುಟಿ ಗವರ್ನರ್‌ ರಬಿ ಶಂಕರ್‌ ಅವರು ವಿಧಿ ಸೆಂಟರ್‌ ಫಾರ್‌ ಲೀಗಲ್‌ ಪಾಲಿಸಿ ಸಂಸ್ಥೆಯ ಕಾರ್ಯಕ್ರಮದಲ್ಲಿ ತಿಳಿಸಿದರು. '' ಡಿಜಿಟಲ್‌ ಕರೆನ್ಸಿ ಬಗ್ಗೆ ಕೂಲಂಕಷ ಪರಿಶೀಲನೆ ಅಗತ್ಯ. ಸಮಗ್ರ ಸಮಾಲೋಚನೆ ನಿರ್ಣಾಯಕ. ಹೀಗಿದ್ದರೂ ಸಗಟು ಮತ್ತು ರಿಟೇಲ್‌ ವಲಯದಲ್ಲಿ ಪ್ರಾಯೋಗಿಕವಾಗಿ ಶೀಘ್ರ ಬಿಡುಗಡೆ ಸಾಧ್ಯತೆ ಇದೆ'' ಎಂದರು. ಏನಿದು ಸಿಬಿಡಿಸಿ? ಉದ್ದೇಶಿತ 'ಸೆಂಟ್ರಲ್‌ ಬ್ಯಾಂಕ್‌ ಡಿಜಿಟಲ್‌ ಕರೆನ್ಸಿ (ಸಿಬಿಡಿಸಿ)' ವರ್ಚುವಲ್‌ ಕರೆನ್ಸಿ ಅಥವಾ ಕ್ರಿಪ್ಟೊಕರೆನ್ಸಿಯಾಗಿದ್ದು, ಆರ್‌ಬಿಐ ಬಿಡುಗಡೆಗೊಳಿಸಲಿದೆ. ರೂಪಾಯಿ ಕರೆನ್ಸಿಗೆ ಪರ್ಯಯವಾಗಿ ಇದನ್ನು ಬಳಸಬಹುದು. ಖಾಸಗಿ ಕ್ರಿಪ್ಟೊ ಕರೆನ್ಸಿಗಳಂತಿರದೆ, ಸರಕಾರಿ ಡಿಜಿಟಲ್‌ ಕರೆನ್ಸಿ ಇದಾಗಲಿದೆ. ಮಾತ್ರವಲ್ಲದೆ ಕ್ರಿಪ್ಟೊ ಕರೆನ್ಸಿಗಳಿಂದ ಆರ್ಥಿಕತೆಗೆ ಸಂಭವನೀಯ ಅಪಾಯವನ್ನು ಕನಿಷ್ಠಗೊಳಿಸಲಿದೆ. ಸಿಬಿಡಿಸಿಯಿಂದ ನಗದಿನ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಕರೆನ್ಸಿ ಮುದ್ರಣ ವೆಚ್ಚದಲ್ಲಿ ಉಳಿತಾಯವಾಗಲಿದೆ. ಹಣಕಾಸು ವರ್ಗಾವಣೆಗಳಿಗೆ ಅನುಕೂಲವಾಗಲಿದೆ. ಚೀನಾ, ರಷ್ಯಾ ಮತ್ತು ಬ್ರಿಟನ್‌ನಲ್ಲಿ ಡಿಜಿಟಲ್‌ ಕರೆನ್ಸಿಯ ಪ್ರಯೋಗಗಳು ನಡೆಯುತ್ತಿವೆ. ಭಾರತವೂ ಇದೇ ಸಾಲಿಗೆ ಸೇರ್ಪಡೆಯಾಗಲಿದೆ.