ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯ ಪ್ರದೇಶದಲ್ಲಿ ಸಿಡಿಲ ಅಬ್ಬರಕ್ಕೆ 75 ಮಂದಿ ಬಲಿ

ಉತ್ತರ ಪ್ರದೇಶದಲ್ಲಿ 41, ರಾಜಸ್ಥಾನದಲ್ಲಿ 23 ಹಾಗೂ ಮಧ್ಯಪ್ರದೇಶದಲ್ಲಿ 11 ಮಂದಿ ಸಿಡಿಲಿಗೆ ಬಲಿಯಾಗಿದ್ದು, ಉತ್ತರ ಪ್ರದೇಶದ ಪ್ರಯಾಗರಾಜ್‌ ಜಿಲ್ಲೆಯೊಂದರಲ್ಲೇ 14 ಜನ ಪ್ರಾಣ ಕಳೆದುಕೊಂಡಿದ್ದಾರೆ. ರಾಜಸ್ಥಾನದ ಜೈಪುರದಲ್ಲಿರುವ ಆ್ಯಂಬರ್‌ ಕೋಟೆ ಬಳಿ ಸೆಲ್ಫಿ ತೆಗೆಯುವ ವೇಳೆ ಸಿಡಿಲು ಬಡಿದು 11 ಜನ ಬಲಿಯಾಗಿದ್ದಾರೆ.

ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯ ಪ್ರದೇಶದಲ್ಲಿ ಸಿಡಿಲ ಅಬ್ಬರಕ್ಕೆ 75 ಮಂದಿ ಬಲಿ
Linkup
ಹೊಸದಿಲ್ಲಿ: ಉತ್ತರ ಭಾರತದಲ್ಲಿ ಸಿಡಿಲ ಅಬ್ಬರಕ್ಕೆ 75 ಮಂದಿ ಬಲಿಯಾಗಿದ್ದಾರೆ. , , ಮಧ್ಯಪ್ರದೇಶಗಳಲ್ಲಿ 24 ಗಂಟೆಗಳಲ್ಲಿ ಈ ದುರ್ಘಟನೆಗಳು ಸಂಭವಿಸಿವೆ. ಉತ್ತರ ಪ್ರದೇಶದಲ್ಲಿ 41, ರಾಜಸ್ಥಾನದಲ್ಲಿ 23 ಹಾಗೂ ಮಧ್ಯಪ್ರದೇಶದಲ್ಲಿ 11 ಮಂದಿ ಸಿಡಿಲಿಗೆ ಬಲಿಯಾಗಿದ್ದಾರೆ. ಉತ್ತರ ಪ್ರದೇಶದ ಪ್ರಯಾಗರಾಜ್‌ ಜಿಲ್ಲೆಯೊಂದರಲ್ಲೇ 14 ಜನ ಪ್ರಾಣ ಕಳೆದುಕೊಂಡಿದ್ದಾರೆ. ಕಾನ್ಪುರ, ಫತೇಪುರದಲ್ಲಿ ತಲಾ ಐವರು, ಕೌಶಂಬಿ ಮೂವರು, ಫಿರೋಜಾಬಾದ್‌ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಸುಮಾರು 30 ಜನ ಗಂಭೀರವಾಗಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ. ರಾಜಸ್ಥಾನದಲ್ಲಿಯೂ ಜೈಪುರ ಜಿಲ್ಲೆಯಲ್ಲಿ 11 ಮಂದಿ, ಕೋಟಾದಲ್ಲಿ ನಾಲ್ವರು, ಧೋಲ್‌ಪುರ ಮೂವರು ಸೇರಿ 23 ಮಂದಿ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಮೃತರಲ್ಲಿ ಏಳು ಮಕ್ಕಳು ಎಂದು ತಿಳಿದುಬಂದಿದೆ. ಮಧ್ಯ ಪ್ರದೇಶದ ಗ್ವಾಲಿಯರ್‌ ಹಾಗೂ ಶಿವಪುರ ಜಿಲ್ಲೆಯಲ್ಲಿ ತಲಾ ಇಬ್ಬರು, ಶಿವಪುರಿ, ಅನ್ನುಪುರ ಹಾಗೂ ಬೇತುಲ್‌ ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಮೂರೂ ರಾಜ್ಯದಲ್ಲಿ ವಿಪತ್ತು ನಿರ್ವಹಣೆ ಪಡೆಯು ಬಿರುಸಿನ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಮೋದಿ ಪರಿಹಾರ ಘೋಷಣೆ ಬಡಿದು ಮೃತಪಟ್ಟವರ ಕುಟುಂಬಸ್ಥರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಲಾ ಎರಡು ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. "ಸಿಡಿಲು ಬಡಿದು ಜನ ಮೃತಪಟ್ಟಿರುವ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ," ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಸಹ ಮೃತರ ಕುಟುಂಬಸ್ಥರಿಗೆ ತಲಾ ಐದು ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಮೃತರ ಕುಟುಂಬಸ್ಥರಿಗೆ ತಲಾ ನಾಲ್ಕು ಲಕ್ಷ ರೂ. ಪರಿಹಾರ ನೀಡುವುದಾಗಿ ಸರಕಾರ ತಿಳಿಸಿದೆ. ಜೈಪುರದಲ್ಲಿ ಸೆಲ್ಫಿ ತೆಗೆಯುವ ವೇಳೆ ಸಿಡಿಲಿನಿಂದ 11 ಸಾವು ರಾಜಸ್ಥಾನದ ಜೈಪುರದಲ್ಲಿರುವ ಆ್ಯಂಬರ್‌ ಕೋಟೆ ಬಳಿ ಸೆಲ್ಫಿ ತೆಗೆಯುವ ವೇಳೆ ಸಿಡಿಲು ಬಡಿದು 11 ಜನ ಬಲಿಯಾಗಿದ್ದಾರೆ. ಮಳೆ ಸುರಿಯುವ ವೇಳೆ ಕೋಟೆ ಎದುರಿರುವ ವಾಚ್‌ ಟವರ್‌ ಮೇಲೆ 27 ಜನ ಹತ್ತಿ ಸೆಲ್ಫಿ ತೆಗೆಯುವ ವೇಳೆ ಸಿಡಿಲು ಬಡಿದಿದೆ. ಒಂದಷ್ಟು ಜನ ಟವರ್‌ ಮೇಲಿಂದ ಜಿಗಿದಿದ್ದು, ಹಲವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಭಾರತದಲ್ಲಿ ಮಾರಣಾಂತಿಕ ಮೋಡಗಳು ಮತ್ತು ಭೂಮಿಯ ನಡುವಿನ ಅಸಮತೋಲನದಿಂದ ಅಂದರೆ ಮೋಡಗಳಲ್ಲಿ ಋುಣಾತ್ಮಕ ಮತ್ತು ನೆಲದಲ್ಲಿ ಧನಾತ್ಮಕ ವಿದ್ಯುತ್‌ ಅಲೆಗಳ ಪ್ರವಾಹದಿಂದ ಸಿಡಿಲು ಉಂಟಾಗುತ್ತದೆ. ಸಿಡಿಲಿನ ತೀವ್ರತೆಯು 10 ಕೋಟಿಯಿಂದ 100 ಕೋಟಿ ವೋಲ್ಟ್ಸ್‌ನಷ್ಟು ಸಾಮರ್ಥ್ಯ ಹೊಂದಿರುತ್ತದೆ. ಅಲ್ಲದೆ, ಸಿಡಿಲು ಬಡಿದಾಗ ಅಕ್ಕಪಕ್ಕದ ಗಾಳಿಯ ಬಿಸಿ 10 ಸಾವಿರದಿಂದ 30 ಸಾವಿರ ಡಿಗ್ರಿ ಸೆಲ್ಶಿಯಸ್‌ವರೆಗೆ ಇರುತ್ತದೆ ಎಂದು ಅಮೆರಿಕದ ರಾಷ್ಟ್ರೀಯ ಹವಾಮಾನ ಸೇವೆ (ಎನ್‌ಡಬ್ಲ್ಯೂಎಸ್‌) ತಿಳಿಸಿದೆ. ನೇರವಾಗಿ ಬಡಿಯುವ ಸಿಡಿಲು ಮಾರಣಾಂತಿಕವಾದರೆ, ಮರದ ಕೆಳಗೆ ನಿಂತಾಗ ಪಕ್ಕದಿಂದ ಬಡಿಯುವ ಸಿಡಿಲಿನ ತೀವ್ರತೆ ಸಹ ಅಪಾಯಕಾರಿಯಾಗಿರುತ್ತದೆ. ಅಲ್ಲದೆ, ನೆಲದ ಮೇಲೆ ಅಥವಾ ಯಾವುದೇ ಬಯಲು ಪ್ರದೇಶದಲ್ಲಿ ನಿಂತಾಗ ಪಕ್ಕದಲ್ಲಿ ಸಿಡಿಲು ಬಡಿದರೆ ಅದರಿಂದ ಹೊರಹೊಮ್ಮುವ ಶಾಖವು ಸುತ್ತಮುತ್ತ ಆವರಿಸುತ್ತದೆ. ಇದರಿಂದಲೂ ಸಾವು ಸಂಭವಿಸುತ್ತದೆ ಎಂದು ಮಾಹಿತಿ ನೀಡಿದೆ. ಪ್ರತಿ ವರ್ಷ 2000 ಸಾವು ಭಾರತೀಯ ಹವಾಮಾನ ಇಲಾಖೆಯು 2018ರಿಂದ ದೇಶದಲ್ಲಿ 'ವಾರ್ಷಿಕ ಸಿಡಿಲು ವರದಿ' ಸಿದ್ಧಪಡಿಸುತ್ತಿದೆ. ಅದರಂತೆ ಪ್ರತಿವರ್ಷ ಜುಲೈ 25 ರಿಂದ 31ರ ಅವಧಿಯಲ್ಲಿ ಸಿಡಿಲು ಭಾರಿ ಸಂಖ್ಯೆಯಲ್ಲಿಜೀವಗಳನ್ನು ಬಲಿ ಪಡೆಯುತ್ತಿದ್ದು, ಈ ಅವಧಿಯಲ್ಲಿ ಸರಾಸರಿ 4 ಲಕ್ಷ ಶಕ್ತಿಶಾಲಿ ಮಿಂಚಿನ ಅಲೆಗಳು ಕಾಣಿಸಿಕೊಳ್ಳುತ್ತವೆ. ದೇಶಾದ್ಯಂತ 1968ರಿಂದ 2004ರ ಅವಧಿಯಲ್ಲಿ ವಾರ್ಷಿಕ ಸರಾಸರಿ ಎರಡು ಸಾವಿರ ಜನ ಸಿಡಿಲಿನಿಂದ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ)ದ ವರದಿಯೂ ತಿಳಿಸಿದೆ. ಸಿಡಿಲಿನಿಂದ ಎಷ್ಟು ಸಾವು? 2018 - 2,357 2019 - 2,876 2020 - 1,771 ಯಾವ ಆಘಾತದಿಂದ ಎಷ್ಟು ಸಾವು? ಪರೋಕ್ಷ ಹೊಡೆತ - 71% ನೇರ ಹೊಡೆತ - 25% ಪಕ್ಕದಲ್ಲಿಹೊಡೆತ - 04% ಎಲ್ಲಿಆಶ್ರಯ ಪಡೆದಾಗ ಎಷ್ಟು ಸಾವು? ಹೊಲದಲ್ಲಿ ಕೆಲಸ ಮಾಡುವಾಗ - 51% ಮರದ ಕೆಳಗೆ ಆಶ್ರಯ ಪಡೆದಾಗ - 37% ಗುಡಿಸಲುಗಳಲ್ಲಿ ಆಶ್ರಯ ಪಡೆದಾಗ - 12% ಸಿಡಿಲಿನಿಂದ ರಕ್ಷಣೆ ಪಡೆಯುವುದು ಹೇಗೆ? ಮಳೆ ಮತ್ತು ಸಿಡಿಲಿನಿಂದ ಪ್ರಾಣ ಹಾನಿ ತಡೆಯುವ ಕುರಿತು ಹವಾಮಾನ ಇಲಾಖೆ ನೀಡಿರುವ ಸಲಹೆಗಳು ಇಂತಿವೆ: 1. ಗುಡುಗು, ಸಿಡಿಲಿನ ಮುನ್ಸೂಚನೆ ಇದ್ದಾಗ ಮನೆಯಿಂದ ಹೊರಬರಬೇಡಿ. 2. ಮರದ ಕೆಳಗೆ ನಿಲ್ಲುವುದು, ಗುಡಿಸಲುಗಳಲ್ಲಿ ಆಶ್ರಯ ಪಡೆಯುವುದು ಅಪಾಯಕಾರಿ. ಗುಡುಗು, ಸಿಡಿಲಿನ ಸದ್ದು ಕೇಳಿಸುತ್ತಲೇ ಸಾಧ್ಯವಾದಷ್ಟು ಪಕ್ಕಾ ಮನೆಗಳಲ್ಲಿ ಆಶ್ರಯ ಪಡೆಯಿರಿ. 3. ಸಮೀಪದಲ್ಲಿ ಬಲವಾದ ಚಾವಣಿ ಹೊಂದಿರುವ ವಾಹನ ಇದ್ದರೂ ಅದರಲ್ಲಿ ಆಶ್ರಯ ಪಡೆಯಬಹುದು, ಆದರೆ ಕಿಟಕಿಗಳನ್ನು ಮುಚ್ಚಿಕೊಳ್ಳಬೇಕು. 4. ಒಮ್ಮೆ ಸಿಡಿಲಿನ ಸದ್ದು ಕೇಳಿದ ಬಳಿಕ 30 ನಿಮಿಷ ಹೊರಬರಬೇಡಿ. ಅರ್ಧ ಗಂಟೆ ಬಳಿಕವೂ ಗುಡುಗು, ಸಿಡಿಲಿನ ಸದ್ದು ಕೇಳದಿದ್ದರೆ ಮಾತ್ರ ಹೊರಬನ್ನಿ. 5. ನೀರಿನ ಸಮೀಪ ಇದ್ದರೆ, ಗುಡ್ಡದ ಮೇಲಿದ್ದರೆ ಗುಡುಗು, ಸಿಡಿಲಿನ ಸದ್ದು ಕೇಳಿದಾಕ್ಷಣ ಸುರಕ್ಷಿತ ಸ್ಥಳಗಳಿಗೆ ತೆರಳಿ 6. ಸಿಡಿಲ ಸದ್ದು ಕೇಳಿದರೆ ಬಡಿದರೆ ನೆಲದ ಮೇಲೆ ಬೋರಲಾಗಿ ಮಲಗಬೇಡಿ. ಎರಡೂ ಕಾಲುಗಳನ್ನು ಎರಡೂ ಕೈಗಳಿಂದ ಕಟ್ಟಿಕೊಂಡು, ಕಾಲುಗಳಿಂದ ಕಿವಿ ಮುಚ್ಚಿಕೊಂಡು, ತಲೆ ಕೆಳಗೆ ಮಾಡಿ ಕುಳಿತುಕೊಳ್ಳಿ.