#MakeWayForTheBridesOfIndia: ಮಲಬಾರ್ ಗೋಲ್ಡ್ & ಡೈಮಂಡ್ಸ್‌ನಿಂದ ಅನಾವರಣ..!

ಮಲಬಾರ್ ಗೋಲ್ಡ್ & ಡೈಮಂಡ್ಸ್ ಸಂಸ್ಥೆಯು #MakeWayForTheBridesOfIndia ಅಭಿಯಾನದ ಅಡಿ, ಕಿಕ್ ಆಫ್ ಬ್ರೈಡ್ಸ್ ಆಫ್ ಇಂಡಿಯಾ 2021 ವಿವಾಹ ಗೀತೆಯನ್ನು ಅನಾವರಣಗೊಳಿಸುತ್ತಿದೆ. ದಿ ಬ್ರೈಡ್ಸ್ ಆಫ್ ಇಂಡಿಯಾ 2021 ಅಭಿಯಾನವು ವಧುವಿನ ಭವ್ಯ ಪ್ರವೇಶದ ಉತ್ಸಾಹವನ್ನು ಬಿಂಬಿಸುತ್ತದೆ. ಈ ವಿವಾಹ ಗೀತೆಯ ವಿಡಿಯೋವನ್ನು ಬಾಲಿವುಡ್ ಸಿನೆಮಾ 'ದಿ ಬಿಗ್ ಬುಲ್' ನಿರ್ದೇಶಕ ಕೂಕಿ ಗುಲಾಟಿ ನಿರ್ದೇಶಿಸಿದ್ದಾರೆ. 8ನೇ ಆಗಸ್ಟ್, 2021ರಂದು ಜಗತ್ತಿನ ಅತಿ ದೊಡ್ಡ ಚಿನ್ನ ಮತ್ತು ವಜ್ರಾಭರಣಗಳ ರಿಟೇಲ್ ಚೈನ್ ಮಾರಾಟ ಸಂಸ್ಥೆಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ 9ನೇ ಆವೃತ್ತಿಯ ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿದೆ. ಈ ಬಾರಿ ವಿಶೇಷ ವಿವಾಹ ಗೀತೆಯಾಗಿ #MakeWayForTheBride ಅನ್ನು ಪ್ರಸ್ತುತಪಡಿಸಿದ್ದು, ಆಧುನಿಕ ದಿನಮಾನಗಳ ಭಾರತೀಯ ವಿವಾಹ ಸಮಾರಂಭಗಳ ಹೆಗ್ಗುರುತಾಗಿರುವ ವಧುವಿನ ಅದ್ಧೂರಿ ಪ್ರವೇಶವನ್ನು ಚಿತ್ರಿಸಿದೆ. ​​ಕಲಾತ್ಮಕವಾಗಿ ಚಿತ್ರೀಸಲಾದ 3 ನಿಮಿಷಗಳ ಈ ವಿವಾಹದ ಗೀತೆಯ ವಿಡಿಯೋವನ್ನು ಬಿಡುಗಡೆ ಮಾಡಿದ ಮೊದಲ 48 ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ 2 ಮಿಲಿಯನ್ ವೀಕ್ಷಕರು ವೀಕ್ಷಿಸಿದ್ದಾರೆ. ಮಲಬಾರ್ ಗೋಲ್ಡ್ & ಡೈಮಂಡ್ಸ್ ಸಂಸ್ಥೆಯ ಪ್ರಸಿದ್ಧ ಬ್ರ್ಯಾಂಡ್ ರಾಯಭಾರಿಗಳಾದ ಅನಿಲ್ ಕಪೂರ್ ಮತ್ತು ಕರೀನಾ ಕಪೂರ್ ಹಾಗೂ ದೇಶದ ವಿವಿಧ ಭಾಗಗಳ ವಧುಗಳನ್ನು ಒಳಗೊಂಡು ವಿಶಿಷ್ಟವಾಗಿ ಚಿತ್ರೀಕರಿಸಲಾಗಿದೆ. ​ಬ್ರೈಡ್ಸ್ ಆಫ್ ಇಂಡಿಯಾ 2021 ವಿವಾಹ ಗೀತೆಯ ಪರಿಕಲ್ಪನೆಯನ್ನು ಸೃಜನಶೀಲ ಸಂಸ್ಥೆ ಡೆಂಟ್ಸು ಇಂಡಿಯಾ ಮಾಡಿದೆ. ಸೆಲ್ಯುಲಾಯ್ಡ್ ಪ್ರಪಂಚದ ಅತ್ಯಂತ ಪ್ರತಿಭಾನ್ವಿತ ಮತ್ತು ಅತ್ಯುನ್ನತ ಪ್ರತಿಭಾವಂತ ವೃತ್ತಿಪರರಿಂದ ಅಭಿವೃದ್ಧಿಪಡಿಸಲಾಗಿದೆ. ಅಭಿಷೇಕ್ ಬಚ್ಚನ್ ಅಭಿನಯದ ದಿ ಬಿಗ್ ಬುಲ್ ಮುಂತಾದ ಸಿನೆಮಾಗಳ ನಿರ್ದೇಶಕ ಕೂಕಿ ಗುಲಾಟಿ ಅವರಿಂದ ನಿರ್ದೇಶಿಸಲ್ಪಟ್ಟಿದೆ. ಈ ಗೀತೆಯು ಲವ್ ಆಜ್ ಕಲ್ ಸಿನಿಮಾದ ಛಾಯಾಗ್ರಹಣ ನಿರ್ದೇಶಕರಾಗಿದ್ದ ಅಮಿತ್ ರಾಯ್, ಪೀಕು ಖ್ಯಾತಿಯ ಅನುಪಮ್ ರಾಯ್ ಸಂಗೀತ ಸಂಯೋಜನೆ ಮತ್ತು ವಿಕ್ಕಿ ಡೋನರ್ ಖ್ಯಾತಿಯ ಬರಹಗಾರ ಜೂಹಿ ಚತುರ್ವೇದಿ ಗೀತರಚನೆಯನ್ನೂ ಒಳಗೊಂಡು ಸಮೃದ್ಧವಾಗಿದೆ. ಈ ವಿವಾಹ ಗೀತೆಯ ಕಿರು ಆವೃತ್ತಿಯನ್ನು ಜಾಹೀರಾತು ರೂಪದಲ್ಲಿ ಟಿವಿ ಚಾನೆಲ್‌ಗಳಲ್ಲಿ ಮತ್ತು ಒಟಿಟಿ ವೇದಿಕೆಗಳಲ್ಲಿ ಪ್ರಸಾರ ಮಾಡಲಾಗುವುದು. ವಿವಾಹ ಗೀತೆಯ ಪೂರ್ಣ ರೂಪವನ್ನು ಆಯ್ದ ಟಿವಿ ಚಾನೆಲ್‌ಗಳಲ್ಲಿ ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುವುದು. ಮೊದಲ ವಾರದಲ್ಲಿ ಡಿಜಿಟಲ್ ವೇದಿಕೆಗಳಲ್ಲಿ ಮಾತ್ರ ಈ ಅಭಿಯಾನವನ್ನು ಪ್ರಸಾರ ಮಾಡಲಾಗುತ್ತಿದ್ದು, ಮುಂದೆ ಟಿವಿ ಮತ್ತು ಮುದ್ರಣ ಮಾಧ್ಯಮದ ಆಯಕಟ್ಟಿನ ಸ್ಥಳಗಳನ್ನು ಆವರಿಸಿಕೊಳ್ಳಲಿದೆ. ವಿವಾಹ ಗೀತೆಯ ಥೀಮ್ ಸಾಂಗ್‌ನ ವಿಡಿಯೋ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಪಂಜಾಬ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳ ವಧುಗಳು ಸಾಂಪ್ರದಾಯಿಕ ವಿನ್ಯಾಸಗಳನ್ನು ಬಿಂಬಿಸಲಾಗಿದ್ದು, ವಿವಾಹ ಮಂಟಪ ಪ್ರವೇಶವನ್ನು ಸಾಧ್ಯವಾದಷ್ಟೂ ಅದ್ದೂರಿಯಾಗಿ ಪ್ರದರ್ಶಿಸಲಾಗಿದೆ. ಈ ಮೂಲಕ, ಹೊಸ-ಕಾಲಮಾನದ ವಧುವಿನ ಅಭಿರುಚಿಗೆ ತಕ್ಕಂತೆ ಸಿದ್ಧರಾಗಲು ಸ್ಫೂರ್ತಿ ನೀಡುವಂತಿದೆ. ಈ ಬಗ್ಗೆ ಮಾತನಾಡಿರುವ ಮಲಬಾರ್ ಸಮೂಹದ ಅಧ್ಯಕ್ಷ ಎಂ. ಪಿ. ಅಹಮ್ಮದ್, 'ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನವು ಹೊಸ ಯುಗದ ವಧುಗಳಿಗೆ ಮತ್ತು ಅವರ ವಿಸ್ಮಯಕಾರಿ ವ್ಯಕ್ತಿತ್ವಕ್ಕೆ ನಾವು ನೀಡುವ ಗೌರವವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ, ಬ್ರೈಡ್ಸ್ ಆಫ್ ಇಂಡಿಯಾ ದೇಶಾದ್ಯಂತ ಎಲ್ಲ ವಧುಗಳ ಆಭರಣ ಅಗತ್ಯಗಳನ್ನು ಪೂರೈಸುವಲ್ಲಿ ಹಾಗೂ ನಮ್ಮ ಬಹುಮುಖತೆಯನ್ನು ಪ್ರದರ್ಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ' ಎಂದಿದ್ದಾರೆ. 'ಬ್ರೈಡ್ಸ್ ಆಫ್ ಇಂಡಿಯಾ 2021ರ ಥೀಮ್, ವಧುವಿಗೆ ಈ ಅವಕಾಶ ನೀಡಲು ಎಲ್ಲರನ್ನೂ ಪ್ರೋತ್ಸಾಹಿಸುತ್ತದೆ. ಏಕೆಂದರೆ, ಇದು ಆಕೆಯ ಕ್ಷಣ, ಆಕೆಯ ದಿನ. ಅದನ್ನು ಸ್ಮರಣೀಯವಾಗಿಸಿಕೊಳ್ಳುವ ಸುಸಂದರ್ಭವಿದು..! ಅವಳು ಮಿಂಚಲು ಇಲ್ಲಿ ಬಂದಿದ್ದಾಳೆ ಹಾಗೂ ಇದು ಪ್ರಪಂಚಕ್ಕೆ ತಿಳಿಯುವಂತೆ ಮಾಡಬೇಕಿದೆ. ಬ್ರೈಡ್ಸ್ ಆಫ್ ಇಂಡಿಯಾ 2021 ಅಭಿಯಾನದ ಅನಾವರಣದ ಜೊತೆಗೆೆ, ತನಗಾಗಿ ಮಹತ್ವದ ದಿನವೊಂದನ್ನು ರೂಪಿಸಿಕೊಳ್ಳುವ ವಧುವಿನ ಆಯ್ಕೆಯನ್ನು ನಾವು ಸಂಭ್ರಮಿಸುತ್ತೇವೆ. ಹೊಸ ಕಾಲಮಾನದ ವಧುಗಳ ವೈವಿಧ್ಯಮಯ ಸಂವೇದನೆಗಳನ್ನು ಪೂರೈಸುವ ವಿನ್ಯಾಸಗಳೊಂದಿಗೆ, ಪ್ರತಿ ವಧು ತನ್ನ ಅನನ್ಯ ಪ್ರವೇಶಕ್ಕೆ ಪೂರಕವಾದ ಏನಾದರೂ ವಿಶೇಷವನ್ನು ಇದು ಹೊಂದಿರುತ್ತದೆ' ಎಂದು ಅಹಮ್ಮದ್ ಅವರು ವಿವರಿಸುತ್ತಾರೆ. ಈ ಅಭಿಯಾನವು ದೇಶದ ವಿವಿಧ ಭಾಗಗಳಿಂದ 13 ವಧುಗಳನ್ನು ಎರಡು ವಿಶಿಷ್ಟ ನೋಟಗಳಲ್ಲಿ ಒಳಗೊಂಡಿದೆ. ಈ 26 ಅನನ್ಯ ನೋಟಗಳಲ್ಲಿ ಪೋಲ್ಕಿ ಆಭರಣಗಳಿಂದ ಸಿಂಗರಿಸಿಗೊಂಡ ವಧು, ವಜ್ರಾಭರಣಗಳಲ್ಲಿ ಮಿನುಗುವ ವಧು, ಸಮಕಾಲೀನ ರಿಸೆಪ್ಶನ್‌ಗಾಗಿ ಕರಕುಶಲ ಆಭರಣಗಳನ್ನು ತೊಟ್ಟ ವಧು, ಕ್ಲಾಸಿಕ್ ಚಿನ್ನಾಭರಣಗಳನ್ನು ಧರಿಸಿದ ವಧು, ಕೇರಳ, ಕರ್ನಾಟಕ, ತೆಲುಗು, ತಮಿಳು, ಉತ್ತರ ಪ್ರದೇಶ ಮತ್ತು ಬಿಹಾರ, ಪಂಜಾಬಿ, ಬಂಗಾಳಿ, ಒಡಿಯಾ, ಮರಾಠಿ ಮತ್ತು ಗುಜರಾತಿ ವಧುಗಳನ್ನು ಕಣ್ತುಂಬಿಕೊಳ್ಳಬಹುದು. ​​ಈ ಎಲ್ಲ ನೋಟಗಳನ್ನು ಪ್ರಖ್ಯಾತ ಛಾಯಾಗ್ರಾಹಕ ಅವಿನಾಶ್ ಗೋವರೀಕರ್ ಅವರು ವಧುವಿನ ಆಭರಣಗಳ ಸೊಗಸಾದ ಶ್ರೇಣಿಯಲ್ಲಿ ಸೆರೆಹಿಡಿದಿದ್ದಾರೆ. ಈ ಅಭಿಯಾನವು ಮಲಬಾರ್ ಗೋಲ್ಡ್ & ಡೈಮಂಡ್ಸ್‌ನ ಪ್ರಮುಖ ಆಭರಣ ಉಪ ಬ್ರ್ಯಾಂಡ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಮೈನ್, ಎರಾ, ಪ್ರೆಸಿಯಾ, ಡಿವೈನ್, ಎಥ್ನಿಕ್ಸ್ ಮತ್ತು ಪೋಲ್ಕಿ ಸಂಗ್ರಹವಿದೆ. ​​ಅಭಿಯಾನದ ಒಂದು ಭಾಗವಾಗಿ, ಆಭರಣ ವ್ಯಾಪಾರಿಗಳು ವಿಶೇಷವಾಗಿ ಶೋರೂಂಗಳಲ್ಲಿ ನವಯುಗದ ವಧುಗಳ ಬಯಕೆಗಳನ್ನು ಪೂರೈಸುವ ವಧುವಿನ ಆಭರಣಗಳ ವಿಶೇಷ ಸಂಗ್ರಹವನ್ನು ಪ್ರದರ್ಶಿಸುತ್ತಾರೆ. ಆಳವಾದ ಸಂಶೋಧನೆಯ ಜೊತೆಗೆ ಸ್ಥಳೀಯ ಸಮುದಾಯದ ಅಭಿರುಚಿ ಮತ್ತು ಆದ್ಯತೆಗಳನ್ನು ಗಮನಿಸಿ ಆಭರಣಗಳನ್ನು ಬಹಳ ಎಚ್ಚರಿಕೆಯಿಂದ ತಯಾರಿಸಲಾಗಿದೆ. ವಿವಾಹ ಗೀತೆಯ ಜೊತೆಗೆ, ಬ್ರೈಡ್ಸ್ ಆಫ್ ಇಂಡಿಯಾ 2021 ಅಭಿಯಾನವು 360 ಡಿಗ್ರಿ ಮಾರ್ಕೆಟಿಂಗ್ ಓವರ್‌ ಡ್ರೈವ್ ಅನ್ನು ಒಳಗೊಂಡಿರುತ್ತದೆ. ಇದರಲ್ಲಿ ಮುದ್ರಣ ಜಾಹೀರಾತುಗಳು, ಹೋರ್ಡಿಂಗ್‌ಗಳು, ರೀಲ್ಸ್‌ನಂತಹ ಜನಪ್ರಿಯ ಸಾಮಾಜಿಕ ಮಾಧ್ಯಮ ಫೀಡ್‌ಗಳು, ವಧುವಿನ ಲುಕ್-ಬುಕ್‌ಗಳು, ಕ್ಯಾಟಲಾಗ್‌ಗಳು, ಉತ್ಪನ್ನದ ಚಿತ್ರಗಳು, ವಿಡಿಯೋಗಳು ಮತ್ತು ಬ್ರಾಂಡ್ ವೆಬ್‌ಸೈಟ್‌ನ ಭಾಗವಾಗಿ ಮೀಸಲಾದ ಮೈಕ್ರೊಸೈಟ್‌ಗಳನ್ನೂ ಒಳಗೊಂಡಿದೆ. ​​ಅಭಿಯಾನದ ಆನ್-ಗ್ರೌಂಡ್ ಸಕ್ರಿಯಗೊಳಿಸುವಿಕೆಯು ಮಳಿಗೆಗಳಲ್ಲಿ ಉತ್ಪನ್ನಗಳ ಬಿಡುಗಡೆಗಳು, ವಧುವಿನ ಶೃಂಗಾರ ಮತ್ತು ಭವ್ಯ ಪ್ರವೇಶ ದ್ವಾರಗಳಂತಹ ವಿಶೇಷವಾಗಿ ವಿನ್ಯಾಸಗೊಳಿಸಲಾದ ದೃಶ್ಯ ವ್ಯಾಪಾರದ ಅಂಶಗಳನ್ನು ಒಳಗೊಂಡಿದೆ. ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನವನ್ನು ಆರಂಭಿಸುವ ಮೂಲಕ ಮದುವೆ ಆಭರಣಗಳ ಸಂಸ್ಥೆಯಾಗಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಪ್ರಸಿದ್ಧಿಯನ್ನು ವಿಸ್ತರಿಸಿಕೊಂಡು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಪ್ರತಿ ವರ್ಷವೂ ವಧುವಿನ ಆಭರಣ ಕ್ಷೇತ್ರಕ್ಕೆ ಆಭರಣಕಾರರ ಕೊಡುಗೆಗಳನ್ನು ಈ ಅಭಿಯಾನವು ಎತ್ತಿ ತೋರಿಸುತ್ತದೆ ಮತ್ತು ವಧುವಿನ ಆಭರಣ ವಿಭಾಗದಲ್ಲಿ ಅದರ ವಿನ್ಯಾಸ ನಾಯಕತ್ವವನ್ನು ಮುನ್ನೆಲೆಗೆ ತರುತ್ತದೆ. ಬ್ರೈಡ್ಸ್ ಆಫ್ ಇಂಡಿಯಾದ ಈ ಆವೃತ್ತಿಯನ್ನು ಬಲಪಡಿಸಲು, ಸಂಸ್ಥೆಯು ವಿವಾಹ ಪೂರ್ವ ಖರೀದಿ ಯೋಜನೆಯನ್ನು ಘೋಷಿಸಿದ್ದು, ಇದರಲ್ಲಿ ಗ್ರಾಹಕರು ಒಟ್ಟು ಖರೀದಿ ಮೊತ್ತದ 10%ರಷ್ಟು ಕಡಿಮೆ ಹಣವನ್ನು ಮುಂಗಡವಾಗಿ ಪಾವತಿಸುವ ಮೂಲಕ ಚಿನ್ನದ ದರ ಏರಿಕೆಯಿಂದ ರಕ್ಷಣೆ

#MakeWayForTheBridesOfIndia: ಮಲಬಾರ್ ಗೋಲ್ಡ್ & ಡೈಮಂಡ್ಸ್‌ನಿಂದ ಅನಾವರಣ..!
Linkup

ಮಲಬಾರ್ ಗೋಲ್ಡ್ & ಡೈಮಂಡ್ಸ್ ಸಂಸ್ಥೆಯು #MakeWayForTheBridesOfIndia ಅಭಿಯಾನದ ಅಡಿ, ಕಿಕ್ ಆಫ್ ಬ್ರೈಡ್ಸ್ ಆಫ್ ಇಂಡಿಯಾ 2021 ವಿವಾಹ ಗೀತೆಯನ್ನು ಅನಾವರಣಗೊಳಿಸುತ್ತಿದೆ.

ದಿ ಬ್ರೈಡ್ಸ್ ಆಫ್ ಇಂಡಿಯಾ 2021 ಅಭಿಯಾನವು ವಧುವಿನ ಭವ್ಯ ಪ್ರವೇಶದ ಉತ್ಸಾಹವನ್ನು ಬಿಂಬಿಸುತ್ತದೆ. ಈ ವಿವಾಹ ಗೀತೆಯ ವಿಡಿಯೋವನ್ನು ಬಾಲಿವುಡ್ ಸಿನೆಮಾ 'ದಿ ಬಿಗ್ ಬುಲ್' ನಿರ್ದೇಶಕ ಕೂಕಿ ಗುಲಾಟಿ ನಿರ್ದೇಶಿಸಿದ್ದಾರೆ.

8ನೇ ಆಗಸ್ಟ್, 2021ರಂದು ಜಗತ್ತಿನ ಅತಿ ದೊಡ್ಡ ಚಿನ್ನ ಮತ್ತು ವಜ್ರಾಭರಣಗಳ ರಿಟೇಲ್ ಚೈನ್ ಮಾರಾಟ ಸಂಸ್ಥೆಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ 9ನೇ ಆವೃತ್ತಿಯ ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿದೆ. ಈ ಬಾರಿ ವಿಶೇಷ ವಿವಾಹ ಗೀತೆಯಾಗಿ #MakeWayForTheBride ಅನ್ನು ಪ್ರಸ್ತುತಪಡಿಸಿದ್ದು, ಆಧುನಿಕ ದಿನಮಾನಗಳ ಭಾರತೀಯ ವಿವಾಹ ಸಮಾರಂಭಗಳ ಹೆಗ್ಗುರುತಾಗಿರುವ ವಧುವಿನ ಅದ್ಧೂರಿ ಪ್ರವೇಶವನ್ನು ಚಿತ್ರಿಸಿದೆ.

​​ಕಲಾತ್ಮಕವಾಗಿ ಚಿತ್ರೀಸಲಾದ 3 ನಿಮಿಷಗಳ ಈ ವಿವಾಹದ ಗೀತೆಯ ವಿಡಿಯೋವನ್ನು ಬಿಡುಗಡೆ ಮಾಡಿದ ಮೊದಲ 48 ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ 2 ಮಿಲಿಯನ್ ವೀಕ್ಷಕರು ವೀಕ್ಷಿಸಿದ್ದಾರೆ. ಮಲಬಾರ್ ಗೋಲ್ಡ್ & ಡೈಮಂಡ್ಸ್ ಸಂಸ್ಥೆಯ ಪ್ರಸಿದ್ಧ ಬ್ರ್ಯಾಂಡ್ ರಾಯಭಾರಿಗಳಾದ ಅನಿಲ್ ಕಪೂರ್ ಮತ್ತು ಕರೀನಾ ಕಪೂರ್ ಹಾಗೂ ದೇಶದ ವಿವಿಧ ಭಾಗಗಳ ವಧುಗಳನ್ನು ಒಳಗೊಂಡು ವಿಶಿಷ್ಟವಾಗಿ ಚಿತ್ರೀಕರಿಸಲಾಗಿದೆ.

​ಬ್ರೈಡ್ಸ್ ಆಫ್ ಇಂಡಿಯಾ 2021 ವಿವಾಹ ಗೀತೆಯ ಪರಿಕಲ್ಪನೆಯನ್ನು ಸೃಜನಶೀಲ ಸಂಸ್ಥೆ ಡೆಂಟ್ಸು ಇಂಡಿಯಾ ಮಾಡಿದೆ. ಸೆಲ್ಯುಲಾಯ್ಡ್ ಪ್ರಪಂಚದ ಅತ್ಯಂತ ಪ್ರತಿಭಾನ್ವಿತ ಮತ್ತು ಅತ್ಯುನ್ನತ ಪ್ರತಿಭಾವಂತ ವೃತ್ತಿಪರರಿಂದ ಅಭಿವೃದ್ಧಿಪಡಿಸಲಾಗಿದೆ. ಅಭಿಷೇಕ್ ಬಚ್ಚನ್ ಅಭಿನಯದ ದಿ ಬಿಗ್ ಬುಲ್ ಮುಂತಾದ ಸಿನೆಮಾಗಳ ನಿರ್ದೇಶಕ ಕೂಕಿ ಗುಲಾಟಿ ಅವರಿಂದ ನಿರ್ದೇಶಿಸಲ್ಪಟ್ಟಿದೆ. ಈ ಗೀತೆಯು ಲವ್ ಆಜ್ ಕಲ್ ಸಿನಿಮಾದ ಛಾಯಾಗ್ರಹಣ ನಿರ್ದೇಶಕರಾಗಿದ್ದ ಅಮಿತ್ ರಾಯ್, ಪೀಕು ಖ್ಯಾತಿಯ ಅನುಪಮ್ ರಾಯ್ ಸಂಗೀತ ಸಂಯೋಜನೆ ಮತ್ತು ವಿಕ್ಕಿ ಡೋನರ್ ಖ್ಯಾತಿಯ ಬರಹಗಾರ ಜೂಹಿ ಚತುರ್ವೇದಿ ಗೀತರಚನೆಯನ್ನೂ ಒಳಗೊಂಡು ಸಮೃದ್ಧವಾಗಿದೆ.

ಈ ವಿವಾಹ ಗೀತೆಯ ಕಿರು ಆವೃತ್ತಿಯನ್ನು ಜಾಹೀರಾತು ರೂಪದಲ್ಲಿ ಟಿವಿ ಚಾನೆಲ್‌ಗಳಲ್ಲಿ ಮತ್ತು ಒಟಿಟಿ ವೇದಿಕೆಗಳಲ್ಲಿ ಪ್ರಸಾರ ಮಾಡಲಾಗುವುದು. ವಿವಾಹ ಗೀತೆಯ ಪೂರ್ಣ ರೂಪವನ್ನು ಆಯ್ದ ಟಿವಿ ಚಾನೆಲ್‌ಗಳಲ್ಲಿ ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುವುದು. ಮೊದಲ ವಾರದಲ್ಲಿ ಡಿಜಿಟಲ್ ವೇದಿಕೆಗಳಲ್ಲಿ ಮಾತ್ರ ಈ ಅಭಿಯಾನವನ್ನು ಪ್ರಸಾರ ಮಾಡಲಾಗುತ್ತಿದ್ದು, ಮುಂದೆ ಟಿವಿ ಮತ್ತು ಮುದ್ರಣ ಮಾಧ್ಯಮದ ಆಯಕಟ್ಟಿನ ಸ್ಥಳಗಳನ್ನು ಆವರಿಸಿಕೊಳ್ಳಲಿದೆ.

ವಿವಾಹ ಗೀತೆಯ ಥೀಮ್ ಸಾಂಗ್‌ನ ವಿಡಿಯೋ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಪಂಜಾಬ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳ ವಧುಗಳು ಸಾಂಪ್ರದಾಯಿಕ ವಿನ್ಯಾಸಗಳನ್ನು ಬಿಂಬಿಸಲಾಗಿದ್ದು, ವಿವಾಹ ಮಂಟಪ ಪ್ರವೇಶವನ್ನು ಸಾಧ್ಯವಾದಷ್ಟೂ ಅದ್ದೂರಿಯಾಗಿ ಪ್ರದರ್ಶಿಸಲಾಗಿದೆ. ಈ ಮೂಲಕ, ಹೊಸ-ಕಾಲಮಾನದ ವಧುವಿನ ಅಭಿರುಚಿಗೆ ತಕ್ಕಂತೆ ಸಿದ್ಧರಾಗಲು ಸ್ಫೂರ್ತಿ ನೀಡುವಂತಿದೆ.

ಈ ಬಗ್ಗೆ ಮಾತನಾಡಿರುವ ಮಲಬಾರ್ ಸಮೂಹದ ಅಧ್ಯಕ್ಷ ಎಂ. ಪಿ. ಅಹಮ್ಮದ್, 'ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನವು ಹೊಸ ಯುಗದ ವಧುಗಳಿಗೆ ಮತ್ತು ಅವರ ವಿಸ್ಮಯಕಾರಿ ವ್ಯಕ್ತಿತ್ವಕ್ಕೆ ನಾವು ನೀಡುವ ಗೌರವವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ, ಬ್ರೈಡ್ಸ್ ಆಫ್ ಇಂಡಿಯಾ ದೇಶಾದ್ಯಂತ ಎಲ್ಲ ವಧುಗಳ ಆಭರಣ ಅಗತ್ಯಗಳನ್ನು ಪೂರೈಸುವಲ್ಲಿ ಹಾಗೂ ನಮ್ಮ ಬಹುಮುಖತೆಯನ್ನು ಪ್ರದರ್ಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ' ಎಂದಿದ್ದಾರೆ.

'ಬ್ರೈಡ್ಸ್ ಆಫ್ ಇಂಡಿಯಾ 2021ರ ಥೀಮ್, ವಧುವಿಗೆ ಈ ಅವಕಾಶ ನೀಡಲು ಎಲ್ಲರನ್ನೂ ಪ್ರೋತ್ಸಾಹಿಸುತ್ತದೆ. ಏಕೆಂದರೆ, ಇದು ಆಕೆಯ ಕ್ಷಣ, ಆಕೆಯ ದಿನ. ಅದನ್ನು ಸ್ಮರಣೀಯವಾಗಿಸಿಕೊಳ್ಳುವ ಸುಸಂದರ್ಭವಿದು..! ಅವಳು ಮಿಂಚಲು ಇಲ್ಲಿ ಬಂದಿದ್ದಾಳೆ ಹಾಗೂ ಇದು ಪ್ರಪಂಚಕ್ಕೆ ತಿಳಿಯುವಂತೆ ಮಾಡಬೇಕಿದೆ. ಬ್ರೈಡ್ಸ್ ಆಫ್ ಇಂಡಿಯಾ 2021 ಅಭಿಯಾನದ ಅನಾವರಣದ ಜೊತೆಗೆೆ, ತನಗಾಗಿ ಮಹತ್ವದ ದಿನವೊಂದನ್ನು ರೂಪಿಸಿಕೊಳ್ಳುವ ವಧುವಿನ ಆಯ್ಕೆಯನ್ನು ನಾವು ಸಂಭ್ರಮಿಸುತ್ತೇವೆ. ಹೊಸ ಕಾಲಮಾನದ ವಧುಗಳ ವೈವಿಧ್ಯಮಯ ಸಂವೇದನೆಗಳನ್ನು ಪೂರೈಸುವ ವಿನ್ಯಾಸಗಳೊಂದಿಗೆ, ಪ್ರತಿ ವಧು ತನ್ನ ಅನನ್ಯ ಪ್ರವೇಶಕ್ಕೆ ಪೂರಕವಾದ ಏನಾದರೂ ವಿಶೇಷವನ್ನು ಇದು ಹೊಂದಿರುತ್ತದೆ' ಎಂದು ಅಹಮ್ಮದ್ ಅವರು ವಿವರಿಸುತ್ತಾರೆ.

ಈ ಅಭಿಯಾನವು ದೇಶದ ವಿವಿಧ ಭಾಗಗಳಿಂದ 13 ವಧುಗಳನ್ನು ಎರಡು ವಿಶಿಷ್ಟ ನೋಟಗಳಲ್ಲಿ ಒಳಗೊಂಡಿದೆ. ಈ 26 ಅನನ್ಯ ನೋಟಗಳಲ್ಲಿ ಪೋಲ್ಕಿ ಆಭರಣಗಳಿಂದ ಸಿಂಗರಿಸಿಗೊಂಡ ವಧು, ವಜ್ರಾಭರಣಗಳಲ್ಲಿ ಮಿನುಗುವ ವಧು, ಸಮಕಾಲೀನ ರಿಸೆಪ್ಶನ್‌ಗಾಗಿ ಕರಕುಶಲ ಆಭರಣಗಳನ್ನು ತೊಟ್ಟ ವಧು, ಕ್ಲಾಸಿಕ್ ಚಿನ್ನಾಭರಣಗಳನ್ನು ಧರಿಸಿದ ವಧು, ಕೇರಳ, ಕರ್ನಾಟಕ, ತೆಲುಗು, ತಮಿಳು, ಉತ್ತರ ಪ್ರದೇಶ ಮತ್ತು ಬಿಹಾರ, ಪಂಜಾಬಿ, ಬಂಗಾಳಿ, ಒಡಿಯಾ, ಮರಾಠಿ ಮತ್ತು ಗುಜರಾತಿ ವಧುಗಳನ್ನು ಕಣ್ತುಂಬಿಕೊಳ್ಳಬಹುದು.

​​ಈ ಎಲ್ಲ ನೋಟಗಳನ್ನು ಪ್ರಖ್ಯಾತ ಛಾಯಾಗ್ರಾಹಕ ಅವಿನಾಶ್ ಗೋವರೀಕರ್ ಅವರು ವಧುವಿನ ಆಭರಣಗಳ ಸೊಗಸಾದ ಶ್ರೇಣಿಯಲ್ಲಿ ಸೆರೆಹಿಡಿದಿದ್ದಾರೆ. ಈ ಅಭಿಯಾನವು ಮಲಬಾರ್ ಗೋಲ್ಡ್ & ಡೈಮಂಡ್ಸ್‌ನ ಪ್ರಮುಖ ಆಭರಣ ಉಪ ಬ್ರ್ಯಾಂಡ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಮೈನ್, ಎರಾ, ಪ್ರೆಸಿಯಾ, ಡಿವೈನ್, ಎಥ್ನಿಕ್ಸ್ ಮತ್ತು ಪೋಲ್ಕಿ ಸಂಗ್ರಹವಿದೆ.

​​ಅಭಿಯಾನದ ಒಂದು ಭಾಗವಾಗಿ, ಆಭರಣ ವ್ಯಾಪಾರಿಗಳು ವಿಶೇಷವಾಗಿ ಶೋರೂಂಗಳಲ್ಲಿ ನವಯುಗದ ವಧುಗಳ ಬಯಕೆಗಳನ್ನು ಪೂರೈಸುವ ವಧುವಿನ ಆಭರಣಗಳ ವಿಶೇಷ ಸಂಗ್ರಹವನ್ನು ಪ್ರದರ್ಶಿಸುತ್ತಾರೆ. ಆಳವಾದ ಸಂಶೋಧನೆಯ ಜೊತೆಗೆ ಸ್ಥಳೀಯ ಸಮುದಾಯದ ಅಭಿರುಚಿ ಮತ್ತು ಆದ್ಯತೆಗಳನ್ನು ಗಮನಿಸಿ ಆಭರಣಗಳನ್ನು ಬಹಳ ಎಚ್ಚರಿಕೆಯಿಂದ ತಯಾರಿಸಲಾಗಿದೆ.

ವಿವಾಹ ಗೀತೆಯ ಜೊತೆಗೆ, ಬ್ರೈಡ್ಸ್ ಆಫ್ ಇಂಡಿಯಾ 2021 ಅಭಿಯಾನವು 360 ಡಿಗ್ರಿ ಮಾರ್ಕೆಟಿಂಗ್ ಓವರ್‌ ಡ್ರೈವ್ ಅನ್ನು ಒಳಗೊಂಡಿರುತ್ತದೆ. ಇದರಲ್ಲಿ ಮುದ್ರಣ ಜಾಹೀರಾತುಗಳು, ಹೋರ್ಡಿಂಗ್‌ಗಳು, ರೀಲ್ಸ್‌ನಂತಹ ಜನಪ್ರಿಯ ಸಾಮಾಜಿಕ ಮಾಧ್ಯಮ ಫೀಡ್‌ಗಳು, ವಧುವಿನ ಲುಕ್-ಬುಕ್‌ಗಳು, ಕ್ಯಾಟಲಾಗ್‌ಗಳು, ಉತ್ಪನ್ನದ ಚಿತ್ರಗಳು, ವಿಡಿಯೋಗಳು ಮತ್ತು ಬ್ರಾಂಡ್ ವೆಬ್‌ಸೈಟ್‌ನ ಭಾಗವಾಗಿ ಮೀಸಲಾದ ಮೈಕ್ರೊಸೈಟ್‌ಗಳನ್ನೂ ಒಳಗೊಂಡಿದೆ.

​​ಅಭಿಯಾನದ ಆನ್-ಗ್ರೌಂಡ್ ಸಕ್ರಿಯಗೊಳಿಸುವಿಕೆಯು ಮಳಿಗೆಗಳಲ್ಲಿ ಉತ್ಪನ್ನಗಳ ಬಿಡುಗಡೆಗಳು, ವಧುವಿನ ಶೃಂಗಾರ ಮತ್ತು ಭವ್ಯ ಪ್ರವೇಶ ದ್ವಾರಗಳಂತಹ ವಿಶೇಷವಾಗಿ ವಿನ್ಯಾಸಗೊಳಿಸಲಾದ ದೃಶ್ಯ ವ್ಯಾಪಾರದ ಅಂಶಗಳನ್ನು ಒಳಗೊಂಡಿದೆ.

ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನವನ್ನು ಆರಂಭಿಸುವ ಮೂಲಕ ಮದುವೆ ಆಭರಣಗಳ ಸಂಸ್ಥೆಯಾಗಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಪ್ರಸಿದ್ಧಿಯನ್ನು ವಿಸ್ತರಿಸಿಕೊಂಡು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಪ್ರತಿ ವರ್ಷವೂ ವಧುವಿನ ಆಭರಣ ಕ್ಷೇತ್ರಕ್ಕೆ ಆಭರಣಕಾರರ ಕೊಡುಗೆಗಳನ್ನು ಈ ಅಭಿಯಾನವು ಎತ್ತಿ ತೋರಿಸುತ್ತದೆ ಮತ್ತು ವಧುವಿನ ಆಭರಣ ವಿಭಾಗದಲ್ಲಿ ಅದರ ವಿನ್ಯಾಸ ನಾಯಕತ್ವವನ್ನು ಮುನ್ನೆಲೆಗೆ ತರುತ್ತದೆ. ಬ್ರೈಡ್ಸ್ ಆಫ್ ಇಂಡಿಯಾದ ಈ ಆವೃತ್ತಿಯನ್ನು ಬಲಪಡಿಸಲು, ಸಂಸ್ಥೆಯು ವಿವಾಹ ಪೂರ್ವ ಖರೀದಿ ಯೋಜನೆಯನ್ನು ಘೋಷಿಸಿದ್ದು, ಇದರಲ್ಲಿ ಗ್ರಾಹಕರು ಒಟ್ಟು ಖರೀದಿ ಮೊತ್ತದ 10%ರಷ್ಟು ಕಡಿಮೆ ಹಣವನ್ನು ಮುಂಗಡವಾಗಿ ಪಾವತಿಸುವ ಮೂಲಕ ಚಿನ್ನದ ದರ ಏರಿಕೆಯಿಂದ ರಕ್ಷಣೆ ಪಡೆಯಬಹುದು.

ಮಲಬಾರ್ ಗೋಲ್ಡ್ & ಡೈಮಂಡ್ಸ್ ವ್ಯಾಪಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಎಂದೆಂದಿಗೂ ಬದ್ಧವಾಗಿದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಸಮೂಹವು 'ಒಂದು ಭಾರತ, ಒಂದು ಚಿನ್ನದ ಬೆಲೆ' ಯೋಜನೆಯನ್ನು ಪ್ರಕಟಿಸಿದ್ದು, ದೇಶಾದ್ಯಂತ ಏಕರೂಪದ ಚಿನ್ನದ ದರದಲ್ಲಿ ಆಭರಣಗಳನ್ನು ನೀಡುತ್ತಿದೆ.

ಅಲ್ಲದೆ, ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಗ್ರಾಹಕರಿಗೆ 10 ಭರವಸೆಗಳನ್ನು ನೀಡುತ್ತದೆ. ಈ ಬದ್ಧತೆಗಳಲ್ಲಿ ನಿಖರವಾದ ಉತ್ಪಾದನಾ ವೆಚ್ಚ, ಹರಳಿನ ತೂಕ, ನಿವ್ವಳ ತೂಕ ಮತ್ತು ಆಭರಣಗಳ ಹರಳಿನ ಶುಲ್ಕ, ಆಭರಣಗಳ ಜೀವಿತಾವಧಿಯ ನಿರ್ವಹಣೆ, ಹಳೆಯ ಚಿನ್ನದ ಆಭರಣಗಳ ಮರು ಮಾರಾಟ ಸಂದರ್ಭದಲ್ಲಿ ಚಿನ್ನಕ್ಕೆ 100 ಪ್ರತಿಶತ ಮೌಲ್ಯ ಮತ್ತು ವಿನಿಮಯದಲ್ಲಿ ಶೂನ್ಯ ಕಡಿತವನ್ನು ಸೂಚಿಸುವ ಪಾರದರ್ಶಕ ಬೆಲೆಯೂ ಸೇರಿದೆ.

​​ಚಿನ್ನದ ಶುದ್ಧತೆಯನ್ನು ಪ್ರಮಾಣೀಕರಿಸುವ ಶೇ.100 ಬಿಐಎಸ್ ಹಾಲ್‌ ಮಾರ್ಕಿಂಗ್, ಐಜಿಐ ಮತ್ತು ಜಿಐಎ ಪ್ರಮಾಣೀಕೃತ ವಜ್ರಗಳು ಜಾಗತಿಕ ಮಟ್ಟದಲ್ಲಿ 28 ಆಂತರಿಕ ಗುಣಮಟ್ಟದ ಪರಿಶೀಲನೆ, ಮರುಪಾವತಿಯ ಖಾತರಿ ಮತ್ತು ಜವಾಬ್ದಾರಿಯುತ ಮೂಲಗಳು ಮತ್ತು ನ್ಯಾಯಯುತ ಕಾರ್ಮಿಕ ಪದ್ಧತಿಗಳನ್ನು ಖಾತ್ರಿಪಡಿಸುತ್ತದೆ.