ಆಕ್ಸಿಜನ್‌ ಟ್ಯಾಂಕರ್‌ಗಳಿಗೆ ಟೋಲ್‌ ಶುಲ್ಕ ವಿನಾಯಿತಿ ಘೋಷಿಸಿದ ಹೆದ್ದಾರಿ ಪ್ರಧಿಕಾರ!

ಆಕ್ಸಿಜನ್‌ಗೆ ಬೃಹತ್‌ ಬೇಡಿಕೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಆಕ್ಸಿಜನ್ ಸಾಗಣೆ ಮಾಡುವ ವಾಹನಗಳಿಗೆ ಟೋಲ್‌ ಶಲ್ಕಕ್ಕೆ ವಿನಾಯಿತಿ ನೀಡಲಾಗಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕೃತ ಘೋಷಣೆ ಮಾಡಿದೆ.

ಆಕ್ಸಿಜನ್‌ ಟ್ಯಾಂಕರ್‌ಗಳಿಗೆ ಟೋಲ್‌ ಶುಲ್ಕ ವಿನಾಯಿತಿ ಘೋಷಿಸಿದ ಹೆದ್ದಾರಿ ಪ್ರಧಿಕಾರ!
Linkup
ಹೊಸದಿಲ್ಲಿ: ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಕೈಮೀರಿದ್ದು, ಚಿಕಿತ್ಸೆ ಒದಗಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಬಹುತೇಕ ಸೋಂಕಿತರಿಗೆ ಉಸಿರಾಟದ ತೊಂದೆರೆ ಕಾಣಿಸಿಕೊಳ್ಳುತ್ತಿದ್ದು, ಆಕ್ಸಿಜನ್‌ಗೆ ಬೃಹತ್‌ ಬೇಡಿಕೆ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಆಕ್ಸಿಜನ್ ಸಾಗಣೆ ಮಾಡುವ ವಾಹನಗಳಿಗೆ ಶಲ್ಕಕ್ಕೆ ವಿನಾಯಿತಿ ನೀಡಿದೆ. ಈ ಕುರಿತು ಭಾರತೀಯ ಅಧಿಕೃತ ಘೋಷಣೆ ಮಾಡಿದೆ. ದೇಶಾದ್ಯಂತ ಅನ್ವಯವಾಗುವಂತೆ ಆಕ್ಸಿಜನ್ ಸಾಗಣೆ ಮಾಡುವ ಟ್ಯಾಂಕರ್‌ಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪಾವತಿಸದೇ, ಉಚಿತವಾಗಿ ಸಂಚರಿಸಬಹುದು ಎಂದು ಎನ್‌ಎಚ್‌ಎಐ ಅಧಿಕೃತವಾಗಿ ಟ್ವೀಟ್‌ ಮಾಡಿದೆ. ಮುಂದಿನ ಎರಡು ತಿಂಗಳವರೆಗೆ ಅಂದರೆ, ಜೂನ್‌ ಅಂತ್ಯದ ವರೆಗೆ ಸರಬರಾಜು ವಾಹನಗಳಿಗೆ ಟೋಲ್‌ ಶುಲ್ಕ ವಿನಾಯಿತಿ ನೀಡಲಾಗಿದೆ. ಜುಲೈ ವೇಳೆ ಪ್ರತಿ ಜಿಲ್ಲೆಯಲ್ಲೂ ಹೊಸದಾಗಿ ಸ್ಥಾಪಿಸುತ್ತಿರುವ ಆಕ್ಸಿಜನ್‌ ಉತ್ಪಾದನಾ ಘಟಕಗಳು ಕಾರ್ಯಾರಂಭ ಮಾಡಲಿದ್ದು, ಅಷ್ಟಾಗಿ ಆಕ್ಸಿಜನ್‌ ಕೊರತೆ ಸಂಭವಿಸದು. ಹೀಗಾಗಿಯೇ 2 ತಿಂಗಳ ಅವಧಿಗೆ ಟೋಲ್‌ ವಿನಾಯಿತಿ ನೀಡಲಾಗಿದೆ. ಕೇಂದ್ರ ಸರಕಾರ ಲೆಕ್ಕಾಚಾರದ ಪ್ರಕಾರ ದೇಶದಲ್ಲಿ ಮೇ ಅಂತ್ಯದ ವೇಳೆಗೆ ಆಕ್ಸಿಜನ್‌ ಸಮಸ್ಯೆಗೆ ಪರಿಹಾರ ದೊರಕಲಿದೆ. ಭಾರತದಲ್ಲಿ ಸತತ ಐದನೇ ದಿನ ನಾಲ್ಕು ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಈವರೆಗಿನ ಅತ್ಯಧಿಕ 4.14 ಲಕ್ಷ ಪ್ರಕರಣಗಳನ್ನು ಮುಟ್ಟಿದ ನಂತರ ಕಳೆದ ಎರಡು ದಿನಗಳಲ್ಲಿ ಅದಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಸೋಂಕಿತರು ವರದಿಯಾಗಿರುವುದೊಂದೇ ಸಮಾಧಾನಕರ ಸಂಗತಿ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 4,03,738 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಒಂದೇ ದಿನದಲ್ಲಿ 4,092 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಹಾಗೆಯೇ 3,86,444 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಇದುವರೆಗೂ 2,22,96,414 ಮಂದಿ ಕೊರೊನಾ ವೈರಸ್‌ಗೆ ತುತ್ತಾಗಿರುವುದು ವರದಿಯಾಗಿದೆ. ಅವರಲ್ಲಿ 1,83,17,404 ಮಂದಿ ಈವರೆಗೆ ಬಿಡುಗಡೆಯಾಗಿದ್ದಾರೆ. ಹಾಗೆಯೇ ಸೋಂಕಿತರಲ್ಲಿ ಈವರೆಗೂ ಮೃತಪಟ್ಟವರ ಒಟ್ಟು ಸಂಖ್ಯೆ 2,42,362ಕ್ಕೆ ಏರಿಕೆಯಾಗಿದೆ. 37,36,648 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 16,94,39,663 ಡೋಸ್ ಲಸಿಕೆಗಳನ್ನು ನೀಡಲಾಗಿದೆ.