ಅತ್ಯಾಚಾರ ಸಂತ್ರಸ್ತೆಯ ವಿವರ ಬಹಿರಂಗ; ರಾಹುಲ್‌ ಗಾಂಧಿಗೆ ಕೋರ್ಟ್‌ ವಿಚಾರಣೆಯ ಬಿಸಿ

ಅತ್ಯಾಚಾರಕ್ಕೆ ಒಳಗಾದ ಮಹಿಳೆಯರ ಯಾವುದೇ ವಿವರಗಳನ್ನು ಬಹಿರಂಗಪಡಿಸಬಾರದು ಎಂದು ಸುಪ್ರೀಂ ಕೋರ್ಟ್‌ ಆದೇಶ ಮಾಡಿದೆ. ಇದರ ಹೊರತಾಗಿಯೂ ರಾಹುಲ್‌ ಗಾಂಧಿ ಆಗಸ್ಟ್‌ 1ರಂದು ನಡೆದ ದಿಲ್ಲಿ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿ, ಭೇಟಿ ಸಂದರ್ಭದ ಚಿತ್ರಗಳನ್ನು ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದರು.

ಅತ್ಯಾಚಾರ ಸಂತ್ರಸ್ತೆಯ ವಿವರ ಬಹಿರಂಗ; ರಾಹುಲ್‌ ಗಾಂಧಿಗೆ ಕೋರ್ಟ್‌ ವಿಚಾರಣೆಯ ಬಿಸಿ
Linkup
ಹೊಸದಿಲ್ಲಿ: ದಕ್ಷಿಣ ದಿಲ್ಲಿಯಲ್ಲಿ ನಡೆದ 9 ವರ್ಷದ ದಲಿತ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಕುಟುಂಬದ ಫೋಟೊ ಸಮೇತ ಹೆಸರು ವಿವರಗಳನ್ನು ಬಹಿರಂಗ ಪಡಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಕೋರ್ಟ್‌ ವಿಚಾರಣೆಯ ಸಂಕಷ್ಟ ಎದುರಾಗಿದೆ. ಅತ್ಯಾಚಾರಕ್ಕೆ ಒಳಗಾದ ಮಹಿಳೆಯರ ಯಾವುದೇ ವಿವರಗಳನ್ನು ಬಹಿರಂಗಪಡಿಸಬಾರದು ಎಂದು ಸುಪ್ರೀಂ ಕೋರ್ಟ್‌ ಆದೇಶ ಮಾಡಿದೆ. ಇದರ ಹೊರತಾಗಿಯೂ ರಾಹುಲ್‌ ಗಾಂಧಿ ಆಗಸ್ಟ್‌ 1ರಂದು ನಡೆದ ದಿಲ್ಲಿ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿ, ಭೇಟಿ ಸಂದರ್ಭದ ಚಿತ್ರಗಳನ್ನು ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಅವರ ವಿರುದ್ಧ ಅಂದೇ ಎಫ್‌ಐಆರ್‌ ದಾಖಲಾಗಿತ್ತು. ಮಕರಂದ್‌ ಸುರೇಶ್‌ ಎಂಬುವವರು ದಾಖಲಿಸಿದ್ದ ಪಿಐಎಲ್‌ ಮೇಲೆ ರಾಹುಲ್‌ಗೆ ನೋಟಿಸ್‌ ನೀಡಲು ನಿರಾಕರಿಸಿದ ನ್ಯಾಯಮೂರ್ತಿಗಳಾದ ಡಿ.ಎನ್‌.ಪಟೇಲ್‌ ಮತ್ತು ಜ್ಯೋತಿ ಸಿಂಗ್‌ ಅವರನ್ನು ಒಳಗೊಂಡ ದಿಲ್ಲಿ ಹೈಕೋರ್ಟ್‌ ಪೀಠ ನಿರಾಕರಿಸಿತು. ಮುಂದಿನ ವಿಚಾರಣೆ ಸೆ.27ರಂದು ನಡೆಯಲಿದೆ. ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್‌ ಪರ ಸ್ಪಷ್ಟನೆ ನೀಡಿದ ಹಿರಿಯ ವಕೀಲ ಸಾಜನ್‌ ಸಿಂಗ್‌, ಪ್ರಕರಣ ಕುರಿತು ರಾಹುಲ್‌ ನೀಡಿದ್ದ ಎಲ್ಲಾ ವಿವರಗಳನ್ನು ಡಿಲಿಟ್‌ ಮಾಡಿ, ಅವರ ಖಾತೆಯನ್ನು ಲಾಕ್‌ ಮಾಡಿರುವುದಾಗಿ ತಿಳಿಸಿದರು.