ಅಯೋಧ್ಯಾ ರಾಮಜನ್ಮಭೂಮಿಯ ಅಡಿಪಾಯಕ್ಕೆ ತೆಗೆದ ಪವಿತ್ರ ಮಣ್ಣು ಭಕ್ತರಿಗೆ ಲಭ್ಯ..!

'ಶ್ರೀರಾಮಚಂದ್ರನು ಜನಿಸಿದ ಸ್ಥಳದ ಈ ಮಣ್ಣು ಅತ್ಯಂತ ಪವಿತ್ರವಾಗಿದ್ದು, ಭಕ್ತರು ತಮ್ಮ ಮನೆಯಲ್ಲಿಇಟ್ಟುಕೊಂಡು ಪೂಜಿಸಬಹುದಾಗಿದೆ' - ರಾಮಜನ್ಮ ಭೂಮಿ ಟ್ರಸ್ಟ್ ಆಫೀಸ್‌ ಇನ್‌ಚಾರ್ಚ್ ಶ್ರೀಪ್ರಕಾಶ್‌ ಗುಪ್ತಾ ಹೇಳಿಕೆ‌

ಅಯೋಧ್ಯಾ ರಾಮಜನ್ಮಭೂಮಿಯ ಅಡಿಪಾಯಕ್ಕೆ ತೆಗೆದ ಪವಿತ್ರ ಮಣ್ಣು ಭಕ್ತರಿಗೆ ಲಭ್ಯ..!
Linkup
ಭಕ್ತರಿಗೆ ಸಿಗಲಿದೆ ರಾಮಜನ್ಮಭೂಮಿಯ ರಾಮಜನ್ಮ ಭೂಮಿ ಟ್ರಸ್ಟ್‌ನಿಂದ ಉಚಿತವಾಗಿ ಪವಿತ್ರ ಮಣ್ಣು ವಿತರಣೆ ಲಖನೌ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿರುವ ತಾತ್ಕಾಲಿಕ ರಾಮಲಲ್ಲಾನ ದೇಗುಲಕ್ಕೆ ಪೂಜೆ ಸಲ್ಲಿಸಲು ಬರುವ ಭಕ್ತರಿಗೆ 'ರಾಮ್‌ ರಜಕರಣ್‌' (ನಿರ್ಮಾಣ ಹಂತದ ರಾಮಮಂದಿರದ ಅಡಿಪಾಯಕ್ಕಾಗಿ ತೆಗೆದ ಪವಿತ್ರ ಮಣ್ಣು) ವಿತರಿಸಲು ರಾಮಜನ್ಮ ಭೂಮಿ ತೀರ್ಥಕ್ಷೇತ್ರ ನಿರ್ಧರಿಸಿದೆ. ಮಂದಿರ ನಿರ್ಮಾಣದ ಸಮಯದಲ್ಲಿ ತೆಗೆದ ಈ ಪವಿತ್ರ ಮಣ್ಣನ್ನು ಟ್ರಸ್ಟ್‌ ಸಣ್ಣ ಪೊಟ್ಟಣಗಳಲ್ಲಿ ಪ್ಯಾಕ್‌ ಮಾಡಿಟ್ಟಿದೆ. ಭಕ್ತರು ಈ ಪವಿತ್ರ ಮಣ್ಣನ್ನು ಮನೆಗೆ ಕೊಂಡೊಯ್ಯಲು ಬಯಸಿದರೆ ಟ್ರಸ್ಟ್‌ ಕಚೇರಿಯಲ್ಲಿ ವಿಚಾರಿಸಬಹುದು. ಉಚಿತವಾಗಿ ರಾಮಭಕ್ತರಿಗೆ ಈ ಪವಿತ್ರ ಮಣ್ಣನ್ನು ನೀಡಲಾಗುತ್ತದೆ ಎಂದು ಟ್ರಸ್ಟ್‌ ಮಾಹಿತಿ ನೀಡಿದೆ. 'ಧಾರ್ಮಿಕ ಉದ್ದೇಶಗಳಿಗಾಗಿ ಮನೆಗೆ ಕೊಂಡೊಯ್ಯಲು ಈ ಪವಿತ್ರ ಮಣ್ಣು ಬೇಕೆಂದು ಸಾಕಷ್ಟು ಭಕ್ತರು ಬೇಡಿಕೆ ಇಟ್ಟಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ' ಎಂದು ಟ್ರಸ್ಟ್‌ ಕಚೇರಿಯ ಆಫೀಸ್‌ ಇನ್‌ಚಾರ್ಚ್‌ ಆಗಿರುವ ಶ್ರೀಪ್ರಕಾಶ್‌ ಗುಪ್ತಾ ಹೇಳಿದ್ದಾರೆ. ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಮಾಡಲು ಅಡಿಪಾಯಕ್ಕಾಗಿ 2.77 ಎಕರೆ ಭೂಮಿಯನ್ನು ಅಗೆದ ಸಂದರ್ಭದಲ್ಲಿ ನೂರಾರು ಟನ್‌ಗಳಷ್ಟು ಮಣ್ಣನ್ನು ಹೊರತೆಗೆಯಲಾಗಿದೆ. ಈ ಪವಿತ್ರ ಮಣ್ಣನ್ನು ವ್ಯರ್ಥ ಮಾಡುವ ಬದಲು ಭವಿಷ್ಯದಲ್ಲಿ ರಾಮ ಭಕ್ತರಿಗೆ ಪೂಜಿಸಲು ಅನುವಾಗುವಂತೆ ಟ್ರಸ್ಟ್‌ ಸಂಗ್ರಹಿಸಿಟ್ಟಿದೆ. 'ರಾಮ್‌ ರಜ್‌ಕರಣ್‌ ಎನ್ನುವುದು ರಾಮಜನ್ಮ ಭೂಮಿಗಾಗಿ ಪ್ರಾಣವನ್ನು ಅರ್ಪಿಸಿದ ನೂರಾರು ಜನರ ನೆನಪು, ರಾಮಜನ್ಮ ಭೂಮಿ ವಿಮೋಚನಾ ಹೋರಾಟದಲ್ಲಿ ಪಾಲ್ಗೊಂಡ ಹಲವು ಮಿಲಿಯನ್‌ ಭಕ್ತರ ಮತ್ತು ಅಯೋಧ್ಯೆಯಲ್ಲಿ ಭವ್ಯ ಮತ್ತು ದಿವ್ಯ ನಿರ್ಮಾಣಕ್ಕೆ ದೇಣಿಗೆ ನೀಡುವ ಕೋಟಿ ಕೋಟಿ ಜನರ ಸೂಚಕವಾಗಿದೆ. ಶ್ರೀರಾಮಚಂದ್ರನು ಜನಿಸಿದ ಸ್ಥಳದ ಈ ಮಣ್ಣು ಅತ್ಯಂತ ಪವಿತ್ರವಾಗಿದ್ದು, ಭಕ್ತರು ತಮ್ಮ ಮನೆಯಲ್ಲಿಇಟ್ಟುಕೊಂಡು ಪೂಜಿಸಬಹುದಾಗಿದೆ' ಎಂದು ಅವರು ವಿವರಿಸಿದ್ದಾರೆ. 22 ಕೋಟಿ ಮೌಲ್ಯದ ಚೆಕ್‌ ಬೌನ್ಸ್‌: ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡಿದ ಭಕ್ತರ 15 ಸಾವಿರದಷ್ಟು ಚೆಕ್‌ಗಳು ಬೌನ್ಸ್‌ ಆಗಿದ್ದು, ಸುಮಾರು 22 ಕೋಟಿ ರೂಪಾಯಿ ಬ್ಯಾಂಕ್‌ಗಳಲ್ಲಿಯೇ ಉಳಿದಿವೆ. ಕೆಲವು ಚೆಕ್‌ಗಳಲ್ಲಿಅಂಕೆ ಮತ್ತು ಅಕ್ಷರಗಳಲ್ಲಿ ಬರೆದ ಮೊತ್ತ ಹೋಲಿಕೆಯಾಗಿಲ್ಲ. ಇನ್ನು ಕೆಲವು ಚೆಕ್‌ಗಳ ಮೇಲೆ ಬರೆದಿರುವ ಮಾಹಿತಿಯಲ್ಲಿ ಬ್ಯಾಂಕ್‌ ಖಾತೆ ಸಂಖ್ಯೆ ಇತ್ಯಾದಿ ದೋಷಗಳಿದ್ದ ಕಾರಣ ಬೌನ್ಸ್‌ ಆಗಿವೆ. ಕೆಲವು ಖಾತೆಗಳಲ್ಲಿ ಸಾಕಷ್ಟು ಮೊತ್ತ ಇಲ್ಲದೆ ಇರುವುದರಿಂದ ಬೌನ್ಸ್‌ ಆಗಿವೆ. ಕೆಲವು ಬ್ಯಾಂಕ್‌ಗಳು ಇಂತಹ ಚೆಕ್‌ಗಳನ್ನು ಖಾತೆದಾರರಿಗೆ ವಾಪಸ್‌ ಮಾಡಿ, ಹೊಸ ಚೆಕ್‌ ನೀಡುವಂತೆ ಕೋರುವ ಪ್ರಕ್ರಿಯೆ ಆರಂಭಿಸಿವೆ.