ಏಕಕಾಲದಲ್ಲಿ ಸ್ಥಗಿತಗೊಂಡ ಫೇಸ್‌ಬುಕ್‌, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಮ್!

ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಫೇಸ್‌ಬುಕ್ ಮೆಸೇಂಜರ್ ಬಳಕೆದಾರರಿಗೆ ಪ್ರಸ್ತುತ ಆಂಡ್ರಾಯ್ಡ್, ಐಒಎಸ್ ಹಾಗೂ ಪಿಸಿಯಲ್ಲಿನ ಆ್ಯಪ್ ಬಳಸಲು ಸಮಸ್ಯೆ ಎದುರಾಗಿದೆ. ಈ ಕುರಿತು ಗ್ರಾಹಕರು ಸಮಸ್ಯೆಗಳನ್ನು ವರದಿ ಮಾಡುತ್ತಿದ್ದಾರೆ.

ಏಕಕಾಲದಲ್ಲಿ ಸ್ಥಗಿತಗೊಂಡ ಫೇಸ್‌ಬುಕ್‌, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಮ್!
Linkup
ಹೊಸದಿಲ್ಲಿ: ವಾಟ್ಸ್‌ಆ್ಯಪ್, , ಮತ್ತು ಫೇಸ್‌ಬುಕ್ ಮೆಸೇಂಜರ್ ಬಳಕೆದಾರರಿಗೆ ಪ್ರಸ್ತುತ ಆಂಡ್ರಾಯ್ಡ್, ಐಒಎಸ್ ಹಾಗೂ ಪಿಸಿಯಲ್ಲಿನ ಆ್ಯಪ್ ಬಳಸಲು ಸಮಸ್ಯೆ ಎದುರಾಗಿದೆ. ಈ ಕುರಿತು ಗ್ರಾಹಕರು ಸಮಸ್ಯೆಗಳನ್ನು ವರದಿ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಬಳಕೆದಾರರು ತಮ್ಮ ವಾಲ್‌ನಲ್ಲಿ ಹೊಸ ಪೋಸ್ಟ್‌ ಅನ್ನು ಅಪ್‌ಡೇಟ್ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ವಾಟ್ಸಾಪ್ ಬಳಕೆದಾರರಿಗೆ ಯಾವುದೇ ಸಂದೇಶ ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಫೇಸ್ಬುಕ್‌ ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಪ್ರತಿಕ್ರಿಯಿಸಿದೆ. ಕೆಲವು ಗ್ರಾಹಕರಿಗೆ ನಮ್ಮ ಉತ್ಪನ್ನಗಳ ಬಳಕೆಯಲ್ಲಿ ತೊಂದರೆಯಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ಶೀಘ್ರವೇ ಸರಿಪಡಿಸುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಅಲ್ಲದೆ ಈ ಅಡಚಣೆಗಾಗಿ ನಾವು ಕ್ಷಮೆ ಕೋರುತ್ತೇವೆ ಎಂದು ಟ್ವಿಟ್ಟರ್‌ನಲ್ಲಿ ತಿಳಿಸಿದೆ. ವಾಟ್ಸಪ್‌ ಕೂಡ ಇದೇ ರೀತಿಯಾಗಿ ಟ್ವೀಟ್‌ ಮಾಡಿದೆ. ಕೆಲವೇ ನಿಮಿಷಗಳಲ್ಲಿ 11,800 ಮಂದಿ ವಾಟ್ಸಪ್‌ ಬಳಕೆದಾರರು ಸಮಸ್ಯೆಯನ್ನು ರಿಪೋರ್ಟ್‌ ಮಾಡಿದ್ದಾರೆ. ಬಳಕೆದಾರರಿಗೆ ಯಾವುದೇ ಸಂದೇಶಗಳನ್ನು ಕಳುಹಿಸಲು ಹಾಗೂ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಪುಟದಲ್ಲಿ ಹೊಸ ಫೀಡ್‌ಗಳನ್ನು ಅಪ್ಡೇಟ್‌ ಮಾಡಲು ಆಗುತ್ತಿಲ್ಲ. ಈ ಮೂರು ಅಪ್ಲಿಕೇಶನ್‌ಗಳು ಫೇಸ್‌ಬುಕ್ ಒಡೆತನದಲ್ಲಿವೆ. ಈ ಮೂರೂ ಆಪ್ಗಳಲ್ಲಿ ಒಂದೇ ಬಾರಿಗೆ ಸಮಸ್ಯೆ ಕಾಣಿಸಿಕೊಂಡಿದೆ. ಕಂಪನಿಯು ಸಾಮಾನ್ಯವಾಗಿ ಯಾವುದೇ ಸಮಸ್ಯೆಗಳ ಹಿಂದಿನ ಕಾರಣಗಳನ್ನು ರಹಸ್ಯವಾಗಿಡುತ್ತದೆ. ಅಲ್ಲಿ ಸಮಸ್ಯೆಯನ್ನು ಸರಿಪಡಿಸಿದ ನಂತರವೂ ವಿವರಿಸಲು ಒಲವು ತೋರುವುದಿಲ್ಲ. ಉದಾಹರಣೆಗೆ, 2019 ರಲ್ಲಿ ಅತಿದೊಡ್ಡ ಸ್ಥಗಿತವನ್ನು ಅನುಭವಿಸಿತ್ತು. ಈ ಸಮಯದಲ್ಲಿ "ದಿನನಿತ್ಯದ ನಿರ್ವಹಣೆ ಮತ್ತು ಕಾರ್ಯಾಚರಣೆಗಳ" ಸಮಯದಲ್ಲಿ "ಸಮಸ್ಯೆ ಉಂಟುಮಾಡಿದೆ" ಎಂದಷ್ಟೇ ಹೇಳಿತ್ತು. ಇದೀಗ ಮತ್ತೆ ಸಮಸ್ಯೆ ಎದುರಾಗಿದೆ.