ಈ ವರ್ಷ ಷೇರುಪೇಟೆಯಲ್ಲಿ ಐಪಿಒಗಳದ್ದೇ ಅಬ್ಬರ, ಒಂದೇ ವರ್ಷದಲ್ಲಿ 1.19 ಲಕ್ಷ ಕೋಟಿ ರೂ. ಸಂಗ್ರಹ!

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಐಪಿಒ ಮೂಲಕ ಸಂಗ್ರಹಿಸಿದ ಹಣ 4.5 ಪಟ್ಟು ಹೆಚ್ಚಾಗಿದ್ದು, 2017ನೇ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಹೂಡಿಕೆ ಸಂಗ್ರಹ ಸರಿ ಸುಮಾರು ದುಪ್ಪಟ್ಟಾಗಿದೆ. 2020ರಲ್ಲಿ 15 ಕಂಪನಿಗಳು 26,613 ಕೋಟಿ ರೂ. ಹಣ ಸಂಗ್ರಹಿಸಿದರೆ, 2017ರಲ್ಲಿ 36 ಕಂಪನಿಗಳು 68,827 ಕೋಟಿ ರೂ. ಹಣ ಹೊಂದಿಸಿದ್ದವು.

ಈ ವರ್ಷ ಷೇರುಪೇಟೆಯಲ್ಲಿ ಐಪಿಒಗಳದ್ದೇ ಅಬ್ಬರ, ಒಂದೇ ವರ್ಷದಲ್ಲಿ 1.19 ಲಕ್ಷ ಕೋಟಿ ರೂ. ಸಂಗ್ರಹ!
Linkup
ಮುಂಬಯಿ: ಆರಂಭಿಕ ಷೇರು ಕೊಡುಗೆ () ಮೂಲಕ ಕಂಪನಿಗಳು ಪಡೆದುಕೊಂಡ ಹೂಡಿಕೆ ಈ ವರ್ಷ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ದಾಖಲೆಗಳ ಪ್ರಕಾರ 63 ಕಂಪನಿಗಳು ಈ ವರ್ಷ ಷೇರುಪೇಟೆಗೆ ಪ್ರವೇಶ ಪಡೆದಿದ್ದು, ಸಾರ್ವಜನಿಕರಿಂದ 1.19 ಲಕ್ಷ ಕೋಟಿ ರೂ. ಸಂಗ್ರಹಿಸಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಐಪಿಒ ಮೂಲಕ ಸಂಗ್ರಹಿಸಿದ ಹಣ 4.5 ಪಟ್ಟು ಹೆಚ್ಚಾಗಿದೆ. ಇನ್ನು 2017ನೇ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಹೂಡಿಕೆ ಸಂಗ್ರಹ ಸರಿ ಸುಮಾರು ದುಪ್ಪಟ್ಟಾಗಿದೆ. 2020ರಲ್ಲಿ 15 ಕಂಪನಿಗಳು 26,613 ಕೋಟಿ ರೂ. ಹಣ ಸಂಗ್ರಹಿಸಿದರೆ, ಇಲ್ಲಿಯವರೆಗೆ ದಾಖಲೆ ಹೊಂದಿದ್ದ 2017ರಲ್ಲಿ 36 ಕಂಪನಿಗಳು 68,827 ಕೋಟಿ ರೂ. ಹಣ ಹೊಂದಿಸಿದ್ದವು. ಇತ್ತೀಚಿನ ದಿನಗಳಲ್ಲಿ ಕೆಲವು ಕಂಪನಿಗಳು ಕಳಪೆ ಪ್ರದರ್ಶನ ನೀಡಿರುವ ಹೊರತಾಗಿಯೂ ಪ್ರಾಥಮಿಕ ಮಾರುಕಟ್ಟೆಯಲ್ಲಿ ಈ ಟ್ರೆಂಡ್‌ ಮುಂದುವರಿಯಲಿದೆ ಎಂದು ಮಾರುಕಟ್ಟೆಯಲ್ಲಿ ಭಾಗವಹಿಸುವವರು ನಿರೀಕ್ಷಿಸುತ್ತಿದ್ದಾರೆ. ಪ್ರಸ್ತುತ, 35 ಕಂಪನಿಗಳು ಸುಮಾರು 50,000 ಕೋಟಿ ರೂ. ಮೌಲ್ಯದ ಐಪಿಒಗಳಿಗೆ ಸೆಬಿಯಿಂದ ಒಪ್ಪಿಗೆ ಪಡೆದಿವೆ. ಇನ್ನೂ 33 ಕಂಪನಿಗಳು ಸುಮಾರು 60,000 ಕೋಟಿ ರೂ. ಸಂಗ್ರಹಿಸಲು ತಮ್ಮ ದಾಖಲೆಗಳನ್ನು ಸೆಬಿಗೆ ಸಲ್ಲಿಸಿದ್ದು, ಅನುಮೋದನೆಗೆ ಕಾಯುತ್ತಿವೆ. "2021ನೇ ವರ್ಷವನ್ನು ಟೆಕ್ ವಲಯದ ಕಂಪನಿಗಳ ಪಾಲಿಗೆ ಷೇರುಪೇಟೆಯ ಗೇಟ್‌ಗಳನ್ನು ತೆರೆದ ವರ್ಷವಾಗಿ ನೆನಪಿಸಿಕೊಳ್ಳಲಾಗುತ್ತದೆ,” ಎಂದು ಇಂಡಸ್‌ಲಾ ಪಾಲುದಾರ ಮನನ್ ಲಾಹೋಟಿ ಹೇಳಿದ್ದಾರೆ. ಹಾಗೆ ನೋಡಿದರೆ "ಟೆಕ್ ವಲಯವನ್ನೂ ಮೀರಿ, ಈ ವರ್ಷ ಇತರ ವಲಯಗಳ ಹೆಚ್ಚಿನ ಸಂಖ್ಯೆಯ ದೊಡ್ಡ ಗಾತ್ರದ ಐಪಿಒಗಳಿಗೂ ಸಾಕ್ಷಿಯಾಗಿದೆ.” ಹೊಸ ತಲೆಮಾರಿನ ಹಲವಾರು ಕಂಪನಿಗಳು ಈ ವರ್ಷ ಷೇರುಪೇಟೆ ಪ್ರವೇಶಿಸಿದವು. ಪೇಟಿಎಂನ ಮಾತೃಸಂಸ್ಥೆ ಒನ್‌ 97 ಕಮ್ಯೂನಿಕೇಷ್‌ ಬಂಡವಾಳ ಮಾರುಕಟ್ಟೆಯಿಂದ ಬರೋಬ್ಬರಿ 18,300 ಕೋಟಿ ರೂ. ಸಂಗ್ರಹಿಸಿದ್ದು ಈ ವರ್ಷದ ಅತೀ ದೊಡ್ಡ ಐಪಿಒ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಇದರ ಜತೆಗೆ ಜೊಮ್ಯಾಟೋ, ನೈಕಾ ಮೊದಲಾದ ಕಂಪನಿಗಳೂ ಷೇರುಪೇಟೆ ಪ್ರವೇಶಿಸಿವೆ. ಐಪಿಒ ಬೇಡಿಕೆ ಹೀಗೆಯೇ ಮುಂದುವರಿಯಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಈ ವರ್ಷ ಸಾಮಾನ್ಯ ಮಾರುಕಟ್ಟೆಯ ಪ್ರವೃತ್ತಿಗಿಂತ ಭಿನ್ನವಾಗಿದೆ ಎಂದಷ್ಟೇ ನೋಡುವ ಬದಲು, 2021ನ್ನು ಭಾರತೀಯ ಬಂಡವಾಳ ಮಾರುಕಟ್ಟೆಗಳಲ್ಲಿ ಮುಂಬರುವ ದಶಕದ ಒಂದು ನಿರ್ಣಾಯಕ ಕ್ಷಣವಾಗಿ ನೋಡಬೇಕು ಎನ್ನುತ್ತಾರೆ ಸರಾಫ್‌ & ಪಾರ್ಟ್‌ನರ್ಸ್‌ ಪಾಲುದಾರ ಮುರ್ತಾಜಾ ಝೋಮ್‌ಕಾವಾಲಾ. ಆದಾಗ್ಯೂ, ದ್ವಿತೀಯ ಮಾರುಕಟ್ಟೆಯಲ್ಲಿ ಸಂಭವಿಸುವ ಯಾವುದೇ ಪ್ರತಿಕೂಲ ಘಟನೆಯೂ ಐಪಿಒವನ್ನು ಹಾಳು ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಕಳೆದ ಕೆಲವು ವಾರಗಳಲ್ಲಿ, ದುಬಾರಿ ಮೌಲ್ಯಮಾಪನಗಳು ಮತ್ತು ಕೋವಿಡ್ -19 ವೈರಸ್‌ನ ಹೊಸ ರೂಪಾಂತರಿಯ ಹೊರಹೊಮ್ಮುವಿಕೆಯ ಕಾರಣದಿಂದಾಗಿ ಭಾರತೀಯ ಮಾರುಕಟ್ಟೆಗಳಲ್ಲಿ ಪ್ರತಿಕೂಲ ಪರಿಣಾಮಗಳು ಕಾಣಿಸಿಕೊಂಡಿದ್ದವು. ಒಟ್ಟಾರೆ ನಿಧಿಸಂಗ್ರಹಣೆಗೆ ಸಂಬಂಧಿಸಿದಂತೆಯೂ 2021 ಮಾರುಕಟ್ಟೆಗಳಿಗೆ ದಾಖಲೆಯ ವರ್ಷವಾಗಿದೆ. ಇಂಡಿಯಾ ಇಂಕ್ 2020 ರಲ್ಲಿ ಸಾರ್ವಜನಿಕ ಮಾರುಕಟ್ಟೆಗಳ ಮೂಲಕ 2.17 ಲಕ್ಷ ಕೋಟಿ ರೂ. ಬಂಡವಾಳವನ್ನು ಸಂಗ್ರಹಿಸಿದೆ. 2020ರಲ್ಲಿ 1.85 ಲಕ್ಷ ಕೋಟಿ ರೂ. ಸಂಗ್ರಹಿಸಿದ್ದೇ ಈವರೆಗಿನ ದಾಖಲೆಯಾಗಿತ್ತು. ಒಟ್ಟಾರೆ ನಿಧಿಸಂಗ್ರಹಣೆಯು ಐಪಿಒಗಳು, ಮುಂದುವರಿದ ಕೊಡುಗೆಗಳು, ಅರ್ಹ ಸಾಂಸ್ಥಿಕ ನಿಯೋಜನೆಗಳು ಮತ್ತು ಸರ್ಕಾರಿ ಮಾಲೀಕತ್ವದ ಕಂಪನಿಗಳು ಮತ್ತು ಖಾಸಗಿ ಕಂಪನಿಗಳಿಂದ ಬಾಂಡ್ ವಿತರಣೆಗಳಂತಹ ಸಾಲ ಮತ್ತು ಇಕ್ವಿಟಿ ಎರಡನ್ನೂ ಒಳಗೊಂಡಿವೆ. ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ '' ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.