'5G'ಗೆ ಏರ್‌ಟೆಲ್‌ ಜತೆ ಕೈಜೋಡಿಸಿದ ಟಾಟಾ ಗ್ರೂಪ್‌, ಜಿಯೋಗೆ ಪ್ರಬಲ ಸ್ಪರ್ಧೆ

​​5ಜಿ ನೆಟ್‌ವರ್ಕ್‌ ಅಳವಡಿಸಲು ಸಹಕರಿಸುವ ಒ-ಆರ್‌ಎಎನ್‌ ವ್ಯವಸ್ಥೆಯನ್ನು ಟಾಟಾ ಗ್ರೂಪ್‌ ಏರ್‌ಟೆಲ್‌ಗೆ ಒದಗಿಸಲಿದೆ. ಟಾಟಾ ಒಡೆತನದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ ತನ್ನ ಗ್ಲೋಬಲ್‌ ಸಿಸ್ಟಮ್‌ ಇಂಟಿಗ್ರೇಶನ್‌ ಪರಿಣತಿಯನ್ನು ಒದಗಿಸಲಿದೆ.

'5G'ಗೆ ಏರ್‌ಟೆಲ್‌ ಜತೆ ಕೈಜೋಡಿಸಿದ ಟಾಟಾ ಗ್ರೂಪ್‌, ಜಿಯೋಗೆ ಪ್ರಬಲ ಸ್ಪರ್ಧೆ
Linkup
ಹೊಸದಿಲ್ಲಿ: ಭಾರತದಲ್ಲಿ 5ಜಿ ಮೊಬೈಲ್‌ ನೆಟ್ವರ್ಕ್‌ಗೆ ಜಿಯೋ ಮತ್ತು ನಡುವೆ ಭಾರಿ ಪೈಪೋಟಿ ಏರ್ಪಟ್ಟಿದ್ದು, ಇದೀಗ ಏರ್‌ಟೆಲ್‌ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಭಾರತದಲ್ಲಿ 5ಜಿ ನೆಟ್‌ವರ್ಕ್ ಜಾರಿಗೊಳಿಸುವ ಸಂಬಂಧ ಜತೆ ಭಾರ್ತಿ ಏರ್‌ಟೆಲ್‌ ಒಪ್ಪಂದ ಮಾಡಿಕೊಂಡಿದೆ. ಇದು ಏರ್‌ಟೆಲ್‌ ಪಾಲಿಗೆ ನಿರ್ಣಾಯಕವಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. 5ಜಿ ನೆಟ್‌ವರ್ಕ್‌ ಅಳವಡಿಸಲು ಸಹಕರಿಸುವ ಒ-ಆರ್‌ಎಎನ್‌ ( ಓಪನ್‌-ರೇಡಿಯೊ ಆಕ್ಸೆಸ್‌ ನೆಟ್‌ವರ್ಕ್) ವ್ಯವಸ್ಥೆಯನ್ನು ಟಾಟಾ ಗ್ರೂಪ್‌ ಒದಗಿಸಲಿದೆ. ಟಾಟಾ ಒಡೆತನದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ () ತನ್ನ ಗ್ಲೋಬಲ್‌ ಸಿಸ್ಟಮ್‌ ಇಂಟಿಗ್ರೇಶನ್‌ ಪರಿಣತಿಯನ್ನು ಒದಗಿಸಲಿದೆ. 2017ರಲ್ಲಿ ಟಾಟಾ ಗ್ರೂಪ್‌ನ ಒಡೆತನದಲ್ಲಿದ್ದ ಟಾಟಾ ಡೊಕೊಮೊ ಏರ್‌ಟೆಲ್‌ನಲ್ಲಿ ವಿಲೀನವಾಗಿತ್ತು. ಇದೀಗ 5ಜಿ ಜಾರಿಗೆ ಏರ್‌ಟೆಲ್‌ಗೆ ಟಾಟಾ ಗ್ರೂಪ್‌ ಸಹಕಾರ ನೀಡಲಿದೆ. 2022ರ ಜನವರಿಯಿಂದ 5ಜಿ ಜಾರಿಗೆ ಏರ್‌ಟೆಲ್‌ ಸಿದ್ಧತೆ ನಡೆಸುತ್ತಿದೆ. ದೂರಸಂಪರ್ಕ ಇಲಾಖೆ ಮಂಜೂರು ಮಾಡಿರುವ ಸ್ಪೆಕ್ಟ್ರಮ್‌ ಬಳಸಿಕೊಂಡು ಪ್ರಮುಖ ನಗರಗಳಲ್ಲಿ ಪ್ರಾಯೋಗಿಕವಾಗಿ 5ಜಿ ಸೇವೆಯನ್ನು ಕಂಪನಿ ಆರಂಭಿಸಿದೆ.