ಉಚಿತ ಲಸಿಕೆಯ ಭಾಗವಾಗಿ 400 ಕೋಟಿ ರೂಪಾಯಿ ಮೀಸಲು: ಡಾ. ಕೆ. ಸುಧಾಕರ್

ರಾಜ್ಯ ಸರಕಾರ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ಕೊಡುವುದಾಗಿ ಘೋಷಿಸಿದೆ. ಉಚಿತ ಲಸಿಕೆಯ ಭಾಗವಾಗಿ 400 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ ಎಂದು ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.

ಉಚಿತ ಲಸಿಕೆಯ ಭಾಗವಾಗಿ 400 ಕೋಟಿ ರೂಪಾಯಿ ಮೀಸಲು: ಡಾ. ಕೆ. ಸುಧಾಕರ್
Linkup
ಬೆಂಗಳೂರು: ರಾಜ್ಯ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, 18 ವರ್ಷ ಮೇಲ್ಪಟ್ಟವರಿಗೆ ಕೊಡುವುದಾಗಿ ಘೋಷಿಸಿದೆ. ಉಚಿತ ಲಸಿಕೆಯ ಭಾಗವಾಗಿ 400 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ಸೋಂಕಿಗೆ ಲಸಿಕೆ ಅಂತಿಮ ರಾಮಬಾಣವಾಗಿದೆ ಎಂದು ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು. ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜತೆ ಸಭೆ ನಡೆಸಲಾಗಿದೆ. ಈ ಹಿಂದೆ ಶೇ.50 ಸಾಮಾನ್ಯ ಬೆಡ್ ಗಳನ್ನು, ಐಸಿಯು, ವೆಂಟಿಲೇಟರ್ ಬೆಡ್ ಕೊಡಲು ಸೂಚಿಸಲಾಗಿತ್ತು. ಒಟ್ಟು 4500 ಬೆಡ್ ಗಳನ್ನು ಕೊಡಬೇಕಿತ್ತು. ಕೇವಲ ಈಗ 3500 ಹಾಸಿಗೆ ಕೊಟ್ಟಿದ್ದಾರೆ. ಇನ್ನೂ ಒಂದು ಸಾವಿರ ಬೆಡ್‌ಗಳನ್ನು ಕೊಟ್ಟಿಲ್ಲ. ಇನ್ನು ಮುಂದೆ ಶೇ.75 ರಷ್ಟು ಹಾಸಿಗೆ ಕೊಡಲು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ಹೇಳಿದರು. ಎರಡನೇ ಅಲೆ ಬಳಿಕ ಮೂರನೇ, ನಾಲ್ಕನೇ ಅಲೆ ಬರಬಹುದು. ಅದನ್ನು ತಡೆಯಲು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಿಸುವುದು ಅವಶ್ಯ ವಾಗಿದೆ. ಖಾಸಗಿ ಆಸ್ಪತ್ರೆಗಳಿಂದ ಶೇ.75 ರಷ್ಟು ಬೆಡ್ ಗಳನ್ನು ಅತಿ ಶೀಘ್ರದಲ್ಲಿ ಪಡೆದುಕೊಳ್ಳುತ್ತೇವೆ. ಇನ್ನು ಆಸ್ಪತ್ರೆಗಳಲ್ಲಿ ಎಂಥವರನ್ನು ದಾಖಲು ಮಾಡ್ಕೋಬೇಕು ಅಂತಲೂ ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆಗೆ ನಿಗಾ ಇಡಲು ಅಧಿಕಾರಿಗಳನ್ನು ನೇಮಿಸಲಾಗಿದೆ. ಇಷ್ಟೆಲ್ಲ ಮಾಡಿದ್ರೂ ಸಮಸ್ಯೆ ಯಾಕೆ ಬರ್ತಿದೆ? ಎಂದು ಅಸಮಾಧಾನ ವ್ಯಕ್ತಪಡಿಸಿದರು. ಎರಡನೇ ಅಲೆಯಲ್ಲಿ ಮೊದಲ ಅಲೆ ಗಿಂತ ಐದು ಪಟ್ಟು ಹೆಚ್ಚು ಸೋಂಕು ಬರ್ತಿದೆ. ನಿಜವಾದ ರೋಗಿಗಳಿಗೆ ಆಕ್ಸಿಜನ್, ವೆಂಟಿಲೇಟರ್, ಐಸಿಯು ಸಿಕ್ತಿಲ್ಲ. ಶೇ.50 ರಷ್ಟು ಕಡಿಮೆ ಸೋಂಕಿರೋರು, ಲಕ್ಷಣರಹಿತರು ದಾಖಲಾಗಿದ್ದಾರೆ. ಅನೇಕರಿಗೆ ಆರ್ಟಿಪಿಸಿಆರ್ ನಲ್ಲಿ‌ ನೆಗೆಟಿವ್ ಬರ್ತಿದೆ. ಸಿಟಿ ಸ್ಕ್ಯಾನ್ ನಲ್ಲಿ ಪಾಸಿಟಿವ್ ಬರ್ತಿದೆ. ಈ ಸಂಬಂಧ ಎಲ್ಲ ಆಸ್ಪತ್ರೆಗಳಿಗೂ ನಿರ್ದೇಶನ ಕೊಡಲಾಗಿದೆ ಸಿಟಿ ಸ್ಕ್ಯಾನ್ ನಲ್ಲಿ ಪಾಸಿಟಿವ್ ಬಂದಿರೋರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಗೆ ಸೂಚಿಸಲಾಗಿದೆ. 1.93 ಲಕ್ಷ ರೆಮೆಡಿಸಿವಿರ್ ವಯಲ್ಸ್ ಗೆ 28 ಕೋಟಿ ರೂ ಮೀಸಲಿರಿಸಲಾಗಿದೆ. ಬೆಂಗಳೂರಿನ ವಿಕ್ಟೋರಿಯಾ, ಬೌರಿಂಗ್ ಗಳಲ್ಲಿ 250 ಹೆಚ್ವುವರಿ ಹಾಸಿಗೆ ವ್ಯವಸ್ಥೆಗೆ ನಿರ್ಧರಿಸಲಾಗಿದೆ. ಮನೆಯಲ್ಲಿ ಇರೋ ರೋಗಿಗಳಿಗೆ‌ ಮೆಡಿಕಲ್ ಕಿಟ್ ಕೊಡ್ತೇವೆ. ಕೊರೊನಾ ತೀವ್ರ ಸ್ವರೂಪದ ಸೋಂಕಲ್ಲ. ಕೆಲವರಿಗೆ ಗಂಭೀರತೆ ಆಗುತ್ತೆ. ಶೇ.0.5 ಗಿಂತ ಸಾವಿನ ಪ್ರಮಾಣ ಇದೆ. ಇದು ನಮಗೆ ಸಮಾಧಾನ‌ ತಂದಿದೆ. ಹದಿನೈದು ದಿನಗಳ ಕಾಲ ಬಿಗಿ ನಿರ್ಬಂಧ ಇದೆ. ಜನ ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಡಾ. ಕೆ. ಸುಧಾಕರ್‌ ತಿಳಿಸಿದರು. ಉಚಿತ ಲಸಿಕೆ ಪ್ರಕ್ರಿಯೆಗೆ ಏಪ್ರಿಲ್ 28 ರಿಂದ ನೋಂದಣಿ ಮಾಡಿಸ್ಕೋಬೇಕು. ಕೋವಿನ್ ಆಪ್ ನಲ್ಲಿ ನೋಂದಣಿ‌ ಮಾಡ್ಕೋಬೇಕು. ಲಸಿಕೆ ಬಂದ ಬಳಿಕ ಜಿಲ್ಲಾವಾರು ಹಂಚಿಕೆ ಮಾಡ್ತೇವೆ ಎಂದರು.