ಬೇರೆ ಬೇರೆ ಕೊರೊನಾ ಲಸಿಕೆ ಡೋಸ್‌ಗಳ ಮಿಶ್ರಣದ ಬಗ್ಗೆ ಕೇಂದ್ರದಿಂದ ಶೀಘ್ರದಲ್ಲಿ ಅಧ್ಯಯನ

ಒಂದೊಮ್ಮೆ ಲಸಿಕೆಗಳ ಡೋಸ್‌ಗಳನ್ನು ಮಿಶ್ರಣ ಮಾಡಿದರೆ ಸುರಕ್ಷತೆ, ಪರಿಣಾಮಿಕಾರಿತ್ವ, ಪ್ರತಿರಕ್ಷಣಾ ಪ್ರತಿಕ್ರಿಯೆಗಳು ಏನಾಗಲಿವೆ ಎಂಬುದರ ಬಗ್ಗೆ ಸರಕಾರ ಅಧ್ಯಯನ ನಡೆಸಲಿದ್ದು, ಕೊವ್ಯಾಕ್ಸಿನ್‌, ಕೋವಿಶೀಲ್ಡ್‌, ಸ್ಪುಟ್ನಿಕ್‌-ವಿ ಲಸಿಕೆಗಳ ಮೇಲೆ ಈ ಅಧ್ಯಯನ ನಡೆಯಲಿದೆ.

ಬೇರೆ ಬೇರೆ ಕೊರೊನಾ ಲಸಿಕೆ ಡೋಸ್‌ಗಳ ಮಿಶ್ರಣದ ಬಗ್ಗೆ ಕೇಂದ್ರದಿಂದ ಶೀಘ್ರದಲ್ಲಿ ಅಧ್ಯಯನ
Linkup
ಹೊಸದಿಲ್ಲಿ: ಮೊದಲ ಡೋಸ್‌ ತೆಗೆದುಕೊಂಡು, ಎರಡನೇ ಡೋಸ್‌ ತೆಗೆದುಕೊಂಡರೆ ಏನಾಗುತ್ತದೆ? ಸ್ಪುಟ್ನಿಕ್‌-ವಿ ತೆಗೆದುಕೊಳ್ಳಬಹುದಾ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸರಕಾರ ನಿರ್ಧರಿಸಿದೆ. ಒಂದೊಮ್ಮೆ ಹೀಗೆ ಲಸಿಕೆಗಳನ್ನು ಮಿಶ್ರಣ ಮಾಡಿದರೆ ಸುರಕ್ಷತೆ, ಪರಿಣಾಮಿಕಾರಿತ್ವ, ಪ್ರತಿರಕ್ಷಣಾ ಪ್ರತಿಕ್ರಿಯೆಗಳು ಏನಾಗಲಿವೆ ಎಂಬುದರ ಬಗ್ಗೆ ಸರಕಾರ ಅಧ್ಯಯನ ನಡೆಸಲಿದೆ. ಸದ್ಯಕ್ಕೆ ಕೊವ್ಯಾಕ್ಸಿನ್‌, ಕೋವಿಶೀಲ್ಡ್‌, ಸ್ಪುಟ್ನಿಕ್‌-ವಿ ಲಸಿಕೆಗಳ ಬಗ್ಗೆ ಈ ಅಧ್ಯಯನ ನಡೆಯಲಿದೆ. ಕಾರಣ ಈ ಮೂರು ಲಸಿಕೆಗಳ ತುರ್ತು ಬಳಕೆಗೆ ಮಾತ್ರ ದೇಶದಲ್ಲಿ ಅನುಮತಿ ಸಿಕ್ಕಿದೆ. ಈಗಾಗಲೇ ಬ್ರಿಟನ್‌ ಮತ್ತು ಸ್ಪೇನ್‌ನಲ್ಲಿ ಈ ಸಂಬಂಧ ಅಧ್ಯಯನಗಳು ನಡೆದಿವೆ. ಈ ಅಧ್ಯಯನಗಳಲ್ಲಿ ಫೈಜರ್‌ ಮತ್ತು ಆಸ್ಟ್ರಾಝೆನಿಕಾದ (ಕೋವಿಶೀಲ್ಡ್‌) ಲಸಿಕೆಗಳನ್ನು ಮಿಶ್ರಣ ಮಾಡಿದಾಗ ಸುರಕ್ಷಿತ ಮತ್ತು ಪ್ರತಿರಕ್ಷಣಾ ಪ್ರತಿಕ್ರಿಯೆಗಳು ಸರಿಯಾಗಿವೆ ಎಂಬುದನ್ನು ಕಂಡುಕೊಳ್ಳಲಾಗಿದೆ. ವೈಜ್ಞಾನಿಕವಾಗಿ ಇದು ಸಾಧ್ಯವಾದರೂ, ಸಾಕಷ್ಟು ಅಧ್ಯಯನ ಇಲ್ಲದೆ ಇದಕ್ಕೆ ಅವಕಾಶ ನೀಡದೇ ಇರಲು ಭಾರತದ ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದಕ್ಕಾಗಿ ಅಧ್ಯಯನ ನಡೆಸಬೇಕಾಗಿದೆ. "ಇದು ವೈಜ್ಞಾನಿಕವಾಗಿ ಸಾಧ್ಯ ಮತ್ತು ಇದು ಒಳ್ಳೆಯದು. ವಿಶೇಷವಾಗಿ ನಮ್ಮಂತಹ ದೇಶದಲ್ಲಿ, ಇಂಥಹ ವಿಷಯ (ಲಸಿಕೆಗಳ ಡೋಸ್‌ಗಳ ಮಿಶ್ರಣ) ಲಸಿಕೆ ಅಭಿಯಾನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ವ್ಯಾಕ್ಸಿನೇಷನ್ ಪ್ರೋಟೋಕಾಲ್ ಅಡಿಯಲ್ಲಿ ಪ್ರಸ್ತುತ ಇದನ್ನು ಅನುಮತಿಸಲಾಗುವುದಿಲ್ಲ ಮತ್ತು ಪ್ರಯೋಗಗಳ ಮೂಲಕ ಸಾಕಷ್ಟು ಪುರಾವೆಗಳಿಲ್ಲದೆ ಅದಕ್ಕೆ ಅನುಮತಿ ನೀಡುವ ಪ್ರಶ್ನೆಯೇ ಇಲ್ಲ. ಆದ್ದರಿಂದ, ನಾವು ಇದನ್ನು ಪರೀಕ್ಷಿಸಲು ಅಧ್ಯಯನಗಳನ್ನು ಮಾಡಲು ನಿರ್ಧರಿಸಿದ್ದೇವೆ," ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದಕ್ಕೆ ರಾಷ್ಟ್ರೀಯ ಇಮ್ಯುನೈಸೇಷನ್‌ ತಾಂತ್ರಿಕ ಸಲಹಾ ಸಮಿತಿಯೂ ಬೆಂಬಲಿಸಿದ್ದು, ಸದ್ಯದಲ್ಲೇ ಈ ಅಧ್ಯಯನ ಆರಂಭವಾಗಲಿದೆ. ಸುಮಾರು 2 ತಿಂಗಳ ಕಾಲ ಈ ಅಧ್ಯಯನ ನಡೆಯಲಿದೆ. ಲಸಿಕೆ ಉತ್ಪಾದಕರ ಜತೆ ಸೇರಿ ಸರಕಾರ ಈ ಅಧ್ಯಯನ ನಡೆಸಲಿದೆ. ಈ ರೀತಿ ಡೋಸ್‌ಗಳನ್ನು ಮಿಕ್ಸ್‌ ಮಾಡುವುದರಿಂದ ಸುರಕ್ಷತೆಗೆ ಏನೂ ಅಪಾಯವಾಗಲಿಕ್ಕಿಲ್ಲ ಮತ್ತು ಪರಿಣಾಮಕಾರಿ ಎಂಬುದನ್ನು ಪತ್ತೆ ಹಚ್ಚುವುದರ ಜತೆಗೆ, ಇದರಿಂದ ಹೆಚ್ಚಿನ ಲಾಭವಿದೆಯೇ ಎಂಬುದನ್ನೂ ಅಧ್ಯಯನ ಕಂಡುಕೊಳ್ಳಲಿದೆ.